newsfirstkannada.com

ಹೆಚ್‌.ಡಿ ರೇವಣ್ಣ ಮೊದಲ ದಿನದ SIT ವಿಚಾರಣೆ ಹೇಗಿತ್ತು? ಪಿನ್ ಟು ಪಿನ್ ಮಾಹಿತಿ ಇಲ್ಲಿದೆ ನೋಡಿ!

Share :

Published May 5, 2024 at 9:10pm

Update May 5, 2024 at 9:12pm

    ಎಸ್​ಐಟಿ ತಂಡದಿಂದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದ ರೇವಣ್ಣ

    ನನಗೂ, ಕೇಸ್​ಗೂ ಸಂಬಂಧ ಇಲ್ಲ ಎಂದಿರೋ ಹೆಚ್.​ಡಿ ರೇವಣ್ಣ

    ಹೆಚ್​.ಡಿ ರೇವಣ್ಣ ಮೊಬೈಲ್​ ವಶಕ್ಕೆ ಪಡೆದ ಎಸ್ಐಟಿ​ ಅಧಿಕಾರಿಗಳು

ಹಾಸನದ ಅಶ್ಲೀಲ ವಿಡಿಯೋ ಕೇಸ್​ ದೊಡ್ಡಗೌಡರ ಕುಟುಂಬಕ್ಕೆ ದೊಡ್ಡ ಪೆಟ್ಟು ನೀಡಿದೆ. ಮೊಮ್ಮಗ ದೇಶ ತೊರೆದಿದ್ರೆ, ಇತ್ತ ಮಗ ಅರೆಸ್ಟ್​ ಆಗಿದ್ದಾರೆ. ಸಂತ್ರಸ್ತೆಯ ಕಿಡ್ನ್ಯಾಪ್​ ಕೇಸ್​ನಲ್ಲಿ ರೇವಣ್ಣರನ್ನು ಎಸ್​ಐಟಿ ಅಧಿಕಾರಿಗಳು 4 ದಿನ ಕಸ್ಟಡಿಗೆ ಪಡೆದಿದ್ದಾರೆ. ಹೀಗಾಗಿ SIT ಅಧಿಕಾರಿಗಳು ಹೆಚ್​.ಡಿ ರೇವಣ್ಣ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ತಡರಾತ್ರಿಯೇ ರೇವಣ್ಣಗೆ ಎಸ್​ಐಟಿ ಅಧಿಕಾರಿಗಳು ಪ್ರಶ್ನೆಗಳ ಸುರಿಮಳೆಗೈದಿದ್ದು, ನನಗೂ ಇದಕ್ಕೂ ಸಂಬಂಧ ಇಲ್ಲ ಎಂದು ರೇವಣ್ಣ ಭಾವುಕರಾಗಿದ್ದಾರೆ.

ಇದನ್ನೂ ಓದಿ: 4 ದಿನ SIT ಕಸ್ಟಡಿಗೆ ಹೆಚ್‌.ಡಿ ರೇವಣ್ಣ; ಕಿಡ್ನ್ಯಾಪ್ ಮಹಿಳೆ ಹೇಳಿಕೆ ಮೇಲೆ ಭವಿಷ್ಯ ನಿರ್ಧಾರ; ಮುಂದೇನು?

