/newsfirstlive-kannada/media/media_files/2025/10/17/bread_omelette_1-2025-10-17-17-34-20.jpg)
ಬೆಳಗ್ಗೆಯಿಂದ ದಿನ ಪೂರ್ತಿ ನಾವು ಆ್ಯಕ್ಟಿವ್ ಆಗಿರಬೇಕು ಎಂದರೆ ಬ್ರೇಕ್ ಫಾಸ್ಟ್ ಅತ್ಯಂತ ಮುಖ್ಯ ಪಾತ್ರ ವಹಿಸುತ್ತದೆ. ಇದು ದಿನವನ್ನು ಆನಂದಮಯವಾಗಿ ಕಳೆಯಲು ಶಕ್ತಿನ ಕೊಡುತ್ತದೆ. ಹೀಗಾಗಿ ಪ್ರತಿಯೊಬ್ಬರು ಬೆಳಗಿನ ವೇಳೆ ಆರೋಗ್ಯವಾದ ಅಲ್ಪ ಆಹಾರ ತೆಗೆದುಕೊಳ್ಳಬೇಕು. ಆದರೆ ಇತ್ತೀಚಿಗೆ ಬ್ಯುಸಿ ಲೈಫ್​​ನಲ್ಲಿ 10 ನಿಮಿಷದಲ್ಲಿ ಸಿದ್ಧವಾಗುವ ಕೆಲ ಫಾಸ್ಟ್​ಫುಡ್​ ಮೊರೆಹೋಗುತ್ತಿದ್ದಾರೆ. ಅದರಲ್ಲಿ ಮ್ಯಾಗಿ, ಬ್ರೆಡ್​ ಜಾಮ್, ಬ್ರೆಡ್​ ಆಮ್ಲೆಟ್​ ತಿನ್ನುವುದು ಅಭ್ಯಾಸ ಮಾಡಿಕೊಂಡಿದ್ದಾರೆ. ಬೆಳಗ್ಗೆನೇ ಬ್ರೆಡ್​ ಆಮ್ಲೆಟ್ ತಿನ್ನುವುದು ಒಳ್ಳೆಯದಾ?.
ಈಗೀಗ ಬೆಳಗಿನ ಉಪಾಹಾರದಲ್ಲಿ ಬ್ರೆಡ್​ ಆಮ್ಲೆಟ್​ ಅನ್ನು ನಾವು ಸೇರಿಸಿಕೊಂಡಿದ್ದೇವೆ. ಇದನ್ನು ತಿನ್ನುವುದರಿಂದ ಕೆಲ ಪ್ರಯೋಜನಾಗಳು ನಮಗೆ ಇವೆ. ಮೊಟ್ಟೆ ಬಳಕೆ ಮಾಡುವುದರಿಂದ ಪ್ರೋಟಿನ್ ದೇಹಕ್ಕೆ ಸಿಗುತ್ತದೆ. ಸ್ನಾಯುಗಳಿಗೆ ಒಳ್ಳೆಯದು, ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಅದೇ ರೀತಿ ಮೊಟ್ಟೆಯಲ್ಲಿರುವ ಅಮೈನೋ ಆಮ್ಲದಿಂದ ತಲೆಗೂದಲು, ಉಗುರು, ಚರ್ಮದ ಆರೋಗ್ಯವನ್ನು ಇದು ರಕ್ಷಿಸುತ್ತದೆ. ಈ ಉಪಯೋಗಗಳು ನಾವು ಅವುಗಳನ್ನು ಯಾವ ರೀತಿ ಸೇವಿಸುತ್ತೇವೆ ಎನ್ನುವುದರ ಆಧಾರದ ಮೇಲೆ ನಿರ್ಧಾರವಾಗುತ್ತದೆ.
ಒಂದು ವಾರದಲ್ಲಿ ಎರಡು ಬೇಯಿಸಿದ ಮೊಟ್ಟೆ ತಿಂದರೆ ಆರೋಗ್ಯ ಚೆನ್ನಾಗಿರುತ್ತದೆ. ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ವೈದ್ಯರು ನೀಡಿದ ಸಲಹೆಗಿಂತ ಹೆಚ್ಚು ಮೊಟ್ಟೆ ತಿನ್ನಲೇಬಾರದು. ಒಂದು ಅಧ್ಯಯನದ ಪ್ರಕಾರ, ವಾರಕ್ಕೆ 7ಕ್ಕಿಂತ ಹೆಚ್ಚು ಮೊಟ್ಟೆಗಳನ್ನು ತಿನ್ನುವ ಆರೋಗ್ಯವಂತನು ಕೆಲವೊಮ್ಮೆ ಹೃದಯ ಸಮಸ್ಯೆಗೆ ಒಳಗಾಗುವ ಸಂಭವವಿರುತ್ತದೆ ಎಂದು ಹೇಳುತ್ತದೆ.
