newsfirstkannada.com

×

ಸಂಡೂರಿನ ಗಣಿಗಾರಿಕೆಗೆ HDK ಅಂಕಿತ.. ಬಳ್ಳಾರಿ ಜನರಿಗೆ ಶುರುವಾಯ್ತು ಢವಢವ..! 

Share :

Published June 24, 2024 at 6:21am

Update June 24, 2024 at 6:41am

    ಉತ್ತರ ಕರ್ನಾಟಕದ ಆಕ್ಸಿಜನ್ ಬ್ಯಾಂಕ್ ಸಂಡೂರಿನಲ್ಲಿ ಗಣಿ ಗದ್ದಲ

    ಹಸಿರು ತಬ್ಬಿ ಮಲಗಿರುವ ಬೆಟ್ಟದ ಸಾಲಿಗೆ ಈಗ ಎದೆಬಗೆಯುವ ಆತಂಕ

    470.40 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆಗೆ ಕೇಂದ್ರ ಸಚಿವ ಹೆಚ್​​ಡಿಕೆ ಅಂಕಿತ

ಬೆಂಗಳೂರು: ದಶಕದ ಬಳಿಕ ರಾಜ್ಯದಲ್ಲಿ ಗಣಿಗಾರಿಕೆ ಗದ್ದಲ ಶುರುವಾಗಿದೆ. ಗಣಿಗಾರಿಕೆಗೆ ಸರ್ಕಾರಗಳೇ ಬಲಿ ಆಗಿವೆ. ಈಗ ಕೈಗಾರಿಕಾ ಸಚಿವರಾದ ಮೇಲೆ ಹೆಚ್​ಡಿಕೆ ಹಾಕಿದ ಅಂಕಿತವೊಂದು ಸಂಡೂರು ನಿದ್ರೆಯನ್ನೇ ಕದ್ದಿದೆ. ರಾಜ್ಯ ಸರ್ಕಾರವೂ ಅಪಸ್ವರ ಎತ್ತಿದೆ.

ಸಂಡೂರು.. ಉತ್ತರ ಕರ್ನಾಟಕದ ಆಕ್ಸಿಜನ್ ಬ್ಯಾಂಕ್. ಹಸಿರು ತಬ್ಬಿ ಮಲಗಿರುವ ಈ ಬೆಟ್ಟದ ಸಾಲಿಗೆ ಈಗ ಎದೆಬಗೆಯುವ ಆತಂಕ ಕಾಡ್ತಿದೆ. ಬೃಹತ್​​​ ಕೈಗಾರಿಕೆ ಜವಾಬ್ದಾರಿ ಹೊರುತ್ತಲೇ ಹೆಚ್​​.ಡಿ ಕುಮಾರಸ್ವಾಮಿ, ಪ್ರಕೃತಿಯ ನಿಧಿ ಹೊದ್ದ ಭೂತಾಯಿ ಒಡಲು ಕೊರೆಯುವ ಗಣಿಗಾರಿಕೆಗೆ ಚಾಲನೆ ನೀಡ್ತಿದ್ದಾರೆ. ಸಂಡೂರಿಗೆ ಮತ್ತೆ ಗಣಿ ವಿಸ್ತರಣೆ ಭೀತಿ ಶುರುವಾಗಿದ್ದು, ನಿಸರ್ಗದತ್ತ ಜೀವಾಮೃತವನ್ನ ಐಸಿಯುಗೆ ತಳ್ತಿದ್ದಾರೆ ಅನ್ನೋ ಭೀತಿ ಹಬ್ಬಿದೆ.

