T20 ಕ್ರಿಕೆಟ್​​​ಗೆ ಅಭಿಷೇಕ್ ಶರ್ಮಾ ಕಿಂಗ್.. ಈ ಟಾಪ್ 5 ಇನ್ನಿಂಗ್ಸ್​ ಹೆಂಗಿದೆ ಗೊತ್ತಾ..?

ಟೀಮ್ ಇಂಡಿಯಾದ ಡಿಸ್ಟ್ರಕ್ಟೀವ್ ಌಂಡ್ ಡೇಂಜರಸ್ ಬ್ಯಾಟ್ಸ್​ಮನ್ ಅಭಿಷೇಕ್ ಶರ್ಮಾ T20 ಕ್ರಿಕೆಟ್​ನಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನ ಬರೆಯುತ್ತಿದ್ದಾರೆ. ಕ್ರೀಸ್​​ನಲ್ಲಿ ನಿಂತು ಸಿಕ್ಸರ್​ಗಳ ಸುರಿಮಳೆ ಸುರಿಸುತ್ತಿರುವ ಅಭಿಷೇಕ್ ತನ್ನ ಡೆಡ್ಲಿ ಬ್ಯಾಟಿಂಗ್​ನಿಂದ ಎದುರಾಗಳಿಗಳನ್ನ ಭಯ ಭೀತರನ್ನಾಗಿಸುತ್ತಿದ್ದಾರೆ

author-image
Ganesh Kerekuli
Abhishekh Sharma (1)
Advertisment

ಮಿಡ್ ವಿಕೆಟ್ ಮೇಲೆ ಪಿಕ್ ಅಪ್ ಶಾಟ್, ಇನ್​ಸೈಡ್ ಔಟ್ ಲಾಫ್ಟೆಡ್ ಡ್ರೈವ್, ಸ್ಟ್ರೇಟ್ ಸಿಕ್ಸ್, ಪುಲ್ ಶಾಟ್, ಲೇಟ್ ಕಟ್. ಹೀಗೆ ತನ್ನ ಸಿಗ್ನೇಚರ್ ಶಾಟ್​ಗಳ ಮೂಲಕ ಅಭಿಷೇಕ್ ಶರ್ಮಾ, ಕ್ರಿಕೆಟ್ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿದ್ದಾರೆ. ಯುವರಾಜ್ ಸಿಂಗ್, ಟ್ರಾವಿಸ್ ಹೆಡ್​​ರಂತೆ ಫ್ರೀ, ಫಿಯರ್​ಲೆಸ್, ಹೈ ಇಂಪ್ಯಾಕ್ಟ್, ಕ್ಲೀನ್ ಟೆಕ್ನಿಕ್ ಮತ್ತು ಮಾಡ್ರನ್ ಡೇ T20 ಕ್ರಿಕೆಟ್​​ನ ಗೇಟ್ ಬ್ಯಾಟ್ಸ್​ಮನ್ ಎನಿಸಿಕೊಂಡಿರೋ ಪಂಜಾಬ್​ನ  ಡಿಸ್ಟ್ರಕ್ಟೀವ್ ಌಂಡ್ ಡೇಂಜರಸ್ ಬ್ಯಾಟ್ಸ್​ಮನ್ ಅಭಿಷೇಕ್​ರ ಟಾಪ್ 5 T20 ಇನ್ನಿಂಗ್ಸ್​ ನೀವು ಮಿಸ್ ಮಾಡದೆ ನೋಡಲೇಬೇಕು.

ಗುವಾಹಟಿ T20 ಪಂದ್ಯ; 20 ಎಸೆತ, 68 ರನ್

ಗುವಾಹಟಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ T20 ಪಂದ್ಯದಲ್ಲಿ ಅಭಿಷೇಕ್, ರೌದ್ರಾವಾತಾರ ತಾಳಿದ್ರು. ಕೇವಲ 20 ಎಸೆತಗಳಲ್ಲಿ 5 ಸಿಕ್ಸರ್, 7 ಬೌಂಡ್ರಿ ಸಿಡಿಸಿದ ಅಭಿಷೇಕ್, ಅಜೇಯ 68 ರನ್ ಕಲೆಹಾಕಿದ್ರು. ಅಭಿಷೇಕ್ ಬ್ಯಾಟಿಂಗ್​​ ಸ್ಟ್ರೈಕ್​ರೇಟ್ 340. ​

ನಾಗ್ಪುರ T20 ಪಂದ್ಯ; 35 ಎಸೆತ, 84 ರನ್

ಕಿವೀಸ್ ವಿರುದ್ಧ ನಡೆದ ನಾಗ್ಪುರ T20 ಪಂದ್ಯದಲ್ಲಿ ಅಭಿಷೇಕ್ ಬ್ಯಾಟಿಂಗ್​​ಗೆ, ಎದುರಾಳಿಗಳು ಷೇಕ್ ಆದ್ರು. 35 ಎಸೆತಗಳಲ್ಲಿ 8 ಸಿಕ್ಸರ್, 5 ಬೌಂಡ್ರಿ ಬಾರಿಸಿದ ಪಂಜಾಬ್ ಪುತ್ತರ್, ಆರೆಂಜ್ ಸಿಟಿಯಲ್ಲಿ ಆರ್ಭಟಿಸಿದ್ರು.

