newsfirstkannada.com

ಸಂತ್ರಸ್ತೆ ಕಿಡ್ನಾಪ್ ಕೇಸ್‌ಗೆ ಹೊಸ ಟ್ವಿಸ್ಟ್.. ಹೆಚ್‌.ಡಿ ರೇವಣ್ಣ ಆಪ್ತನ ತೋಟದ ಮನೆಯಲ್ಲಿ ಮಹಿಳೆ ಹೇಳಿದ್ದೇನು?

Share :

Published May 5, 2024 at 4:17pm

Update May 5, 2024 at 4:20pm

    ರೇವಣ್ಣ ಆಪ್ತ ಸಹಾಯಕ ರಾಜಗೋಪಾಲ್ ತೋಟದಲ್ಲಿದ್ದ ಸಂತ್ರಸ್ತೆ ರಕ್ಷಣೆ

    ತಾಲೂಕಿನ ಕಾಳೇಹಳ್ಳಿಯಲ್ಲಿರುವ ತೋಟಕ್ಕೆ ಬಂದ 40ಕ್ಕೂ ಹೆಚ್ಚು ಪೊಲೀಸರು

    ವಿಶಾಲ ತೆಂಗಿನ ತೋಟದಲ್ಲಿ ಶುಂಠಿ, ಕಾಡು ಬೆಳೆ ಬೆಳೆದಿರುವ ರಾಜಗೋಪಾಲ್

ಮೈಸೂರು: ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಮೇಲಿನ ಅಪಹರಣ ಪ್ರಕರಣದ ಸಂತ್ರಸ್ತ ಮಹಿಳೆಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಕಳೆದ 5 ದಿನಗಳಿಂದ ರೇವಣ್ಣನ ಆಪ್ತ ಸಹಾಯಕನ ತೋಟದ ಮನೆಯಲ್ಲಿ ಇದ್ದ ಮಹಿಳೆಯ ಬಗ್ಗೆ ರಾಜ್‌ಗೋಪಾಲ್ ಅವರ ತೋಟದ ಮನೆಯ ಕಾರ್ಮಿಕರು ಮಾಹಿತಿ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: EXCLUSIVE: ಪ್ರಜ್ವಲ್ ರೇವಣ್ಣ ಕೇಸ್‌ಗೆ ಭಯಾನಕ ಟ್ವಿಸ್ಟ್.. ವಿಡಿಯೋದಲ್ಲಿರುವ ಮಹಿಳಾ ಅಧಿಕಾರಿಗಳಿಗೆ ಟೆನ್ಷನ್!

ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಆಪ್ತ ರಾಜ್‌ಗೋಪಾಲ್‌ ತೋಟದ ಮನೆಯಲ್ಲಿ ಅಪಹರಣಕ್ಕೆ ಒಳಗಾದ ಸಂತ್ರಸ್ತೆ ಪತ್ತೆಯಾಗಿದ್ದಾಳೆ. ಹುಣಸೂರು ತಾಲೂಕಿನ ಕಾಳೇನಹಳ್ಳಿಯಲ್ಲಿ ತೋಟದಲ್ಲಿದ್ದ ಸಂತ್ರಸ್ತೆಯನ್ನು ಪೊಲೀಸ್​ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ತೋಟದ ಮನೆಗೆ ಕೆಲಸಗಾರನ ಬಳಿ ಮಹಿಳೆಯ ಬಗ್ಗೆ ಮಾತನಾಡಿಸಿದಾಗ ಹಲವಾರು ವಿಚಾರಗಳು ಬೆಳಕಿಗೆ ಬಂದಿವೆ. ಇನ್ನು ಈ ಕುರಿತು ಮಾತಾಡಿದ ಕಾರ್ಮಿಕ, 7 ವರ್ಷದಿಂದ ಕೆಲಸ ಮಾಡುತ್ತಿದ್ದೆ. ನಾನು ಆ ಮಹಿಳೆಯನ್ನು ಒಂದೇ ದಿನ ನೋಡಿದ್ದೆ. ಒಂದೂವರೆ ಲಕ್ಷ ರೂಪಾಯಿ ಸಾಲ ಆಗಿದೆ. ಆ ದುಡ್ಡನ್ನು ತೀರಿಸಬೇಕು ಅಂತ ಆ ಮಹಿಳೆ ಹೇಳಿದ್ದರು. ಆಗ ನಾನು ರಾಜ್‌ಗೋಪಾಲ್‌ ಅವರಿಗೆ ಸರ್​ ನೀವು ಏಕೆ ಅವರನ್ನು ಇಲ್ಲಿ ಇಟ್ಟುಕೊಂಡಿದ್ದೀರಿ? 500 ರೂಪಾಯಿ ಕೊಟ್ಟು ಕಳುಹಿಸಿ ಅಂತಾ ಹೇಳ್ದೆ. ಆದರೆ ಅವರು ನಿನಗೆ ಇದೆಲ್ಲಾ ಏಕೆ ಸುಮ್ಮನೆ ಇರು ಅಂತಾ ಹೇಳಿದ್ರು. ಮಹಿಳೆ ಮರದ ಕೆಳಗಡೆ ನಿಂತುಕೊಂಡಿದ್ದರು. ಆಗ ನಾನು ಅವರು ಅಲ್ಲೇ ನಿಂತುಕೊಂಡಿದ್ದಾರೆ ಅಂತಾ ಪೊಲೀಸರಿಗೆ ಹೇಳಿದೆ ಅಂತಾ ಹೇಳಿಕೊಂಡಿದ್ದಾರೆ.

ಸುಮಾರು 25 ಎಕರೆ ಪ್ರದೇಶದ ತೋಟದಲ್ಲಿ ಎರಡು ಕುಟುಂಬಗಳು ವಾಸ ಮಾಡುತ್ತಿವೆ. ತೋಟದ ಮನೆಯಲ್ಲಿ ಹಸು, ಕುರಿ ಹಾಗೂ ಕೋಳಿ ಸಾಕಾಣಿಕೆ ಮಾಡಲಾಗುತ್ತಿತ್ತು. ಹೆಚ್‌.ಡಿ ರೇವಣ್ಣ ಆಪ್ತ ರಾಜ್‌ಗೋಪಾಲ್‌ ಇರುವ  ತೋಟದಲ್ಲಿ ಶುಂಠಿ ಜೊತೆಗೆ ಕಾಡು ಬೆಳೆಗಳನ್ನು ಬೆಳೆಯುತ್ತಿದ್ದ. ಇನ್ನು, ತಡರಾತ್ರಿ 40ಕ್ಕೂ ಹೆಚ್ಚು ಪೊಲೀಸರು ಏಕಾಏಕಿ ದೌಡಾಯಿಸಿ ಅಪಹರಣ ಆಗಿದ್ದ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಸಂತ್ರಸ್ತೆ ಕಿಡ್ನಾಪ್ ಕೇಸ್‌ಗೆ ಹೊಸ ಟ್ವಿಸ್ಟ್.. ಹೆಚ್‌.ಡಿ ರೇವಣ್ಣ ಆಪ್ತನ ತೋಟದ ಮನೆಯಲ್ಲಿ ಮಹಿಳೆ ಹೇಳಿದ್ದೇನು?

https://newsfirstlive.com/wp-content/uploads/2024/05/hasan.jpg

Load More