Advertisment

ಮೊಸರು ತಿನ್ನುತ್ತಿದ್ದೀರಾ.. ನಿಮ್ಮ ಆರೋಗ್ಯ ಎಷ್ಟು ಡೇಂಜರ್​ನಲ್ಲಿದೆ ಗೊತ್ತಾ..?

ಮೊಸರಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳು ಕರುಳಿನ ಆರೋಗ್ಯವನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತವೆ. ಹುರಿದ ಜೀರಿಗೆಯೊಂದಿಗೆ ಮೊಸರನ್ನು ಸೇವಿಸಿದ್ರೆ ಜೀರ್ಣಾಂಗ ವ್ಯವಸ್ಥೆಗೆ ಹೆಚ್ಚು ಉಪಯೋಗವಾಗುತ್ತದೆ.

author-image
Bhimappa
CURD_New
Advertisment

ಮೊಸರು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಮೊಸರನ್ನು ತೆಗೆದುಕೊಳ್ಳುವ ವಿಧಾನ ಮಾತ್ರ ಸರಿಯಾಗಿ ಇರಬೇಕು. ಆಗ ಮಾತ್ರ ಮೊಸರಿನಿಂದ ಎಲ್ಲ ಅಂಶಗಳು ನಮಗೆ ಸಿಗುತ್ತವೆ. ಇಲ್ಲದಿದ್ದರೆ ಇದು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮೊಸರು ಆಹಾರದ ಜೊತೆ ತೆಗೆದುಕೊಳ್ಳಲು ಸಮಯ, ಪದ್ಧತಿಗೆ ಸಂಬಂಧಿಸಿದಂತೆ ಆಯುರ್ವೇದದಲ್ಲಿ ಕೆಲವು ನಿಯಮಗಳಿವೆ. 

Advertisment

ಮೊಸರು ಯಾವಾಗಲೂ ದೇಹವನ್ನು ತಂಪಾಗಿಸುತ್ತದೆ. ಆದ್ದರಿಂದ ಇದನ್ನು ಯಾವಾಗಂದರೆ ಆವಾಗ ತಿನ್ನದೇ ಮಧ್ಯಾಹ್ನದ ಸಮಯದಲ್ಲಿ ಊಟದ ಜೊತೆ ತಿನ್ನುವುದು ಉತ್ತಮ. ಇದೇ ಸಮಯದಲ್ಲಿ ಇದು ದೇಹದ ಒಳಗೆ ಚೆನ್ನಾಗಿ ಜೀರ್ಣವಾಗುತ್ತದೆ. ಇದರಿಂದ ಮೊಸರಿನಲ್ಲಿರುವ ಪೋಷಕಾಂಶಗಳು ಸುಲಭವಾಗಿ ದೇಹಕ್ಕೆ ಪುಷ್ಠಿ ನೀಡುತ್ತವೆ. 

ಮೊಸರಿನಲ್ಲಿ ಪ್ರೊಬಯಾಟಿಕ್ಸ್​​ (Probiotics) ಸಮೃದ್ಧವಾಗಿದ್ದು ನಮಗೆ ಅದ್ಭುತವಾದ ಪ್ರಯೋಜನಗಳನ್ನು ನೀಡುತ್ತದೆ. ಇದರಲ್ಲಿರುವ ಒಳ್ಳೆಯ ಬ್ಯಾಕ್ಟಿರೀಯಾಗಳು ಕರುಳಿನ ಆರೋಗ್ಯವನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತವೆ. ಹುರಿದ ಜೀರಿಗೆಯೊಂದಿಗೆ ಮೊಸರನ್ನು ಸೇವಿಸಿದ್ರೆ ಜೀರ್ಣಾಂಗ ವ್ಯವಸ್ಥೆಗೆ ಹೆಚ್ಚು ಉಪಯೋಗವಾಗುತ್ತದೆ. ಇದು ಮಲಬದ್ಧತೆ ಹಾಗೂ ಅಜೀರ್ಣದಂತಹ ಹೊಟ್ಟೆಯ ಸಮಸ್ಯೆಗಳನ್ನು ಉಪಶಮನ ಮಾಡುತ್ತದೆ. 

ಇದನ್ನೂ ಓದಿ:ನವರಾತ್ರಿ ಉಪವಾಸ.. ಆರೋಗ್ಯದ ಎಚ್ಚರಿಕೆ ಏನು, ಈ ರೀತಿಯಾಗಿ ಮಾಡಲೇಬೇಡಿ!

Advertisment

CURD

ಪೋಷಕಾಂಶಗಳ ಅಗರ ಎಂದೇ ಮೊಸರನ್ನು ಕರೆಯಬಹುದು. ಏಕೆಂದರೆ ಇದು ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಅಲ್ಲದೇ ಯಾವಾಗಲಾದರೂ ಸುಸ್ತು, ಬಲಹೀನತೆ ಅನಿಸಿದರೆ ಮೊಸರನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮ. ಮೊಸರಿಗೆ ಸಕ್ಕರೆ ಅಥವಾ ಉಪ್ಪು ಸೇರಿಸುವುದರಿಂದ ನಮಗೆ ಡಬಲ್ ಪ್ರಯೋಜನಗಳು ಸಿಗುತ್ತವೆ. ಚಳಿಗಾಲದಲ್ಲಿ ಬೆಳಗ್ಗೆ, ರಾತ್ರಿ ಮೊಸರು ತಿನ್ನುವುದು ಬಿಡಬೇಕು.  

ಆಯುರ್ವೇದ ಪ್ರಕಾರ ಮಧ್ಯಾಹ್ನದ ಸಮಯದಲ್ಲಿ ಮೊಸರು ತಿನ್ನಬಹುದು. ಆದರೆ ರಾತ್ರಿ ಸಮಯದಲ್ಲಿ ತಿನ್ನಲೇಬಾರದು. ರಾತ್ರಿ ಮಲಗುವಾಗ ಮೊಸರು ತಿಂದರೆ, ಜ್ವರ, ಕೆಮ್ಮು, ಸೈನಸ್​ ಕಫ ಹೆಚ್ಚಾಗುತ್ತದೆ. ಏಕೆಂದರೆ ಮೊದಲೇ ಹೇಳಿದಂತೆ ಮೊಸರಲ್ಲಿ ತಂಪಾಗಿಸುವ ಗುಣ ಅಧಿಕವಾಗಿರುತ್ತದೆ. ರಾತ್ರಿ ವೇಳೆ ನಮ್ಮ ದೇಹದ ಉಷ್ಣತೆ ಯಾವಾಗಲೂ ಕಡಿಮೆ ಇರುತ್ತದೆ. ಇದೇ ಸಮಯದಲ್ಲಿ ಮೊಸರು ದೇಹದ ಮೇಲೆ ನಕರಾತ್ಮಕವಾಗಿ ಪರಿಣಾಮ ಬೀರುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Health Tips Skin Health Curd
Advertisment
Advertisment
Advertisment