newsfirstkannada.com

ಬೆಂಗಳೂರಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗ ಪತ್ತೆ; ಇದು ರಾಜ್ಯದ ಜನರನ್ನೇ ಬೆಚ್ಚಿಬೀಳಿಸೋ ಸ್ಟೋರಿ!

Share :

Published April 18, 2024 at 6:09am

    ಸಾಂಕ್ರಾಮಿಕ ರೋಗಗಳು ಪಟ್ಟಣವನ್ನ ಬಿಟ್ಟು ಬಿಡದೇ ಕಾಡುತ್ತಿದೆಯಾ?

    ಕಾಲರಾ ಮಾಸೋ ಮುನ್ನವೇ ರಾಜ್ಯಕ್ಕೆ ಕಾಡುತ್ತಿದೆ ಮತ್ತೊಂದು ರೋಗ

    ಬೆಂಗಳೂರಿನ ಜನರಿಗೆ ಎಚ್ಚರಿಕೆಯಿಂದಿರಲು ಆರೋಗ್ಯ ಇಲಾಖೆ ಆದೇಶ

ಬೆಂಗಳೂರು: ಕೋವಿಡ್​ ಕರಾಳ ಕಾಲವನ್ನ ಜನ ಮರೆತ್ತಿಲ್ಲ. ಕಾಲರಾ ಕರಿಛಾಯೆ ಇನ್ನೂ ಮಾಸಿಲ್ಲ. ಅದಾಗಲೇ ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗ ಪತ್ತೆಯಾಗಿದೆ. ಆ ರೋಗದಿಂದ ಎರಡು ಕುದುರೆಗಳು ಸಾವನ್ನಪ್ಪಿದ್ದು, ರಾಜ್ಯ ರಾಜಧಾನಿಯನ್ನ ಬೆಚ್ಚಿ ಬೀಳಸಿದೆ. ಸಾಂಕ್ರಾಮಿಕ ರೋಗಗಳು ಪಟ್ಟಣವನ್ನ ಬಿಡದೇ ಕಾಡ್ತಿವೆಯಾ? ಅನ್ನೋ ಪ್ರಶ್ನೆ ಶುರುವಾಗಿದೆ.

ಇದನ್ನೂ ಓದಿ: PHOTOS: ಪ್ರೆಗ್ನೆನ್ಸಿ ನಡುವೆ ಶೂಟಿಂಗ್​ನಲ್ಲಿ ಬ್ಯುಸಿಯಾದ ದೀಪಿಕಾ ಪಡುಕೋಣೆ.. ಫ್ಯಾನ್ಸ್​ ಕಳವಳ!

ಯಾಕಂದ್ರೆ, ಮೇಲಿಂದ ಮೇಲೆ ಒಂದಾದ ಮೇಲೆ ಒಂದರಂತೆ ಜನರ ಜೀವ ಹೀರೋಕೆ ವಕ್ಕರಿಸ್ತಿವೆ. ಇದೀಗ ಹೇಳ್ತಿರೋ ರೋಗ ಪತ್ತೆಯಾಗಿರೋದು ಡಿ.ಜೆ.ಹಳ್ಳಿ ವ್ಯಾಪ್ತಿಯಲ್ಲಿ. ಇದರ ಹೆಸರು ಗ್ಲಾಂಡರ್ಸ್‌. ಈಗಾಗಲೇ ಈ ಗ್ಲಾಂಡರ್ಸ್​ ರೋಗದಿಂದ 2 ಕುದುರೆಗಳು ಸಾವನ್ನಪ್ಪಿದ್ದು, ಮತ್ತೊಂದು ಕುದುರೆಯಲ್ಲೂ ಈ ಅಪಾಯಕಾರಿ ರೋಗ ಅಂಟಿಕೊಂಡಿದೆ. ಅದ್ಯಾವಾಗ ಕುದುರೆಯಲ್ಲಿ ರೋಗ ಧೃಡವಾಯ್ತೋ, ಜನರಲ್ಲಿ ಆತಂಕ ಮನೆ ಮಾಡಿದೆ. ಈ ರೋಗ ಎಲ್ಲೆಡೆ ಹರಡೋ ಭೀತಿಯಿಂದ ಡಿ.ಜೆ ಹಳ್ಳಿಯ ಸುತ್ತಾಮುತ್ತಲಿನ 5 ಕಿಲೋ ಮೀಟರ್​ ಪ್ರದೇಶವನ್ನ ಸೋಂಕಿತ ಏರಿಯಾ ಅಂತಾ ಘೋಷಣೆ ಮಾಡಿ ಎಚ್ಚರಿಕೆಯಿಂದಿರಲು ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಆದೇಶ ಕೊಟ್ಟಿದೆ.

ಗ್ಲಾಂಡರ್ಸ್​ ಗಂಡಾಂತರ!

ಈಗಾಗಲೇ ಗ್ಲಾಂಡರ್ಸ್​ ರೋಗ ಹರಡಿದ ಎರಡು ಕುದುರೆಗಳು ಸಾವನ್ನಪ್ಪಿವೆ. ಕುದುರೆ ಮಾಲೀಕ ಈ ಕುದುರೆಗಳನ್ನ ಮಹಾರಾಷ್ಟ್ರದಿಂದ ತಂದಿದ್ದು, ಅವುಗಳಲ್ಲಿ ರೋಗ ಪತ್ತೆಯಾಗಿದೆ. ಈಗ ಮತ್ತೊಂದು ಕುದುರೆಗೆ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದು, ಆ ಕುದುರೆಯನ್ನ ಹೆಬ್ಬಾಳದ ಪಶುವೈದ್ಯ ಶಾಲೆಯಲ್ಲಿ ಕ್ವಾರೆಂಟೈನ್​ ಮಾಡಿ ಚಿಕಿತ್ಸೆ ನೀಡಲಾಗ್ತಿದೆ. ಇತ್ತ ಕುದುರೆ ಮಾಲೀಕ ಹಾಗೂ ಕುಟುಂಬದ ಸದಸ್ಯರನ್ನು ಮನೆಯಲ್ಲಿ ಇರುವಂತೆ ಸೂಚನೆ ನೀಡಲಾಗಿದೆ. ಈ ಗ್ಲಾಂಡರ್ಸ್​ ರೋಗ ಇದೀಗ ಕುದುರೆಗಳಲ್ಲಿ ಮಾತ್ರ ಕಾಣಿಸಿಕೊಂಡಿದೆ. ಆದ್ರೆ, ಮನುಷ್ಯರು ಹರಡೋ ಸಾಧ್ಯತೆಯನ್ನ ನಾವು ತಳ್ಳಿ ಹಾಕುವಂತಿಲ್ಲ. ಸೋ ಯಾವುದಕ್ಕೂ ಅಲರ್ಟ್​ ಆಗಿರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗ ಪತ್ತೆ; ಇದು ರಾಜ್ಯದ ಜನರನ್ನೇ ಬೆಚ್ಚಿಬೀಳಿಸೋ ಸ್ಟೋರಿ!

https://newsfirstlive.com/wp-content/uploads/2024/04/bng-people.jpg

Load More