/newsfirstlive-kannada/media/media_files/2025/10/16/milk_health-2025-10-16-18-40-01.jpg)
ಅಡುಗೆ ಮನೆಯಲ್ಲಿರುವ ಮಸಾಲೆ ಪದಾರ್ಥಗಳು ಒಂದಲ್ಲ, ಒಂದು ರೀತಿಯಲ್ಲಿ ಆರೋಗ್ಯಕ್ಕೆ ಉಪಯೋಗ ಆಗುತ್ತಿರುತ್ತವೆ. ಆದರೆ ಅವುಗಳ ಕುರಿತು ನಮಗೆ ಸರಿಯಾದ ಜ್ಞಾನ ಇರುವುದಿಲ್ಲ. ಇದರಿಂದಲೇ ಸಣ್ಣ ಸಣ್ಣ ಆರೋಗ್ಯ ಸಮಸ್ಯೆಗೆ ಪದೇ ಪದೇ ವೈದ್ಯರ ಬಳಿಗೆ ಹೋಗಿ ಹಣ ಕಳೆದುಕೊಳ್ಳುತ್ತೇವೆ. ನಿಮಗೆಲ್ಲಾ ಲವಂಗ ಗೊತ್ತೇ ಇರುತ್ತದೆ. ಇದನ್ನು ಹಾಲಿನೊಂದಿಗೆ ಸೇರಿಸಿ ಕುಡಿದರೆ ಸದೃಢಕಾಯ ನಮ್ಮದಾಗುತ್ತದೆ.
ಭಾರತದ ಹಲವಾರು ಪ್ರದೇಶಗಳಲ್ಲಿ ಈ ಲವಂಗ ಹಾಲು ಕುಡಿಯುವುದು ಇದೆ. ಅದರಲ್ಲಿ ವಿಶೇಷವಾಗಿ ಚಳಿಗಾಲದಲ್ಲಿ ಲವಂಗ ಹಾಲು ಕುಡಿಯುವುದು ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಹಾಲನ್ನು ಲವಂಗ ಅಥವಾ ಕೆಲವೊಮ್ಮೆ ಇತರೆ ಮಸಾಲೆ ಪದಾರ್ಥಗಳೊಂದಿಗೆ ಸೇರಿಸಿ ಕುದಿಸಿ ತಯಾರಿಸಲಾಗುತ್ತದೆ. ಇದರಿಂದ ಕೆಲವು ಪ್ರಯೋಜನಗಳು ಅಂತೂ ನಮ್ಮ ಆರೋಗ್ಯಕ್ಕೆ ಇವೆ.
ಜೀರ್ಣಕ್ರಿಯೆಗೆ ಲವಂಗದ ಹಾಲು ಸಹಾಯ ಮಾಡುತ್ತದೆ. ಲವಂಗಗಳಲ್ಲಿ ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ (anti-inflammatory) ನಿವಾರಕ ಗುಣಗಳನ್ನು ಹೊಂದಿವೆ. ಇದು ಜೀರ್ಣಕಾರಿ ಸಮಸ್ಯೆಗಳನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ.
/filters:format(webp)/newsfirstlive-kannada/media/media_files/2025/10/03/milk_clove-2025-10-03-18-31-06.jpg)
ಶೀತ ಮತ್ತು ಕೆಮ್ಮನ್ನು ನಿವಾರಿಸುವ ಶಕ್ತಿ ಈ ಲವಂಗದ ಹಾಲು ಹೊಂದಿದೆ. ಲವಂಗವು ಯುಜೆನಾಲ್ (Eugenol) ಅನ್ನು ಹೊಂದಿರುತ್ತದೆ. ಇದು ಉಸಿರಾಟದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುವ ಮತ್ತು ರಕ್ತ ಹೆಪ್ಪುಗಟ್ಟುವಿಕೆ ನಿವಾರಣೆ ಮಾಡುವ ಗುಣಗಳನ್ನು ಹೊಂದಿದೆ.
ಉತ್ಕರ್ಷಣ ನಿರೋಧಕ (Antioxidant) ಗುಣಲಕ್ಷಣಗಳು ಲವಂಗದ ಹಾಲಿನಲ್ಲಿ ಇರುತ್ತದೆ. ಲವಂಗವು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ನಮ್ಮ ದೇಹದಲ್ಲಿ ಜೀವಕೋಶ ಹಾನಿಗೆ ಒಳಗಾಗುತ್ತಿದ್ದರೇ ಅದನ್ನು ರಕ್ಷಣೆ ಮಾಡಲು ಸಹಾಯ ಮಾಡುತ್ತದೆ.
ಹಲ್ಲುನೋವುಗಳಿಂದ ಬಳಲುತ್ತಿರುವವರು ಲವಂಗ ಒಂದು ದಿವ್ಯವಾದ ಮದ್ದು ಎನ್ನಬಹುದು. ನೋವು ಅನ್ನು ಕಡಿಮೆ ಮಾಡುವ ಗುಣಗಳನ್ನು ಇದು ಹೊಂದಿದೆ. ರಾತ್ರಿ ಮಲಗುವ ಮೊದಲು ಲವಂಗವನ್ನು ಹಾಲಿನೊಂದಿಗೆ ಸೇರಿಸಿಕೊಂಡು ಕುಡಿಯಬೇಕು. ಇದರಿಂದ ಹಲ್ಲುನೋವಿನ ಜೊತೆಗೆ ನಮ್ಮ ಒಸಡುಗಳು ಊದಿಕೊಂಡಿದ್ರೆ ನಿವಾರಣೆ ಆಗುತ್ತವೆ. ಅಲ್ಲದೇ ಬಾಯಿಯ ದುರ್ವಾಸನೆಯೂ ದೂರವಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us