ವಯಸ್ಸಾದಂತೆ ಕೂದಲು ಬಿಳಿ ಆಗೋದು ಯಾಕೆ..? ಇದನ್ನು ನಿಲ್ಲಿಸಲು ಸಾಧ್ಯವೇ..?

ವಯಸ್ಸಿನ ಹೊರತಾಗಿ, ವಂಶವಾಹಿನಿಗಳು (Genetics) ಕೂಡ ಇದರಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಕುಟುಂಬದಲ್ಲಿ ಅಕಾಲಿಕವಾಗಿ ಕೂದಲು ಬಿಳಿಯಾಗುವ ಇತಿಹಾಸವಿದ್ದರೆ, ಮುಂದಿನ ಪೀಳಿಗೆಯಲ್ಲೂ ಅದರ ಸಾಧ್ಯತೆ ಹೆಚ್ಚಿರುತ್ತದೆ. ಬೇರೆ ಬೇರೆ ಜನಾಂಗದವರಲ್ಲಿ ಕೂದಲು ಬಿಳಿಯಾಗುವ ವಯಸ್ಸು ಕೂಡ ಭಿನ್ನವಾಗಿರುತ್ತದೆ.

author-image
Ganesh Kerekuli
Grey and white Hair
Advertisment

ವಯಸ್ಸಾದಂತೆ ಕೂದಲು ಬಿಳಿಯಾಗುವುದು ಒಂದು ನೈಸರ್ಗಿಕ ಪ್ರಕ್ರಿಯೆ. ದೇಹದ ಇತರ ಅಂಗಗಳಂತೆ ಕೂದಲು ಕೂಡ ವಯಸ್ಸಾಗುವಿಕೆಯ (Aging) ಪ್ರಭಾವಕ್ಕೆ ಒಳಗಾಗುತ್ತದೆ. ಚರ್ಮರೋಗ ತಜ್ಞರ (Dermatologists) ಪ್ರಕಾರ, ಕೂದಲಿನ ಬಣ್ಣವನ್ನು ನಿರ್ಧರಿಸುವ ಕೋಶಗಳು ಕಾಲಾನಂತರದಲ್ಲಿ ದುರ್ಬಲಗೊಳ್ಳುತ್ತವೆ. ಇದರಿಂದಾಗಿ ಕೂದಲು ಕ್ರಮೇಣ ತನ್ನ ನೈಸರ್ಗಿಕ ಬಣ್ಣವನ್ನು ಕಳೆದುಕೊಳ್ಳುತ್ತದೆ. ಹಾಗಿದ್ದರೆ, ಇದನ್ನು ತಡೆಯಲು ಅಥವಾ ನಿಧಾನಗೊಳಿಸಲು ಸಾಧ್ಯವೇ..? 

ತಜ್ಞರು ಏನು ಹೇಳುತ್ತಾರೆ?

ಹೆಚ್ಚಿನ ಜನರಲ್ಲಿ 30 ಅಥವಾ 40 ವರ್ಷಗಳ ನಂತರ ಬಿಳಿ ಕೂದಲು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಮುಖ್ಯ ಕಾರಣ 'ಮೆಲನೋಸೈಟ್ ಸ್ಟೆಮ್ ಸೆಲ್ಸ್' (Melanocyte stem cells) ದುರ್ಬಲಗೊಳ್ಳುವುದು. ಈ ಜೀವಕೋಶಗಳೇ ಕೂದಲಿಗೆ ಮೆಲನಿನ್ ಪಿಗ್ಮೆಂಟ್ ಅನ್ನು ಒದಗಿಸಿ ಅವುಗಳಿಗೆ ಕಪ್ಪು, ಕಂದು ಅಥವಾ ಹೊಂಬಣ್ಣವನ್ನು ನೀಡುತ್ತವೆ. ಈ ಜೀವಕೋಶಗಳು ಸರಿಯಾಗಿ ಕೆಲಸ ಮಾಡುವುದನ್ನು ನಿಲ್ಲಿಸಿದಾಗ ಕೂದಲು ಬಿಳಿ ಅಥವಾ ಬೂದು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ.

ಇದನ್ನೂ ಓದಿ: 331 ಎಸೆತಗಳಲ್ಲಿ ಅಭಿ ಸಿಡಿಸಿದ ಸಿಕ್ಸರ್​ ಎಷ್ಟು ಗೊತ್ತಾ..? ಅಬ್ಬಬ್ಬಾ, ಭಲೇ ಬ್ಯಾಟರ್..!