ಕರ್ನಾಟಕದಲ್ಲಿ ಲೋಕಸಭಾ ಚುನಾವಣಾ ಕಾವಿಗಿಂತ ಹಾಸನ ಸಂಸದರಾದ ಪ್ರಜ್ವಲ್‌ ರೇವಣ್ಣ ಅವರ ಪೆನ್‌ ಡ್ರೈನ್‌ ಪ್ರಕರಣ ಹೆಚ್ಚು ಚರ್ಚೆಯಲ್ಲಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ ಪ್ರಕರಣದಲ್ಲಿ ಎಸ್​ಐಟಿ ಭರ್ಜರಿ ಬೇಟೆಯಾಡಿದೆ. ಎ1 ಆರೋಪಿ ಆಗಿರುವ ಹೆಚ್​ಡಿ ರೇವಣ್ಣರನ್ನು ಎಸ್​ಐಟಿ ಅರೆಸ್ಟ್​ ಮಾಡಿ, ತೀವ್ರ ವಿಚಾರಣೆಗೆ ಒಳ ಪಡಿಸಿದೆ.
ರಾತ್ರಿ ಇಡೀ ಎಸ್​ಐಟಿ ಕಚೇರಿಯಲ್ಲೇ ಇದ್ದ ಮಾಜಿ ಸಚಿವ ಹೆಚ್​.ಡಿ.ರೇವಣ್ಣರನ್ನು ಎಸ್​ಐಟಿ ಅಧಿಕಾರಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಾಜಿ ಸಚಿವ ರೇವಣ್ಣಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಈ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ ಎಂದು ರೇವಣ್ಣ ಉತ್ತರಿಸಿದ್ದಾರೆ.

ರೇವಣ್ಣಗೆ ಎಸ್​ಐಟಿ

ಎಸ್ಐಟಿ ಪ್ರಶ್ನೆ-1
ಪ್ರಕರಣದ ಬಗ್ಗೆ ಏನು ಹೇಳ್ತಿರಾ ಹೇಳಿ?
ರೇವಣ್ಣ ಉತ್ತರ : ನನಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ

ಎಸ್ಐಟಿ ಪ್ರಶ್ನೆ-2
ಸಂತ್ರಸ್ತ ಮಹಿಳೆ ನಿಮಗೆ ಗೊತ್ತಾ? ಎಷ್ಟು ವರ್ಷದಿಂದ ಪರಿಚಯ?
ರೇವಣ್ಣ ಉತ್ತರ : ಐದಾರು ವರ್ಷ ನಮ್ಮ ಬಳಿ ಕೆಲಸ ಮಾಡಿದ್ದರು

ಎಸ್ಐಟಿ ಪ್ರಶ್ನೆ-3
ಆಕೆಯನ್ನು ನೀವು ಕಿಡ್ನ್ಯಾಪ್ ಮಾಡಿಸಿದ್ರಾ? ಏಕೆ?
ರೇವಣ್ಣ ಉತ್ತರ : ನಾನು ಅಪರಹಣ ಮಾಡಿಸಿಲ್ಲ..

ಎಸ್ಐಟಿ ಪ್ರಶ್ನೆ-4
ಸಂತ್ರಸ್ತ ಮಹಿಳೆ ಎಲ್ಲಿದ್ದರು ಎಂದು ನಿಮಗೆ ಗೊತ್ತಾ?
ರೇವಣ್ಣ ಉತ್ತರ : ನನಗೆ ಅದು ಗೊತ್ತಿಲ್ಲ

ಎಸ್ಐಟಿ ಪ್ರಶ್ನೆ-5
ಅವರ ಮಗ ನೀವು ಕಿಡ್ನ್ಯಾಪ್ ಮಾಡಿಸಿದ ಆರೋಪ ಮಾಡಿದ್ದಾರೆ?
ರೇವಣ್ಣ ಉತ್ತರ : ಇದು ದುರುದ್ದೇಶದಿಂದ ಮಾಡಿರೋದು

ಎಸ್ಐಟಿ ಪ್ರಶ್ನೆ-6
ನಿಮ್ಮ ಮಗನ ವಿರುದ್ಧದ ಕೇಸ್ ಮುಚ್ಚಿಹಾಕಲು ಮಾಡಿದ್ರಾ?
ರೇವಣ್ಣ ಉತ್ತರ : ಮೌನ..

