newsfirstkannada.com

VIDEO: ಶಾಲಾ ಸಮಯದಲ್ಲಿ ಫೇಶಿಯಲ್ ಮಾಡಿಸೋದ್ರಲ್ಲಿ ಬ್ಯುಸಿ.. ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಮುಖ್ಯೋಪಾಧ್ಯಾಯಿನಿ

Share :

Published April 19, 2024 at 8:45am

  ಪಾಠ ಹೇಳಿ ಕೊಡುವ ಮುಖ್ಯೋಪಾಧ್ಯಾಯಿನಿ ಏನು ಮಾಡ್ತಿದ್ದಾರೆ ಗೊತ್ತಾ?

  ಶಾಲಾ ಸಮಯದಲ್ಲಿ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಮುಖ್ಯೋಪಾಧ್ಯಾಯಿನಿ

  ದೃಶ್ಯ ಸಮೇತ ಸೆರೆ.. ಮುಖ್ಯೋಪಾಧ್ಯಾಯಿನಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು

ಉತ್ತರ ಪ್ರದೇಶ: ಶಾಲಾ ಸಮಯದಲ್ಲಿ ಮುಖ್ಯೋಪಾಧ್ಯಾಯಿನಿ ಫೇಶಿಯಲ್​ ಮಾಡುವುದರಲ್ಲಿ ಬ್ಯುಸಿಯಾದ ಘಟನೊಂದು ದೃಶ್ಯ ಸಮೇತ ಬೆಳಕಿಗೆ ಬಂದಿದೆ. ಉನ್ನಾವೋದ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ.

ಸಂಗೀತಾ ಸಿಂಗ್​ ಎಂಬ ಮುಖ್ಯೋಪಾಧ್ಯಾಯಿನಿ ವಿದ್ಯಾರ್ಥಿಗಳಿಗೆ ಪಾಠ ಹೇಳಿ ಕೊಡುವ ಬದಲು ಶಾಲೆಯಲ್ಲಿ ಫೇಶಿಯಲ್​ ಮತ್ತು ಮೇಕಪ್​ ಮಾಡಿಸಿಕೊಂಡು ಸಿಕ್ಕಿಬಿದ್ದಿದ್ದಾರೆ. ಈ ಘಟನೆ ಬೆನ್ನಲ್ಲೇ ಸಹಾಯಕ ಶಿಕ್ಷಕ ಅನಮ್​ ಖಾನ್ ಈ ಘಟನೆಯನ್ನು ಅಲ್ಲಗಳೆದಿದ್ದು, ಅಡುಗೆ ಮಾಡುವ ಪ್ರದೇಶದಲ್ಲಿ ಮೇಕಪ್​ ಮಾಡುತ್ತಿದ್ದರು ಎಂದು ಹೇಳಿದ್ದಾರೆ.

ಎಮ್​ಎಸ್​ ಖಾನ್​​​ ಎಂಬವರು ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಅಡುಗೆ ಮಾಡುವ ಪ್ರದೇಶಕ್ಕೆ ತನ್ನ ಮೊಬೈಲ್​ ಕ್ಯಾಮೆರಾವನ್ನು ಹಿಡಿದುಕೊಂಡು ಹೋಗಿದ್ದಾರೆ. ಈ ವೇಳೆ ಮುಖ್ಯೋಪಾಧ್ಯಾಯಿನಿ ಮೇಕಪ್​ ಮಾಡೋದು ಸೆರೆಯಾಗಿದೆ.

ಇದನ್ನೂ ಓದಿ: BJP ಪ್ರಚಾರದ ವೇಳೆ ಹಿಟ್​ ಆ್ಯಂಡ್​ ರನ್​; ಕಾರ್ಯಕರ್ತ ಸ್ಥಳದಲ್ಲೇ ಸಾವು, ಮತ್ತಿಬ್ಬರಿಗೆ ಗಾಯ

ವಿಡಿಯೋ ಚಿತ್ರೀಕರಿಸೋದು ಗೊತ್ತಾಗುತ್ತಿದ್ದಂತೆಯೇ ಮುಖ್ಯೋಪಾಧ್ಯಾಯಿನಿ ಗೊತ್ತಾಗಿದೆ. ತರಾತುರಿಯಲ್ಲಿ ಎದ್ದುನಿಂತು ಹಲ್ಲೆ ಮಾಡಲು ಮುಂದಾಗಿದ್ದಾರೆ. ಮಾಹಿತಿಯಂತೆ, ಮುಖ್ಯೋಪಾಧ್ಯಾಯಿನಿ ಎಮ್​ಎಸ್​ ಖಾನ್​​ಗೆ ಹಲ್ಲೆ ಮಾಡಿದ್ದಲ್ಲದೆ, ಕೈಗೆ ಕಚ್ಚಿದ್ದಾರೆ. ಈ ವೇಳೆ ರಕ್ತಸ್ರಾವವಾಗಿದ್ದು, ಅದನ್ನು ಸಹ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ.

ಸದ್ಯ ಮುಖ್ಯೋಪಾಧ್ಯಾಯಿನಿ ವಿರುದ್ಧ ಕೇಸ್​ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಶಾಲಾ ಸಮಯದಲ್ಲಿ ಫೇಶಿಯಲ್ ಮಾಡಿಸೋದ್ರಲ್ಲಿ ಬ್ಯುಸಿ.. ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಮುಖ್ಯೋಪಾಧ್ಯಾಯಿನಿ

https://newsfirstlive.com/wp-content/uploads/2024/04/Teacher.jpg

Load More