ವಾಂಖೆಡೆ T20 ಪಂದ್ಯ; 54 ಎಸೆತ, 135 ರನ್

2025, ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ, ಅಭಿಷೇಕ್ ಶತಕ ವೀರನಾದ್ರು. ವಾಂಖೆಡೆಯಲ್ಲಿ ವಂಡರ್​​​ಫುಲ್ ಇನ್ನಿಂಗ್ಸ್ ಆಡಿದ ಅಭಿಷೇಕ್, 54 ಎಸೆತಗಳಲ್ಲಿ 13 ಸಿಕ್ಸರ್​ಗಳ ನೆರವಿನಿಂದ 135 ರನ್​​​​​​​​​​​ ಚಚ್ಚಿದ್ರು.

ಹರಾರೆ T20 ಪಂದ್ಯ; 47 ಎಸೆತ, 100 ರನ್

2024, ಜುಲೈನಲ್ಲಿ ಹರಾರೆಯಲ್ಲಿ ನಡೆದ T20 ಪಂದ್ಯದಲ್ಲಿ, ಅಭಿಷೇಕ್ ಬ್ಯಾಟಿಂಗ್​​ಗೆ ಜಿಂಬಾಬ್ವೆ ನಡುಗಿತು. 47 ಎಸೆತಗಳಲ್ಲಿ 8 ಸಿಕ್ಸರ್, 7 ಬೌಂಡ್ರಿ ಚಚ್ಚಿದ ಎಡಗೈ ಬ್ಯಾಟರ್, ಆಫ್ರಿಕಾ ನಾಡಲ್ಲಿ ದರ್ಬಾರ್ ನಡೆಸಿದ್ರು.

ಕೊಲ್ಕತ್ತಾ T20 ಪಂದ್ಯ; 34 ಎಸೆತ, 79 ರನ್

2025, ಜನವರಿ 22, ಕ್ರಿಕೆಟ್ ಕಾಶಿಯಲ್ಲಿ T20 ಸ್ಪೆಷಲಿಸ್ಟ್​ ಅಬ್ಬರ ಜೋರಾಗಿತ್ತು. ಆ ಪಂದ್ಯದಲ್ಲಿ ಆಂಗ್ಲರ ವಿರುದ್ಧ 8 ಸಿಕ್ಸರ್, 5 ಬೌಂಡ್ರಿ ಬಾರಿಸಿದ ಅಭಿಷೇಕ್, 34 ಎಸೆತಗಳಲ್ಲಿ 79 ರನ್ ದಾಖಲಿಸಿದ್ರು.

ಈ ಟಾಪ್ 5 ಬೆಸ್ಟ್ ಇನ್ನಿಂಗ್ಸ್​​ಗಳಲ್ಲಿ ಅಭಿಷೇಕ್, 200ಕ್ಕಿಂತ ಹೆಚ್ಚು ಸ್ಟ್ರೈಕ್​ರೇಟ್​​​ನಲ್ಲಿ ರನ್ ಹೊಡೆದಿದ್ದಾರೆ. ಇದು ವಿಶೇಷ ಮತ್ತು ಅಸಾಧ್ಯ ಕೂಡ ಹೌದು.! ಸದ್ಯ T20 ಕ್ರಿಕೆಟ್​ನ ನಂಬರ್.1 ಬ್ಯಾಟರ್ ಎನಿಸಿಕೊಂಡಿರೋ ಅಭಿಷೇಕ್, ಅಭಿಮಾನಿಗಳಿಗೆ ಹೀಗೆ ಎಂಟರ್​ಟೈನ್ಮೆಂಟ್ ನೀಡುತ್ತಿರಲಿ ಅನ್ನೋದೇ, ನಮ್ಮೆಲ್ಲರ ಆಶಯ.

ಇದನ್ನೂ ಓದಿ:ದೆಹಲಿಯಲ್ಲಿ ಸ್ವಾಟ್ ಮಹಿಳಾ ಕಮ್ಯಾಂಡೋ ಹತ್ಯೆ : ಕಾರಣವೇನು ? ಹಂತಕ ಯಾರು ಗೊತ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Abhishek Sharma
Advertisment