ಈತ ಸ್ವಂತ ವಿಮಾನಯಾನ ಸಂಸ್ಥೆಯನ್ನು ಹೊಂದಿದ್ದನು
ವಜ್ರದ ಗಣಿಯನ್ನೇ ಹೊಂದಿದ್ದರು, ಸರಳವಾದ ಬಟ್ಟೆ ಧರಿಸುತ್ತಿದ್ದನು
ಆ ಕಾಲದಲ್ಲಿ ಸುಮಾರು 1700 ಕೋಟಿ ರೂಪಾಯಿ ಆಸ್ತಿ ಎಂದರೆ ನಂಬ್ತೀರಾ?
ಪ್ರಸ್ತುತ ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಎಂದರೆ ಅದು ಮುಖೇಶ್ ಅಂಬಾನಿ. ಇವರ ಉದ್ಯಮ, ಮನೆ, ಕಾರು, ಆಸ್ತಿ ಬಗ್ಗೆ ಹೆಚ್ಚೇನು ಹೇಳಬೇಕಾಗಿಲ್ಲ. ಪ್ರತಿಯೊಬ್ಬರಿಗೂ ಇವರ ಹಿನ್ನಲೆ ಗೊತ್ತೇ ಇದೆ. ಆದರೆ ಭಾರತದ ಮೊದಲ ಕೋಟ್ಯಾಧಿಪತಿ ಯಾರು ಎಂಬ ಬಗ್ಗೆ ಗೊತ್ತಿದ್ಯಾ? ಆ ಕೋಟ್ಯಾಧಿಪತಿಯ ಬಳಿ ವಜ್ರದ ಗಣಿ, ರೋಲ್ಸ್ ರಾಯ್ಸ್ ಕಾರು ಇತ್ತು ಎಂದರೆ ನಂಬ್ತೀರಾ?. ಈ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಹೈದರಾಬಾದ್ನ ನಿಜಾಮ ಮೀರ್ ಒಸ್ಮಾನ್ ಅಲಿ ಖಾನ್ ಬಗ್ಗೆ ಗೊತ್ತಿದ್ಯಾ?. ಇವರೇ ಭಾರತದ ಮೊದಲ ಕೋಟ್ಯಾಧಿಪತಿಯಾಗಿ ಮೆರೆದವರು. 25ನೇ ವಯಸ್ಸಿಗೆ ಸಿಂಹಾಸನವೇರುವ ಮೂಲಕ ತಮ್ಮದೇ ರಾಜ್ಯಭಾರ ಮಾಡಿದ್ದರು.
230 ಬಿಲಿಯನ್ ಡಾಲರ್
ಹೈದರಾಬಾದಿನ ನಿಜಾಮರು 1724-1948ರವರೆಗೆ ಆಳ್ವಿಕೆ ಮಾಡಿದ್ದಾರೆ. ಸುಮಾರು 224 ವರ್ಷಗಳ ಕಾಲ ರಾಜ್ಯ ಆಳಿದ್ದಾರೆ. ಈ ನಿಜಾಮರ ಜೀವನೇ ವಿಚಿತ್ರ. ಅಪಾರ ಸಂಪತ್ತು ಹೊಂದಿದ್ದ ಈ ನಿಜಾಮರು ವಿಲಾಸಿ ಜೀವನ ಬದುಕುತ್ತಿದ್ದರು. ಅದರಲ್ಲಿ ಆಳ್ವಿಕೆ ನಡೆಸಿದ ಮೀರ್ ಒಸ್ಮಾನ್ ಅಲಿ ಖಾನ್ ಜೀವನವೇ ಕೊಂಚ ಡಿಫರೆಂಟ್. ಈಸ್ಟ್ ಇಂಡಿಯಾ ಕಂಪನಿ ಪ್ರಕಾರ, ಭಾರತದ ಮೊದಲ ಮತ್ತು ಶ್ರೀಮಂತ ಕೋಟ್ಯಾಧಿಪತಿ ಎಂಬ ಹೆಗ್ಗಳಿಕೆಗೆ ಈತ ಪಾತ್ರನಾಗಿದ್ದ. ಯಾಕೆಂದರೆ ಈತ 230 ಬಿಲಿಯನ್ ಡಾಲರ್ನಷ್ಟು ಆಸ್ತಿ ಹೊಂದಿದ್ದ.