ಸಂತ್ರಸ್ತೆಯ ಕಿಡ್ನ್ಯಾಪ್​ ಪ್ರಕರಣದ ಬಗ್ಗೆ ಎಸ್​ಐಟಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಲ್ಲಿ ಕೆಲವೊಂದಕ್ಕೆ ಉತ್ತರ ನೀಡಿದ್ರೆ, ಇನ್ನೂ ಕೆಲ ಪ್ರಶ್ನೆಗಳಿಗೆ ಮೌನವಾಗಿದ್ದಾರೆ. ಎಸ್​ಐಟಿ ವಿಚಾರಣೆ ವೇಳೆ ಅಧಿಕಾರಿಗಳು ಸುತ್ತಲೂ ಕುಳಿತು ಪ್ರಶ್ನೆಗಳ ಕೇಳ್ತಿದ್ದಕ್ಕೆ ರೇವಣ್ಣ ನಲವತ್ತು ಐವತ್ತು ವರ್ಷದಿಂದ ಎಲ್ಲವನ್ನು ಎದುರಿಸಿದ್ದೇವೆ ಎಂದು ಭಾವುಕರಾಗಿದ್ರಂತೆ.

ರೇವಣ್ಣ ಮೊಬೈಲ್​ ವಶಕ್ಕೆ ಪಡೆದ ಎಸ್ಐಟಿ​

ಮಾಜಿ ಸಚಿವ ರೇವಣ್ಣ ಎಸ್​ಐಟಿ ಅಧಿಕಾರಿಗಳ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ನೀಡ್ತಿಲ್ಲ. ನನಗೇನು ಗೊತ್ತಿಲ್ಲ ಎಂದು ಉತ್ತರ ನೀಡಿದ್ದಾರೆ. ಹಾಗೂ ಕೆಲವೊಂದು ಪ್ರಶ್ನೆಗಳಲ್ಲಿ ಮೌನಕ್ಕೆ ಶರಣಾಗಿದ್ದಾರೆ ಹೀಗಾಗಿ, ರೇವಣ್ಣ ಅವರ ಮೊಬೈಲ್​ ಅನ್ನು ಸೀಜ್​ ಮಾಡಿರುವ ಎಸ್​ಐಟಿ ಅಧಿಕಾರಿಗಳು ಡೇಟಾ ಪರಿಶೀಲನೆಗೆ ಮುಂದಾಗಿದ್ದಾರೆ. ಕಿಡ್ನಾಪ್ ಕೇಸ್ ಆಗಿರೋದ್ರಿಂದ ಟೆಕ್ನಿಕಲ್ ಎವಿಡೆನ್ಸ್​ಗಾಗಿ ರೇವಣ್ಣ ಮೊಬೈಲ್ ಚಾಟಿಂಗ್, ಕಾಲ್ ಸಿಡಿಆರ್ ಪರಿಶೀಲನೆಗೆ ಮುಂದಾಗಿದ್ದಾರೆ. ಒಟ್ಟಾರೆ, ಕಿಡ್ನ್ಯಾಪ್​ ಕೇಸ್​ನಲ್ಲಿ ರೇವಣ್ಣರನ್ನು ಅರೆಸ್ಟ್​ ಮಾಡಿರುವ ಎಸ್​ಐಟಿ, ತೀವ್ರ ವಿಚಾರಣೆಗೆ ಒಳಪಡಿಸಿದೆ. ಇದೀಗ ಕಿಡ್ನ್ಯಾಪ್​ ಪ್ರಕರಣದ ಸಂತ್ರಸ್ತೆಯ ಹೇಳಿಕೆ ಆಧಾರದ ಮೇಲೆ ರೇವಣ್ಣ ಅವರ ಭವಿಷ್ಯ ನಿರ್ಧಾರವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಚ್‌.ಡಿ ರೇವಣ್ಣ ಮೊದಲ ದಿನದ SIT ವಿಚಾರಣೆ ಹೇಗಿತ್ತು? ಪಿನ್ ಟು ಪಿನ್ ಮಾಹಿತಿ ಇಲ್ಲಿದೆ ನೋಡಿ!

https://newsfirstlive.com/wp-content/uploads/2024/05/hd-revanna6.jpg

Load More