ಸಂಡೂರು ಬಿಸಿಲು ಸೀಮೆಯ ಮಲೆನಾಡು.. ಕಬ್ಬಿಣ ಅದಿರನ್ನು ತನ್ನ ಗರ್ಭದಲ್ಲಿ ತುಂಬಿ ಕೊಂಡಿರುವ ಬೆಟ್ಟ ಗುಡ್ಡಗಳು.. ಇದರ ಪಕ್ಕಕೆ ಹರಿಯುವ ನದಿ ಹಳ್ಳ ಕೊಳ್ಳಗಳ ನಿನಾದ.. ಇಷ್ಟೆಲ್ಲ ಪ್ರಕೃತಿ ಸೌಂದರ್ಯದ ಗಣಿಯೇ ಈ ಸಂಡೂರು.. ಆದ್ರೆ, ಇದೇ ಸಂಡೂರಿಗೆ ಈಗ ಗಣಿಗಾರಿಕೆ ಎಂಬ ಭೂತ ಬೆನ್ನೇರುವ ಆತಂಕ ಕಾಡ್ತಿದೆ.. ಆ ಆತಂಕಕ್ಕೆ ಕಾರಣ ಹತ್ತಾರು.

ಇದನ್ನೂ ಓದಿ: ‘ರೇಣುಕಾಸ್ವಾಮಿ ನನಗೂ ಆ ಫೋಟೋ ಕಳುಹಿಸಿದ್ದ’- ಸಾಕ್ಷಿ ಸಮೇತ ಶಾಕಿಂಗ್ ವಿಷ್ಯ ಬಿಚ್ಚಿಟ್ಟ ನಟಿ ಚಿತ್ರಾಲ್! 

ಸಂಡೂರು ಒಡಲಿನ ಅಳಲು!
ಬಳ್ಳಾರಿ ಜಿಲ್ಲೆ ಸಂಡೂರ ಭಾಗದ ಅರಣ್ಯ ಪ್ರದೇಶಕ್ಕೆ ಗಣಿ ಭೀತಿ
470.40 ಹೆಕ್ಟೆರ್​ ಪ್ರದೇಶದಲ್ಲಿ ಗಣಿಗಾರಿಕೆಗೆ ಹೆಚ್​​ಡಿಕೆ ಅಂಕಿತ
ಗಣಿಗಾರಿಕೆಯಿಂದ ‘1162.38 ಎಕರೆ ಪ್ರದೇಶದ ಅರಣ್ಯ’ ನಾಶ
ಸುಮಾರು ‘ಒಂದು ಲಕ್ಷ ಮರಗಳ ಮಾರಣ ಹೋಮ’ ಆಗಲಿದೆ
ಔಷಧೀಯ ಸಸ್ಯಕೋಟಿ, ಕೋಟ್ಯಾಂತರ ಬೆಲೆ ಮರಗಳ ನಾಶ
ಗಣಿಗಾರಿಕೆಗೆ ಐತಿಹಾಸಿಕ ಕುಮಾರಸ್ವಾಮಿ ಟೆಂಪಲ್‌ಗೂ ಹಾನಿ
ಪ್ರಾಣಿ ಸಂಕುಲ, ಸಸ್ಯ ಸಂಕುಲಕ್ಕೆ ಸಾಕಷ್ಟು ಹಾನಿಯ ಆತಂಕ
ಕರಡಿ, ಚಿರತೆ, ಜಿಂಕೆ, ನವಿಲು, ವನ್ಯಜೀವಿಗಳ ತಾಣಕ್ಕೂ ಕುತ್ತು
ಗಣಿಯಿಂದ ಭೂ ಸವಕಳಿ, ನೀರಿನ ಅಭದ್ರತೆ, ವಾಯುಮಾಲಿನ್ಯ
ಹತ್ತಾರು ಗ್ರಾಮಗಳ ನೆಲೆಗೆ ಹಾನಿಯಾಗುವ ಆತಂಕವೂ ಇದೆ

