/newsfirstlive-kannada/media/media_files/2025/09/23/health_fasting_1-2025-09-23-16-19-10.jpg)
ದೇಶದಲ್ಲಿ ಸದ್ಯ ಎಲ್ಲೆಡೆ ನವರಾತ್ರಿಯ ಸಡಗರ, ಸಂಭ್ರಮ ನಡೆಯುತ್ತಿದ್ದು ದೇವತೆಗಳನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಅದರಲ್ಲಿ ಮಾತೆ ದುರ್ಗೆಯ ಆರಾಧನೆ ಮಾಡಲಾಗುತ್ತದೆ. ನವರಾತ್ರಿ ಹಿನ್ನೆಲೆಯಲ್ಲಿ ದೈವದ ಮೇಲೆ ನಂಬಿಕೆಯಿಂದ ಮನಸ್ಸಿಗೆ ಶಾಂತಿ ಹಾಗೂ ಬದುಕಿನ ಚೈತನ್ಯಕ್ಕಾಗಿ ಸಾಕಷ್ಟು ಜನರು ಉಪವಾಸ ಮಾಡುತ್ತಿದ್ದಾರೆ. ಉಪವಾಸ ಇರುವ ಯಾರೇ ಆಗಲಿ ಈ ರೀತಿ ಮಾಡಲೇಬೇಡಿ.
ಉಪವಾಸ ಇದ್ದಾಗ ನೀರು ಕುಡಿಯುವುನ್ನು ಬಿಡಬಾರದು. ದೇಹಕ್ಕೆ ಆಹಾರ ಇಲ್ಲದ ಕಾರಣ ತೇವಾಂಶ ಕಾಪಾಡಲು ಹಾಗೂ ದೇಹದ ಅಂಗಾಂಶಗಳು ಹೆಚ್ಚು ಚಟುವಟಿಕೆಯಿಂದ ಇರಲು ಹಾಗೂ ನಿರ್ಜಲೀಕರಣವನ್ನ ತಪ್ಪಿಸಲು ನೀರು ಕುಡಿಯಲೇಬೇಕು. ನಮ್ಮ ದೇಹಕ್ಕೆ ನೀರು ಇಲ್ಲ ಎಂದರೆ ಮಲಬದ್ಧತೆ, ಆಮ್ಲೀಯತೆ ಕಾಡುತ್ತದೆ. ಉಪವಾಸ ಇದ್ದರೂ ಕ್ಯಾರೆಟ್​, ಕಲ್ಲಂಗಡಿ, ಸೌತೆಕಾಯಿ, ಬೀಟ್​ರೂಟ್​ ಅಂತವು ಸೇವಿಸಬಹುದು.
ಕೆಲವೊಬ್ಬರು ಉಪವಾಸ ಇದ್ದೀವಿ ಎಂದರೆ ಸಾಕು ಮೊದಲು ಅಣಿಯಾಗುವುದೇ ಟೀ, ಕಾಫಿಗೆ. ಗಂಟೆ ಗಂಟೆಗೆ ಟೀ ಅಥವಾ ಕಾಫಿ ಸೇವನೆ ಮಾಡುವುದು. ಇದು ತಪ್ಪು. ಉಪವಾಸ ಇದ್ದಾಗ ಕಾಫಿ, ಟೀ ಕುಡಿಯಲೇಬಾರದು. ಇವುಗಳ ಸೇವನೆಯಿಂದ ಗ್ಯಾಸ್ಟ್ರಿಕ್ ಆಗುತ್ತದೆ. ದೇಹದಲ್ಲಿ ಆಮ್ಲತೆ ಹೆಚ್ಚುತ್ತದೆ. ಆಮ್ಲ ಅಧಿಕವಾದರೆ ಸಾಮಾನ್ಯವಾಗಿ ಎದೆ ಉರಿ ಬರುತ್ತದೆ. ಹೀಗಾಗಿ ಉಪವಾಸ ಇದ್ದಾಗ ಟೀ, ಕಾಫಿಗೆ ಗುಡ್​ಬೈ ಹೇಳಿ. ಇದರ ಬದಲಿಗೆ ಆರೆಂಜ್, ನಿಂಬೆ ಸೇರಿದಂತೆ ಇತರೆ ಹಣ್ಣುಗಳ ಜ್ಯೂಸ್​ ಆಯ್ಕೆ ನಿಮ್ಮದಾಗಿರಲಿ.
ಇದನ್ನೂ ಓದಿ:ನೀವು ಆರೋಗ್ಯವಾಗಿರಬೇಕಾ.. ಹಾಗಾದ್ರೆ ಊಟ ಆದ್ಮೇಲೆ ಯಾರೂ ಹೀಗೆ ಮಾಡಬೇಡಿ..!
ಹಬ್ಬದ ಉಪವಾಸ ಎಂದು ದಿನ ಪೂರ್ತಿ ಏನನ್ನು ತಿನ್ನದೇ ಇರಬಾರದು. ದೇಹದ ಆರೋಗ್ಯಕ್ಕಾಗಿ ಬಾಳೆಹಣ್ಣು, ಬಾದಾಮಿ, ಮಜ್ಜಿಗೆ, ಎಳೆನೀರು ಸೇರಿದಂತೆ ಮನೆಯಲ್ಲಿನ ಕೆಲ ಲಘು ಆಹಾರ ಸೇವನೆ ಮಾಡಬಹುದು. ಒಂದು ವೇಳೆ ನೀವು ದಿನ ಪೂರ್ತಿ ಏನನ್ನು ತಿನ್ನದೇ ಉಪವಾಸ ಮಾಡಿದರೆ ಹೊಟ್ಟೆಯಲ್ಲಿ ಆಮ್ಲ ಹೆಚ್ಚುತ್ತದೆ. ಅನಿಲ ಅಧಿಕವಾಗುತ್ತದೆ. ಸುಸ್ತು ಹೆಚ್ಚಾಗಿ ದೇಹ ಅನಾರೋಗ್ಯಕ್ಕೆ ತುತ್ತಾಗುತ್ತದೆ.
ಇನ್ನು ಹೊಟ್ಟೆ ಖಾಲಿ ಇದ್ದಾಗ ಕರಿದ ತಿಂಡಿಗಳು ಅಂದರೆ ಎಣ್ಣೆಯಲ್ಲಿ ಕರಿಯಲಾದ ಪಕೋಡ, ಸಮೋಸಾ, ಚಿಪ್ಸ್, ಪಾನಿಪುರಿ, ಗೋಬಿ ಮಂಚೂರಿ, ನೂಡಲ್ಸ್ ಸೇರಿದಂತೆ ಇತರೆ ಇಂಥಹ ಹಲವಾರು ವಿಧದ ತಿಂಡಿ ಸೇವನೆ ತಪ್ಪಿಸಿ. ಇವುಗಳಿಂದ ದೇಹಕ್ಕೆ ಹೆಚ್ಚು ಹಾನಿಯೇ ಹೊರತು ಲಾಭ ಏನು ಇರಲ್ಲ. ಉಪವಾಸ ಇದ್ದಾಗ ಆದಷ್ಟು ಮನೆಯ ಲಘು ಆಹಾರ, ಜ್ಯೂಸ್​ಗಳೇ ನಿಮ್ಮ ಆಯ್ಕೆ ಆಗಿರಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