ಬ್ರಿಟಿಷರಿಗೆ ಸಹಾಯ
ಅಂದಹಾಗೆಯೇ ಮೀರ್ ಒಸ್ಮಾನ್ ಅಲಿ ಖಾನ್ ಅಷ್ಟು ದೊಡ್ಡ ಶ್ರೀಮಂತನಾಗಲು ಕಾರಣವೇ ಗೋಲ್ಕೊಂಡದ ಗಣಿಗಳು. ಆ ಸಮಯದಲ್ಲಿ ವಜ್ರಗಳನ್ನು ಈತ ಪೂರೈಕೆ ಮಾಡುತ್ತಿದ್ದ. ಮೀರ್ ಒಸ್ಮಾನ್ ಅಲಿ ಖಾನ್ ಅಧಿಕಾರಕ್ಕೆ ಬಂದ 3 ವರ್ಷದ ಬಳಿಕ ಮಹಾಯುದ್ಧ ಪ್ರಾರಂಭವಾಯಿತು. 1914ರಲ್ಲಿ ಪ್ರಾರಂಭವಾದ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷರಿಗೆ ಆರ್ಥಿಕ ಸಹಾಯವನ್ನು ಈತ ನೀಡಿದ್ದ. ಅಷ್ಟು ಮಾತ್ರವಲ್ಲ, 1917ರಲ್ಲಿ ಹೈದರಾಬಾದ್ನಲ್ಲಿ ಉಸ್ಮಾನಿಯಾ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಿದ್ದನು.
ಸ್ವಂತ ವಿಮಾನಯಾನ ಸಂಸ್ಥೆ
ಇವಿಷ್ಟು ಮಾತ್ರವಲ್ಲದೆ, ಮೀರ್ ಒಸ್ಮಾನ್ ಅಲಿ ಖಾನ್ ಸರಳವಾದ ಬಟ್ಟೆ ಧರಿಸುತ್ತಿದ್ದನು, ಆತನ ಬಳಿ 100 ಮಲಿಯನ್ ಪೌಂಡ್ ಚಿನ್ನ, 400 ಮಿಲಿಯನ್ ಪೌಂಡ್ ಆಭರಣ ಮಾತ್ರವಲ್ಲದೆ, ಸ್ವಂತ ವಿಮಾನಯಾನ ಸಂಸ್ಥೆಯನ್ನು ಹೊಂದಿದ್ದನು.
50 ರೋಲ್ಸ್ ರಾಯ್ಸ್ ಕಾರು
ರಾಣಿ ಎಲಿಜಬೆತ್ 2 ಮದುವೆಗೆ 300 ವಜ್ರಗಳಿಂದ ಕೂಡಿದ ನೆಕ್ಲೇಸ್ ಅನ್ನು ಉಡುಗೊರೆಯಾಗಿ ನೀಡಿದ್ದನು. ಇವೆಲ್ಲದರ ಹೊರತಾಗಿ ದುಬಾರಿ 50 ರೋಲ್ಸ್ ರಾಯ್ಸ್ ಕಾರನ್ನು ಈತನ ಬಳಿ ಇತ್ತು. 1940ರ ದಶಕದಲ್ಲಿ ಮೀರ್ ಒಸ್ಮಾನ್ ಅಲಿ ಖಾನ್ ಸಂಪತ್ತು ಸುಮಾರು 1700 ಕೋಟಿ ಎಂದು ಅಂದಾಜಿಸಲಾಗಿದೆ. ಆದರೆ 2023ಕ್ಕೆ ಹೋಲಿಸಿದರೆ 2,95,770 ಕೋಟಿ ರೂಪಾಯಿಯಷ್ಟಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