ಬಳ್ಳಾರಿ ಜಿಲ್ಲೆಯ ಸಂಡೂರ ತಾಲೂಕಿನ ಅರಣ್ಯ ಪ್ರದೇಶಕ್ಕೆ ಗಣಿ ಆತಂಕ ಶುರುವಾಗಿದೆ. 470.40 ಹೆಕ್ಟೇರ್ ಪ್ರದೇಶದಲ್ಲಿ ಹೊಸ ಗಣಿಗಾರಿಕೆಗೆ ಕೇಂದ್ರ ಸಚಿವ ಹೆಚ್​​ಡಿಕೆ ಅಂಕಿತ ಹಾಕಿದ್ದಾರೆ. ಗಣಿಗಾರಿಕೆ ಪ್ರಾರಂಭವಾದ್ರೆ 1162.38 ಎಕರೆ ಪ್ರದೇಶದ ಅರಣ್ಯ ಸಂಪೂರ್ಣ ನಾಶವಾಗುವ ಭೀತಿ ಕಾಡ್ತಿದೆ. ಸುಮಾರು 1 ಲಕ್ಷ ಮರಗಳ ಮಾರಣ ಹೋಮವೇ ಆಗಲಿದೆ.. ಔಷಧೀಯ ಗುಣವುಳ್ಳ ಸಸ್ಯಕೋಟಿ, ಕೋಟ್ಯಾಂತರ ರೂಪಾಯಿ ಬೆಲೆ ಬಾಳು ಮರಗಳು ನಾಶ ಆಗಲಿದೆ ಅನ್ನೋ ಆತಂಕ ಕಾಡ್ತಿದೆ.

ಗಣಿಗಾರಿಕೆಯಿಂದ ಐತಿಹಾಸಿಕ ಕುಮಾರಸ್ವಾಮಿ ಟೆಂಪಲ್‌ಗೂ ಹಾನಿಯಾಗುವ ಸಾಧ್ಯತೆ ಇದೆ. ಇದರ ಸೈಡ್​​ ಎಫೆಕ್ಟ್​​ ಪ್ರಾಣಿ ಸಂಕುಲ, ಸಸ್ಯ ಸಂಕುಲಕ್ಕೆ ಸಾಕಷ್ಟು ಹಾನಿ ಆಗಲಿದೆ.. ಕರಡಿ, ಚಿರತೆ, ಜಿಂಕೆ, ನವಿಲುಗಳ ಸೇರಿ ಹಲವು ವನ್ಯಜೀವಿಗಳ ಆಶ್ರಯ ನೆಲೆಯೇ ಇನ್ನಿಲ್ಲದಂತಾಗಲಿದೆ. ಗಣಿ ಪ್ರಾರಂಭವಾದ್ರೆ ಭೂ ಸವಕಳಿ, ನೀರಿನ ಅಭದ್ರತೆ, ವಾಯುಮಾಲಿನ್ಯ, ಹತ್ತಾರು ಗ್ರಾಮಗಳ ನೆಲೆಗೆ ಹಾನಿಯಾಗುವ ಆತಂಕ ಇದ್ದೇ ಇದೆ.

ಇದನ್ನೂ ಓದಿ: ದರ್ಶನ್​ ಸಂಸಾರದಲ್ಲಿ ಮೊದಲು ಹುಳಿ ಹಿಂಡಿದ್ದೇ ಆ ನಟಿ; ಸ್ಫೋಟಕ ಹೇಳಿಕೆ ನೀಡಿದ ನಿರ್ಮಾಪಕ ಓಂ ಪ್ರಕಾಶ್

ಇದೇ ವೇಳೆ ಗಣಿ ವಿಸ್ತರಣೆಗೆ ಅವಕಾಶ ಬೇಡ ಅನ್ನೋ ಅಭಿಯಾನವೂ ಶುರುವಾಗಿದೆ. ಈ ಬಗ್ಗೆ ಅರಣ್ಯ ಸಚಿವ ಈಶ್ವರ್​​ ಖಂಡ್ರೆ ಸಹ ಅಪಸ್ವರ ಎತ್ತಿದ್ದಾರೆ. ರಾಜ್ಯ ಸರ್ಕಾರದ ಪರ ಜನರಿಗೆ ಅಭಯ ನೀಡಿದ್ದಾರೆ. ಸಂಡೂರು ಭಾಗದಲ್ಲಿ ಹೊಸ ಗಣಿಗಾರಿಕೆ ಬೇಡ ಅನ್ನೋ ಕೂಗು ಹಬ್ಬಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಂಡೂರಿನ ಗಣಿಗಾರಿಕೆಗೆ HDK ಅಂಕಿತ.. ಬಳ್ಳಾರಿ ಜನರಿಗೆ ಶುರುವಾಯ್ತು ಢವಢವ..! 

https://newsfirstlive.com/wp-content/uploads/2024/04/HDK-Shivmogga.jpg

Load More