ಈ ಪ್ರಕ್ರಿಯೆಯನ್ನು ವೈದ್ಯಕೀಯ ಭಾಷೆಯಲ್ಲಿ 'ಸೆಲ್ಯುಲರ್ ಸೆನೆಸೆನ್ಸ್' (Cellular Senescence) ಎಂದು ಕರೆಯಲಾಗುತ್ತದೆ. ಇದರಲ್ಲಿ ಕೂದಲು ಕ್ರಮೇಣ ಪಿಗ್ಮೆಂಟ್ ಉತ್ಪಾದಿಸುವುದನ್ನು ಕಡಿಮೆ ಮಾಡುತ್ತದೆ. ಇದೇ ಕಾರಣಕ್ಕೆ ಮೊದಲು ಕಪ್ಪು ಅಥವಾ ಕಂದು ಬಣ್ಣದಲ್ಲಿದ್ದ ಕೂದಲು ಸಮಯ ಕಳೆದಂತೆ ಬಿಳಿಯಾಗುತ್ತದೆ. ಕೆಲವರು ಬಿಳಿ ಕೂದಲು ಸಾಮಾನ್ಯ ಕೂದಲಿನಗಿಂತ ಹೆಚ್ಚು ಒರಟಾಗಿ ಅಥವಾ ದಪ್ಪವಾಗಿರುವುದನ್ನು ಗಮನಿಸಿರಬಹುದು.

ವಯಸ್ಸಿನ ಹೊರತಾಗಿ, ವಂಶವಾಹಿನಿಗಳು (Genetics) ಕೂಡ ಇದರಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಕುಟುಂಬದಲ್ಲಿ ಅಕಾಲಿಕವಾಗಿ ಕೂದಲು ಬಿಳಿಯಾಗುವ ಇತಿಹಾಸವಿದ್ದರೆ, ಮುಂದಿನ ಪೀಳಿಗೆಯಲ್ಲೂ ಅದರ ಸಾಧ್ಯತೆ ಹೆಚ್ಚಿರುತ್ತದೆ. ಕೆಲವು ಸಂಶೋಧನೆಗಳ ಪ್ರಕಾರ, ಬೇರೆ ಬೇರೆ ಜನಾಂಗದವರಲ್ಲಿ ಕೂದಲು ಬಿಳಿಯಾಗುವ ವಯಸ್ಸು ಕೂಡ ಭಿನ್ನವಾಗಿರುತ್ತದೆ.

ಇದನ್ನು ತಡೆಯಲು ಸಾಧ್ಯವೇ?

ಹಿಂದೆ ಕೂದಲಿನ ಬಣ್ಣ ಬದಲಾಗುವುದನ್ನು ತಡೆಯಲು ಸಾಧ್ಯವೇ ಇಲ್ಲ ಎಂದು ನಂಬಲಾಗಿತ್ತು. ಇತ್ತೀಚಿನ ಸಂಶೋಧನೆಗಳ ಪ್ರಕಾರ ಈ ಪ್ರಕ್ರಿಯೆಯನ್ನು ವೇಗಗೊಳಿಸಬಹುದು ಅಥವಾ ನಿಧಾನಗೊಳಿಸಬಹುದು. ವಿಟಮಿನ್ ಬಿ12 ಮತ್ತು ಕಬ್ಬಿಣಾಂಶದಂತಹ ಪೋಷಕಾಂಶಗಳ ಕೊರತೆಯು ಬಿಳಿ ಕೂದಲಿಗೆ ಕಾರಣವಾಗಬಹುದು ಎಂದು ಕೆಲವು ಅಧ್ಯಯನಗಳು ಹೇಳಿವೆ. ಇದರ ಹೊರತಾಗಿ ದೀರ್ಘಕಾಲದ ಒತ್ತಡವು (Stress) ಇದಕ್ಕೆ ಕಾರಣವಾಗುತ್ತದೆಯಂತೆ. ಅತಿಯಾದ ಒತ್ತಡವು ಕೂದಲಿನ ಬಣ್ಣ ನೀಡುವ ಜೀವಕೋಶಗಳಿಗೆ ಹಾನಿ ಮಾಡುತ್ತದೆ ಎಂದು ಸಂಶೋಧನೆ ತಿಳಿಸಿದೆ. ಕೂದಲಿನ ಬಣ್ಣ ಬದಲಾಗುವುದನ್ನು ಸಂಪೂರ್ಣವಾಗಿ ತಡೆಯುವುದು ಅಸಾಧ್ಯವಾದರೂ, ಸಮತೋಲಿತ ಆಹಾರ, ಒತ್ತಡ ನಿಯಂತ್ರಣ ಮತ್ತು ಆರೋಗ್ಯಕರ ಜೀವನಶೈಲಿಯ ಮೂಲಕ ಈ ಪ್ರಕ್ರಿಯೆಯನ್ನು ಸ್ವಲ್ಪ ಮಟ್ಟಿಗೆ ನಿಧಾನಗೊಳಿಸಬಹುದು ಎಂದು ವರದಿಗಳು ಹೇಳುತ್ತವೆ. 

ಇದನ್ನೂ ಓದಿ: ಕ್ಯಾಪ್ಟನ್ ರೇಸ್​​​ನಲ್ಲಿ ಒಬ್ಬರಲ್ಲ, ಇಬ್ಬರಲ್ಲ.. ಮಾಲೀಕರ ಒಲವು ಯಾರ ಮೇಲೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Health Tips health care hair health white hair Grey Hair
Advertisment