/newsfirstlive-kannada/media/media_files/2025/10/04/eyes_health-2025-10-04-18-21-56.jpg)
ನಮ್ಮ ಕಣ್ಣುಗಳು ಆರೋಗ್ಯವಾಗಿ ಇರಬೇಕು ಎಂದರೆ ನಿತ್ಯದ ನಮ್ಮ ಅಭ್ಯಾಸಗಳು ಕೂಡ ಇದರಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಕಣ್ಣು ಅಲರ್ಜಿ, ಕಣ್ಣುಗಳ ನೋಟ ಸರಿಯಾಗಿ ಇಲ್ಲದಿರುವುದಕ್ಕೆ ಇದರ ಹಿಂದೆ ಅನೇಕ ಕಾರಣಗಳು ಇವೆ. ಇವುಗಳನ್ನು ಆಗಾಗ ನಾವು ಕಡೆಗಣಿಸುತ್ತವೆ. ಆದರೆ ನಮ್ಮ ದೈನಂದಿನ ದಿನಚರಿಯಲ್ಲಿ ಕೆಲವು ಸಣ್ಣ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಂಡರೇ ಕಣ್ಣುಗಳನ್ನು ತುಂಬಾ ಆರೋಗ್ಯವಾಗಿ ಇಡಬಹುದು.
ಕಣ್ಣಿನ ಅಲರ್ಜಿ ಹೋಗಲಾಡಿಸಬೇಕು ಎಂದರೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಅಲರ್ಜಿ ಆಗಿದ್ದಾಗ ಕಣ್ಣುಗಳನ್ನು ಪದೇ ಪದೇ ಮುಟ್ಟಬಾರದು. ಹೀಗೆ ಮಾಡುವುದರಿಂದ ಇನ್ಫೆಕ್ಷನ್​ ಆಗಿ ಕಣ್ಣಿನ ಸಮಸ್ಯೆಗಳು ತೀವ್ರವಾಗುತ್ತವೆ. ಕೈಗಳ ಮೂಲಕ ಬ್ಯಾಕ್ಟೀರಿಯಾ ಬರದಂತೆ ಎಚ್ಚರವಹಿಸಬೇಕು. ನೀವು ಇರುವ ಪ್ರದೇಶದ ಸುತ್ತ ಧೂಳು ಅಧಿಕವಾಗಿದ್ರೆ ಅಲ್ಲಿಂದ ನೀವು ದೂರ ನೆಲಸಬೇಕು. ಇಲ್ಲದಿದ್ದರೇ ಕಣ್ಣುಗಳಿಗೆ ಗ್ಲಾಸ್​ಗಳನ್ನು ಉಪಯೋಗಿಸಬೇಕು. ಕಣ್ಣಿನ ಸಮಸ್ಯೆ ಅತಿಯಾದರೆ ಕೂಡಲೇ ವೈದ್ಯರನ್ನ ಸಂಪರ್ಕಿಸಬೇಕು.
ಈ ಕಂಪ್ಯೂಟರ್​ ಯುಗದಲ್ಲಿ ಸ್ಕ್ರೀನ್​ಗಳನ್ನು ನೋಡುವುದು ಸರ್ವೇಸಾಮಾನ್ಯ. ಇದಕ್ಕೆ 20-20-20 ನಿಯಮ ಪಾಲನೆ ಮಾಡಬೇಕು. 20 ನಿಮಿಷಕ್ಕೊಮ್ಮೆ 20 ಸೆಕೆಂಡ್ಸ್​ ಕಣ್ಣಿಗೆ ವಿಶ್ರಾಂತಿ ನೀಡಬೇಕು. ಇನ್ನು 20 ಎಂದರೆ ನಿಮ್ಮಿಂದ 20 ಹೆಜ್ಜೆ ದೂರ ಇರುವ ವಸ್ತುವಿನ ಮೇಲೆ ದೃಷ್ಟಿ ಇಟ್ಟು ನೋಡಬೇಕು. ಇನ್ನೊಂದು ಮುಖ್ಯ ಸಂಗತಿ ಎಂದರೆ ಕಚೇರಿಯಲ್ಲಿ ಕೆಲಸ ಮುಗಿದ ಮೇಲೆ ಮೊಬೈಲ್​ನಲ್ಲಿ ದೂರ ಇರುವುದು ಉತ್ತಮ.
ಇದನ್ನೂ ಓದಿ:ನೀವು ಆರೋಗ್ಯವಾಗಿರಬೇಕಾ.. ಹಾಗಾದ್ರೆ ಊಟ ಆದ್ಮೇಲೆ ಯಾರೂ ಹೀಗೆ ಮಾಡಬೇಡಿ..!
ಕಣ್ಣುಗಳ ಆರೋಗ್ಯಕ್ಕಾಗಿ ನಿತ್ಯ ದೀರ್ಘವಾದ ನಿದ್ದೆ ಮಾಡುವುದು ನಿಮ್ಮ ದಿನಚರಿಯಲ್ಲಿ ರೂಢಿಸಿಕೊಳ್ಳಬೇಕು. ಕಣ್ಣಿಗಾಗಿ 7 ರಿಂದ 8 ಗಂಟೆ ನಿದ್ದೆ ಅತ್ಯವಶ್ಯಕವಾಗಿದೆ. ಹೀಗೆ ಮಾಡಿದರೆ ಕಣ್ಣುಗಳು ಫ್ರೆಶ್​ ಆಗಿ ಇರುತ್ತವೆ. ಯಾವಾಗ ಅಂದರೆ ಅವಾಗ ಮೊಬೈಲ್, ಕಂಪ್ಯೂಟರ್​ ನೋಡಿಕೊಂಡು ಮಧ್ಯರಾತ್ರಿವರೆಗೆ ಎದ್ದಿರಬಾರದು. ಇದು ಕಣ್ಣುಗಳನ್ನು ಸಮಸ್ಯೆಗೆ ಒಡ್ಡುತ್ತವೆ.
ಹಸಿರು ತರಕಾರಿಗಳಲ್ಲಿ ವಿಟಮಿನ್ ಎ ಅಂಶ ಜೊತೆಗೆ ಇತರೆ ಪೋಷಕಾಂಶಗಳು ಇರುವುದರಿಂದ ಕಣ್ಣುಗಳ ಆರೋಗ್ಯ ಕಾಪಾಡಬಹುದು. ಹೀಗಾಗಿ ಕ್ಯಾರೆಟ್​, ಗೆಣಸು, ಬೀಟ್​ರೂಟ್ ಸೇರಿದಂತೆ ಹಸಿರು ತರಕಾರಿಗಳನ್ನು ಊಟದಲ್ಲಿ ಸೇರಿಸಿಕೊಳ್ಳಿ. ಅದೇ ರೀತಿ ಬಾದಮಿ, ವಾಲ್​​ನಟ್ಸ್​, ಮೀನು, ಮೊಟ್ಟೆಗಳಂತಹ ಒಮೆಗಾ-3 ಅಧಿಕ ಇರುವ ಆಹಾರದ ಆಯ್ಕೆ ನಿಮ್ಮದಾಗಿರಬೇಕು. ಇದು ನಿಮ್ಮ ಕಣ್ಣುಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳುತ್ತವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