/newsfirstlive-kannada/media/media_files/2026/01/29/abhishekh-sharma-3-2026-01-29-12-55-51.jpg)
ವಿಧ್ವಂಸಕ ಬ್ಯಾಟಿಂಗ್..! ಸಿಕ್ಸರ್​ಗಳ ಸುರಿಮಳೆ..! ಮೀಟರ್​ನಂತೆ ಏರೋ ಸ್ಕೋರ್​​​ ಬೋರ್ಡ್..! ಗ್ಯಾಲರಿಯಲ್ಲಿ ಪ್ರೇಕ್ಷಕರ ಚಪ್ಪಾಳೆ, ಶಿಳ್ಳೆ, ಕುಣಿದಾಟ..! ಹೌದು..! ಅಭಿಷೇಕ್ ಶರ್ಮಾ ಕ್ರಿಸ್​​ನಲ್ಲಿ ಇರೋವರೆಗೂ, ಇವೆಲ್ಲಾ ಕಾಮನ್​​​​​​​​​​​​​​​​​​​​​​​​​​. T20 ಕ್ರಿಕೆಟ್​​​ಗೆ ಹೊಸ ಟಚ್ ಕೊಟ್ಟಿರೋ ಎಡಗೈ ಬ್ಯಾಟರ್​​, ತನ್ನ ಸ್ಕಿಲ್​ಫುಲ್ ಬ್ಯಾಟಿಂಗ್​ನಿಂದ ಕೋಟ್ಯಾಂತರ ಅಭಿಮಾನಿಗಳ ಮನ ಗೆದ್ದಿದ್ದಾರೆ.
ಅಭಿಷೇಕ್ T20 ಕ್ರಿಕೆಟ್​ನ ನಂಬರ್. 1 ಬ್ಯಾಟರ್
ಪಂಜಾಬ್​ನ ಸ್ಪೋಟಕ ಬ್ಯಾಟ್ಸ್​ಮನ್ ಅಭಿಷೇಕ್ ಶರ್ಮಾ ಇದೀಗ ಐಸಿಸಿ T20 ಕ್ರಿಕೆಟ್​​​ನ ನಂಬರ್.1 ಬ್ಯಾಟರ್. ಕಳೆದೆರಡು ವರ್ಷಗಳಲ್ಲಿ ಶಾರ್ಟರ್ ಫಾರ್ಮೆಟ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಅಭಿಷೇಕ್, 929 ರೇಟಿಂಗ್ ಪಡೆದು ಅಗ್ರ ಸ್ಥಾನದಲ್ಲಿದ್ದಾರೆ. 2ನೇ ಸ್ಥಾನದಲ್ಲಿರುವ ಫಿಲ್ ಸಾಲ್ಟ್​ ಮತ್ತು ಅಭಿಷೇಕ್​ಗೂ ಸರಿಸುಮಾರು 80 ರೇಟಿಂಗ್ಸ್​ ವ್ಯತ್ಯಾಸ ಇದೆ.
331 ಎಸೆತಗಳಲ್ಲೇ 50 ಸಿಕ್ಸರ್ ಸಿಡಿಸಿದ ದಾಖಲೆ
ಅಂತರಾಷ್ಟ್ರೀಯ T20 ಕ್ರಿಕೆಟ್​​​ನಲ್ಲಿ ಅಭಿಷೇಕ್, ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಗಮನ ಸೇಳೆದಿದ್ದಾರೆ. ಬಾಲ್ ನಂಬರ್.1ರಿಂದ ಹಿಡಿದು ಆಡೋ ಪ್ರತಿಯೊಂದು ಬಾಲ್​ಗಳನ್ನ ಬೌಂಡ್ರಿ ಆಚೆ ಟಾರ್ಗೆಟ್ ಮಾಡೋ ಅಭಿ, ಸಿಕ್ಸರ್​ಗಳ ಸರದಾರ ಎನಿಸಿಕೊಂಡಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅಭಿಷೇಕ್ ಕೇವಲ 331 ಎಸೆತಗಳಲ್ಲಿ 50 ಸಿಕ್ಸರ್​ಗಳನ್ನ ಸಿಡಿಸಿ ದಾಖಲೆ ಬರೆದಿದ್ದಾರೆ.