ಆಮ್ಲೆಟ್ ಒಳ್ಳೆಯ ಪ್ರೋಟಿನ್, ಕೊಬ್ಬು ಹಾಗೂ ವಿಟಮಿನ್ ಬಿ12, ಡಿ ಅನ್ನು ಹೊಂದಿರುತ್ತದೆ. ಬ್ರೆಡ್​ ಜೊತೆ ಆಮ್ಲೆಟ್​ ತಿನ್ನುವುದರಿಂದ ನಮಗೆ ಅಗತ್ಯ ಪ್ರೋಟಿನ್, ಕಾರ್ಬೋಹೈಡ್ರೆಟ್​, ಕೊಬ್ಬು, ವಿಟಮಿನ್​ಗಳು ದೊರೆಯುತ್ತವೆ. ಬ್ರೆಡ್​ ಆಮ್ಲೆಟ್​ ಹೆಚ್ಚು ಆರೋಗ್ಯಕರ ಎನ್ನುವುದಕ್ಕೆ ನಾವು ತಿನ್ನಲು ಆಯ್ಕೆ ಮಾಡುವ ಬ್ರೆಡ್​ ಹಾಗೂ ಮೊಟ್ಟೆನ ಹೇಗೆ ಆಮ್ಲೆಟ್​ ಅನ್ನು ಮಾಡಿಕೊಳ್ಳಬೇಕು ಎನ್ನುವುದು ನಿರ್ಧರಿಸುತ್ತದೆ.
ಇದನ್ನೂ ಓದಿ:ಆಗಾಗ ಲವಂಗ ಸೇರಿಸಿ ಹಾಲು ಕುಡಿಯುತ್ತೀರಿ.. ಇದರ ಆರೋಗ್ಯ ಪ್ರಯೋಜನಗಳು ಎಷ್ಟು ಇವೆ ಅಂದ್ರೆ?
ಬಹುಧಾನ್ಯದಿಂದ ಕೂಡಿದ ಬ್ರೆಡ್​ ನಮಗೆ ಫೈಬರ್ ಒದಗಿಸುವುದರಿಂದ ಜೀರ್ಣಕ್ರಿಯೆಗೆ ಒಳ್ಳೆಯದು. ಆದರೆ ಹಿಟ್ಟಿನಿಂದ ಮಾಡುವ ಬ್ರೆಡ್​ನಲ್ಲಿ ಯಾವುದೇ ಫೈಬರ್ ಇರುವುದಿಲ್ಲ. ಅಲ್ಲದೇ ಇಂತಹ ಬ್ರೆಡ್​ಗಳು ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಬೇಗನೆ ಜಾಸ್ತಿ ಮಾಡುತ್ತವೆ. ಹಾಗೇ ಆಮ್ಲೆಟ್​ ಮಾಡುವಾಗ ಅಧಿಕ ಕೊಬ್ಬು ಇರುವ ಅಡುಗೆಎಣ್ಣೆ ಬಳಸಿದರೆ ಅದು ನಮ್ಮ ಆರೋಗ್ಯ ಹದಗೆಡಲು ಕಾರಣವಾಗುತ್ತದೆ.
ಬ್ರೆಡ್​ ಆಮ್ಲೆಟ್​ ದೇಹಕ್ಕೆ ಬೇಗನೆ ಶಕ್ತಿಯನ್ನು ನೀಡುತ್ತದೆ. ಅಲ್ಲದೇ ಇದರಲ್ಲಿರುವ ಪ್ರೋಟಿನ್​ಗಳು ನಮ್ಮ ಸ್ನಾಯುಗಳಿಗೆ ಸಹಾಯವಾಗುತ್ತವೆ. ಆದರೆ ಬ್ರೆಡ್​ನಲ್ಲಿ ಪೋಷಕಾಂಶಲು ಕಡಿಮೆ ಇದ್ದು ಕ್ಯಾಲರಿ ಹೆಚ್ಚು ಇದ್ದರೇ ಆಗ ದೇಹಕ್ಕೆ ಎಲ್ಲ ಪೋಷಕಾಂಶಗಳು ಸಿಗುವುದಿಲ್ಲ. ಇದು ಕೊಬ್ಬನ್ನು ಹೆಚ್ಚಿಸುತ್ತದೆ. ಇದನ್ನು ನಿರಂತರವಾಗಿ ತಿನ್ನುವುದರಿಂದ ಪೌಷ್ಠಿಕಾಂಶದ ಕೊರತೆ ನಮ್ಮನ್ನು ಕಾಡುತ್ತದೆ. ಹೀಗಾಗಿ ಮಿತವಾಗಿ ತಿಂದರೆ ಉತ್ತಮ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