/newsfirstlive-kannada/media/media_files/2025/10/05/sprouts_health-2025-10-05-18-43-39.jpg)
ಮೊಳಕೆ ಕಾಳುಗಳನ್ನು ತಿನ್ನುವುದರಿಂದ ನಮ್ಮ ಆರೋಗ್ಯ ಎಷ್ಟೋ ಸುಧಾರಿಸುತ್ತದೆ. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುತ್ತದೆ. ಇದು ಅಲ್ಲದೇ ದೇಹದ ತೂಕ ಕಡಿಮೆ ಮಾಡಲು ಕೂಡ ಸಹಾಯಕವಾಗುತ್ತದೆ. ಧಾನ್ಯ ಮೊಳಕೆ ಹೊಡಿದಿರುತ್ತೆ ಎಂದರೆ ಮೊಳಕೆಯಲ್ಲಿ ವಿಟಮಿನ್ ಬಿ ಕಾಂಪ್ಲೆಕ್ಸ್​, ವಿಟಮಿನ್ ಎ, ವಿಟಮಿನ್ ಸಿ, ಪ್ರೋಟಿನ್ ಸೇರಿದಂತೆ ಇನ್ನು ಅನೇಕ ಪೋಷಕಾಂಶ ಇರುತ್ತವೆ.
ಬೆಳಗಿನ ಸಮಯದಲ್ಲಿ ಮೊಳಕೆ ಕಾಳುಗಳನ್ನು ಅಲ್ಪ ಆಹಾರ ಮಾದರಿ ತಿನ್ನಬಹುದು. ರಾತ್ರಿ ಊಟದಲ್ಲೂ ಇವುಗಳನ್ನು ಸೇವನೆ ಮಾಡಬಹುದು. ಇದು ಅಲ್ಲದೇ ತರಕಾರಿ ಅಥವಾ ಸಲಾಡ್​ಗಳಲ್ಲೂ ಸುಲಭವಾಗಿ ಸೇರಿಸಿಕೊಂಡು ತಿನ್ನಬಹುದು. ಶೀತ, ಕೆಮ್ಮು ಇದ್ದವರು ಚಳಿಗಾಲದಲ್ಲಿ ರಾತ್ರಿ ಊಟದಲ್ಲಿ ಮೊಳಕೆ ಕಾಳು ತಿನ್ನುವಾಗ ಎಚ್ಚರಿಕೆ ವಹಿಸಬೇಕು.
ಮೊಳಕೆ ಬಂದ ಹೆಸರು ಕಾಳುಗಳನ್ನು ತಿನ್ನುವುದರಿಂದ ಚರ್ಮದ ಆರೋಗ್ಯ ವೃದ್ಧಿಸುತ್ತದೆ. ನಮ್ಮ ದೇಹದ ಮಾಂಸ ಖಂಡಗಳ ನಿರ್ಮಾಣಕ್ಕೆ ಮತ್ತು ಅಭಿವೃದ್ಧಿಗೆ ಸಹಾಯವಾಗುವ ಅತ್ಯಂತ ಹೆಚ್ಚಿನ ಗುಣಮಟ್ಟದ ಅಮೈನೋ ಆಮ್ಲಗಳು ಮೊಳಕೆ ಕಟ್ಟಿದ ಕಾಳುಗಳಲ್ಲಿ ಪ್ರೋಟೀನ್ ರೂಪದಲ್ಲಿ ಸಿಗುತ್ತದೆ.
ಇದನ್ನೂ ಓದಿ: ಕಣ್ಣುಗಳ ಆರೋಗ್ಯಕ್ಕಾಗಿ 20-20-20 ನಿಯಮ ರೂಢಿಸಿಕೊಳ್ಳಿ.. ಹೇಗೆ ಗೊತ್ತಾ..?
ಮೊಳಕೆಕಾಳುಗಳು ರೋಗ ನಿರೋಧಕ ಶಕ್ತಿಯನ್ನು ಅಧಿಕಗೊಳಿಸಲು ನೆರವಾಗುತ್ತವೆ. ಇದರ ಜೊತೆಗೆ ಸಂಕೀರ್ಣ ಕಾರ್ಬೋಹೈಡ್ರೇಟ್ (complex carbohydrate) ಅಂಶಗಳನ್ನು ದೇಹದಲ್ಲಿ ವೇಗವಾಗಿ ಜೀರ್ಣವಾಗುವಂತೆ ಬದಲಾಯಿಸಿ ಆರೋಗ್ಯಕರ ಜೀರ್ಣ ಶಕ್ತಿ ನಮ್ಮದಾಗುತ್ತದೆ.
ವಿಟಮಿನ್ ಸಿ ಮೊಳಕೆ ಕಟ್ಟಿದ ಕಾಳುಗಳಲ್ಲಿ ಸಮೃದ್ಧವಾಗಿರುತ್ತದೆ. ಶಕ್ತಿಯುತವಾದ ಆಂಟಿ ಆಕ್ಸಿಡೆಂಟ್ (Antioxidant) ರೂಪದಲ್ಲಿ ದೇಹಕ್ಕೆ ದೊರೆಯುತ್ತದೆ. ಇದರಿಂದ ಫ್ರೀ ರಾಡಿಕಲ್ ಅಂಶ (Free radical factor) ಗಳ ವಿರುದ್ಧ ಹೋರಾಡಿ ಅನೇಕ ಸೋಂಕು, ಕಾಯಿಲೆಗಳು ದೇಹಕ್ಕೆ ಅಂಟಿಕೊಳ್ಳದಂತೆ ತಡೆಗಟ್ಟುತ್ತವೆ. ಆರೋಗ್ಯವಾಗಿರುವಂತೆ ನಮ್ಮನ್ನು ರಕ್ಷಣೆ ಮಾಡುತ್ತವೆ.
ಮೊಳಕೆ ಕಾಳುಗಳನ್ನು ನಾವು ಸೇವಿಸುವುದರಿಂದ ದೊಡ್ಡ ಪ್ರಮಾಣದಲ್ಲೇ ನಮ್ಮ ದೇಹಕ್ಕೆ ಕಬ್ಬಿಣ ಅಂಶ ದೊರೆಯುತ್ತದೆ. ಕೆಂಪು ರಕ್ತ ಕಣಗಳ ಸಮೃದ್ಧವಾಗಿ ಉತ್ಪತ್ತಿಯಾಗುತ್ತವೆ. ಆಮ್ಲಜನಕ ದೇಹದಲ್ಲಿ ಅಧಿಕಗೊಂಡು ಇಡೀ ದೇಹದ ತುಂಬೆಲ್ಲ ಸಂಚಾರ ಆಗಲು ನೆರವಾಗುತ್ತದೆ. ಮೊಳಕೆ ಕಾಳುಗಳಿಂದ ದೇಹದಲ್ಲಿ ಕಬ್ಬಿಣದ ಅಂಶದ ಕೊರತೆ ನೀಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