/newsfirstlive-kannada/media/media_files/2025/09/04/banana-1-2025-09-04-22-28-25.jpg)
ಬಾಳೆಹಣ್ಣು ಅನೇಕರ ನೆಚ್ಚಿನ ಹಣ್ಣು. ಅದು ಅನೇಕ ಆರೋಗ್ಯಕರ ಪ್ರಯೋಜನ ಹೊಂದಿದೆ. ಅದನ್ನು ನಿಯಮಿತವಾಗಿ ತಿನ್ನೋದ್ರಿಂದ ತುಂಬಾನೇ ಪ್ರಯೋಜನಕಾರಿ, ವಿಶೇಷವಾಗಿ ಮಲಬದ್ಧತೆ ಸಮಸ್ಯೆ ಇರೋರಿಗೆ. ಬಾಳೆ ಹಣ್ಣಿನಲ್ಲಿ ಫೈಬರ್ ಸಮೃದ್ಧವಾಗಿದೆ. ಕರುಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಬಾಳೆಹಣ್ಣುಗಳು ಪೋಷಕಾಂಶಗಳಿಂದ ಕೂಡಿರುತ್ತವೆ. ಪೊಟ್ಯಾಸಿಯಮ್, ವಿಟಮಿನ್ ಬಿ 6, ಫೈಬರ್ ಮತ್ತು ಮೆಗ್ನೀಸಿಯಮ್ ಇರುತ್ತವೆ. ಆದರೆ ಮಧುಮೇಹ ರೋಗಿಗಳು ಬಾಳೆಹಣ್ಣನ್ನು ಅತಿಯಾಗಿ ತಿನ್ನಬಾರದು.
ಬಾಳೆ ಹಣ್ಣು ಯಾವಾಗ ತಿನ್ನಬೇಕು..?
ಉಪಹಾರಕ್ಕೂ ಮೊದಲು
ಬೆಳಗಿನ ಉಪಾಹಾರಕ್ಕೆ ಮೊದಲು ತಿನ್ನೋದ್ರಿಂದ ಬೆಳಗಿನ ಹಸಿವನ್ನು ನಿಯಂತ್ರಿಸಬಹುದು. ಒಂದು ಬಾಳೆಹಣ್ಣಿನಲ್ಲಿ ಸುಮಾರು 3 ಗ್ರಾಂ ಫೈಬರ್ ಇರುತ್ತದೆ. ಫೈಬರ್ ಜೀರ್ಣಕ್ರಿಯೆಗೆ ಸಹಾಯಕ. ಇದು ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿರುವಂತೆ ಮಾಡುತ್ತದೆ. ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಮತ್ತು ವಿಟಮಿನ್ ಬಿ6 ಕೂಡ ಸಮೃದ್ಧವಾಗಿದೆ. ಶಕ್ತಿ, ಜೀರ್ಣಕ್ರಿಯೆಗೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ವ್ಯಾಯಾಮದ ಮೊದಲು
ವ್ಯಾಯಾಮ ಮಾಡುವ ಮೊದಲು ತಿನ್ನೋದ್ರಿಂದ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಅವುಗಳಲ್ಲಿರುವ ಕಾರ್ಬೋಹೈಡ್ರೇಟ್‌ಗಳು ಕೇವಲ 15-30 ನಿಮಿಷಗಳಲ್ಲಿ ಜೀರ್ಣವಾಗುತ್ತವೆ. ಅವು ಶಕ್ತಿಯನ್ನು ತ್ವರಿತವಾಗಿ ಹೆಚ್ಚಿಸುತ್ತವೆ. ಅದಕ್ಕಾಗಿಯೇ ಜಿಮ್ ಪ್ರಿಯರ ನೆಚ್ಚಿನ ಹಣ್ಣು.
ಜೀರ್ಣಕ್ರಿಯೆ
ಊಟದ ಜೊತೆಗೆ ಬಾಳೆಹಣ್ಣು ತಿನ್ನೋದ್ರಿಂದ ಜೀರ್ಣಕ್ರಿಯೆಗೆ ಸಹಾಯಕ. ಕರುಳಿನಲ್ಲಿರುವ ಪ್ರಯೋಜನಕಾರಿ ಬ್ಯಾಕ್ಟೀರಿಯಾವನ್ನು ಪೋಷಿಸುತ್ತದೆ. ಆದರೆ ಬಾಳೆಹಣ್ಣನ್ನು ಮಾತ್ರ ತಿನ್ನೋದ್ರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಬೇಗನೆ ಹೆಚ್ಚಾಗುತ್ತದೆ. ಹೀಗಾಗಿ ಸೂಕ್ಷ್ಮ ಆರೋಗ್ಯ ಹೊಂದಿರೋರು ಜಾಗೃತರಾಗಿರಬೇಕು.
ನಿದ್ರೆಗೆ ತುಂಬಾ ಒಳ್ಳೆಯದು
ನಿದ್ದೆ ಬರುತ್ತಿಲ್ಲವೇ? ಬಾಳೆಹಣ್ಣು ಇದಕ್ಕೆ ಪರಿಹಾರವಾಗಬಹುದು. ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ವಿಟಮಿನ್ ಬಿ6 ಮೆಲಟೋನಿನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಇದು ನಿದ್ರೆಗೆ ಪರಿಣಾಮಕಾರಿ.
ನೀವು ಯಾವಾಗ ತಿನ್ನಬಾರದು?
ಆರೋಗ್ಯ ತಜ್ಞರ ಪ್ರಕಾರ.. ಖಾಲಿ ಹೊಟ್ಟೆಯಲ್ಲಿ ಮಾಗಿದ ಬಾಳೆಹಣ್ಣನ್ನು ತಿನ್ನುವುದರಿಂದ ಹಠಾತ್ ಶಕ್ತಿ ಹೆಚ್ಚಾಗುತ್ತದೆ. ನಂತರ ಅದು ವೇಗವಾಗಿ ಕಡಿಮೆಯಾಗುತ್ತದೆ. ಇದರಿಂದ ದೇಹ ದುರ್ಬಲಗೊಳ್ಳುತ್ತದೆ. ಕೆಲವರಿಗೆ ಜೀರ್ಣಕ್ರಿಯೆ ಸಮಸ್ಯೆಗಳೂ ಇರಬಹುದು. ಹಾಗಾಗಿ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣನ್ನು ತಿನ್ನುವುದಕ್ಕಿಂತ ಸ್ವಲ್ಪ ಪ್ರೋಟೀನ್ ಪದಾರ್ಥಗಳ ಜೊತೆಗೆ ತೆಗೆದುಕೊಳ್ಳುವುದು ಉತ್ತಮ. ಬಾಳೆಹಣ್ಣು ಆರೋಗ್ಯಕರ ದೈನಂದಿನ ತಿಂಡಿ. ಆದರೆ ಅದನ್ನು ಸೇವಿಸುವ ಸಮಯವೂ ಬಹಳ ಮುಖ್ಯ.
ಇದನ್ನೂ ಓದಿ:ಹೃದಯ ಕಾಯಿಲೆಗಳ ಪತ್ತೆ ಹಚ್ಚುವ ಕ್ಯಾತ್ ಲ್ಯಾಬ್ ಆರಂಭಕ್ಕೆ ಆರೋಗ್ಯ ಇಲಾಖೆ ಪ್ಲ್ಯಾನ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