ಪವರ್ ಪ್ಲೇನಲ್ಲಿ 49 ಸಿಕ್ಸರ್​ ಸಿಡಿಸಿದ ಪಂಜಾಬ್​ ಪುತ್ತರ್
ಮೊದಲ 6 ಓವರ್​ಗಳಲ್ಲಿ ಅಭಿಷೇಕ್​​​ ಬ್ಯಾಟಿಂಗ್​ಗೆ ಎದುರಾಳಿಗಳು ಷೇಕ್ ಆಗುತ್ತಾರೆ. ಪವರ್​​ಪ್ಲೇನಲ್ಲಿ ಪವರ್​ಫುಲ್ ಬ್ಯಾಟಿಂಗ್ ನಡೆಸೋ ಅಭಿ, ಮೊದಲ ಆರು ಓವರ್​ಗಳಲ್ಲಿ ಗೇಮ್ ಚೇಂಜಿಂಗ್ ಇನ್ನಿಂಗ್ಸ್ ಆಡ್ತಾರೆ. ಇದುವರೆಗೂ ಪವರ್​ಪ್ಲೇನಲ್ಲಿ 49 ಸಿಕ್ಸರ್​ಗಳನ್ನ ಬಾರಿಸಿರುವ ಪಂಜಾಬ್ ಬ್ಯಾಟರ್, ಹೊಸ ರೆಕಾರ್ಡ್​ ಸೃಷ್ಟಿಸಿದ್ದಾರೆ.
/filters:format(webp)/newsfirstlive-kannada/media/media_files/2026/01/29/abhishekh-sharma-2-2026-01-29-12-57-04.jpg)
T20 ಕ್ರಿಕೆಟ್​​​ ಅಂದ್ರೆ ಥಟ್ಟನೆ ನೆನಪಾಗೋದು ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್. ಮಾಜಿ ಕ್ರಿಕೆಟಿಗ ಯುವರಾಜ್, T20 ಕ್ರಿಕೆಟ್​​​ನಲ್ಲಿ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ರು. ಆದ್ರೆ ಗುರುವಿನ ನಂತರ ಶಿಷ್ಯ ಅಭಿಷೇಕ್, 14 ಎಸೆತಗಳಲ್ಲಿ ಆಫ್ ಸೆಂಚೂರಿ ಬಾರಿಸಿ 2ನೇ ಸ್ಥಾನದಲ್ಲಿದ್ದಾರೆ. ಯುವಿ ನಂತ್ರ ಅಭಿ, ದಿ ಬೆಸ್ಟ್ T20 ಕ್ರಿಕೆಟರ್.
ಕಳೆದ ವರ್ಷ ಅಭಿಷೇಕ್ ಶರ್ಮಾ, ಡೊಮೆಸ್ಟಿಕ್ ಮತ್ತು ಇಂಟರ್​ನ್ಯಾಷನಲ್ ಕ್ರಿಕೆಟ್​ನಲ್ಲಿ ತನ್ನದೇ, ವಿಶೇಷ ದಾಖಲೆ ನಿರ್ಮಿಸಿದ್ರು. ದೇಸಿ, ಐಪಿಎಲ್ ಮತ್ತು ಇಂಟರ್​ನ್ಯಾಷನಲ್​​ ಕ್ರಿಕೆಟ್​ ಸೇರಿದಂತೆ ಒಟ್ಟು ಕ್ಯಾಲೆಂಡರ್ ಇಯರ್​ನಲ್ಲಿ, 100ಕ್ಕಿಂತ ಹೆಚ್ಚು ಸಿಕ್ಸರ್ ಸಿಡಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ್ರು.
ಅಭಿಷೇಕ್ T20 ಕ್ರಿಕೆಟ್​ನ ಹೊಸ ಬಾಸ್. ಟ್ರ್ಯಾವಿಸ್ ಹೆಡ್, ಜೋಸ್ ಬಟ್ಲರ್, ಫಿಲ್ ಸಾಲ್ಟ್, ಸೂರ್ಯಕುಮಾರ್ ಯಾದವ್​ರಂತಹ ಡೇಂಜರಸ್​​​​ ಪ್ಲೇಯರ್​ಗಳಿಗಿಂತ ಅಭಿ, ದಿ ಗ್ರೇಟ್ T20 ಬ್ಯಾಟರ್ ಅನ್ನೋದಕ್ಕೆ ಇದಕ್ಕಿಂತ ಬೆಸ್ಟ್ ಎಕ್ಸಾಂಪಲ್ ಮತ್ತೊಂದಿಲ್ಲ.
ಇದನ್ನೂ ಓದಿ: ದಯಾಳ್​ಗೆ ಕೋರ್ಟ್​ನಿಂದ ರಿಲೀಫ್.. ಇತ್ತ ಗೊಂದಲದಲ್ಲಿ ಆರ್​ಸಿಬಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us