/newsfirstlive-kannada/media/media_files/2025/10/13/health_yawning-1-2025-10-13-17-52-45.jpg)
ಎಲ್ಲರೂ ನಿದ್ದೆ ಮಾಡುತ್ತಾರೆ. ಆದರೆ ಯಾರು ಸಂಪೂರ್ಣವಾಗಿ ನಿದ್ರಿಸುವುದಿಲ್ಲವೋ ಅವರಿಗೆ ಆಕಳಿಕೆ ಬರುವುದು ಸಾಮಾನ್ಯ. ಒಂದು ವೇಳೆ ನೀವು ಸಂಪೂರ್ಣವಾಗಿ ನಿದ್ದೆ ಮಾಡಿದ್ದರೂ, ಸಾಕಷ್ಟು ವಿಶ್ರಾಂತಿ ಪಡೆದಿದ್ದರು ಆಕಳಿಕೆ ಬರುತ್ತಿವೆ ಎಂದರೆ ಅಲ್ಲಿ ಏನೋ ಸಮಸ್ಯೆ ಇದೆ ಎಂದರ್ಥ. ಹೀಗಾಗಿ ಪದೇ ಪದೇ ಆಕಳಿಕೆ ಬರುತ್ತಿದ್ದರೇ ಅಪಾಯಕಾರಿ ಲಕ್ಷಣವಾಗಿರುವ ಸಾಧ್ಯತೆ ಇದ್ದು ಆದಷ್ಟು ಬೇಗ ಡಾಕ್ಟರ್​ ಅನ್ನು ಸಂಪರ್ಕಿಸಬೇಕು.
ನಮ್ಮ ದೇಹಕ್ಕೆ ವಿಶ್ರಾಂತಿ ಬೇಕಾದಾಗ ಹಾಗೂ ಮೆದುಳಿಗೆ ಆಮ್ಲಜನಕ ಕಡಿಮೆ ಆದಾಗ ನಮ್ಮಲ್ಲೇ ನೈಸರ್ಗಿಕವಾಗಿ ಆಕಳಿಕೆ ಬರುತ್ತವೆ. ಆದರೂ ಯಾವುದೇ ಆಯಾಸ, ನಿದ್ದೆ ಕೊರತೆ, ಯಾವುದೇ ಲಕ್ಷಣಗಳಿಲ್ಲದೆ ನಿರಂತರವಾಗಿ ಆಕಳಿಕೆಗಳು ಬರಲೇಬಾರದು.
ದೇಹದಲ್ಲಿ ಉಷ್ಣತೆ ಜಾಸ್ತಿ ಆದಾಗ ಅದನ್ನು ನಿಯಂತ್ರಿಸುವಲ್ಲಿನ ಸಮಸ್ಯೆಗಳಿಂದಲೂ ಆಕಳಿಕೆಗಳು ಆಗಾಗ ಬರುತ್ತಿರಬಹುದು. ಇದು ನರವೈಜ್ಞಾನಿಕ ಅಸ್ವಸ್ಥತೆ ಆಗಿರಬಹುದು.
ನಮಗೆ ಏನಾದರೂ ಅತಿಯಾಗಿ ಆಕಳಿಕೆಗಳು ಬರುತ್ತಿದ್ದರೇ ರಕ್ತ ಪರಿಚಲನೆ, ಹೃದಯಾಘಾತದ ಸಮಸ್ಯೆಗಳಿಗೆ ಕಾರಣ ಎನ್ನುವುದು ಸೂಚಿಸುತ್ತದೆ.
ಸುಮ್ಮನೆ ಆಕಳಿಕೆ ಬರುತ್ತಿದ್ದರೇ ಅದನ್ನು ಮೆದುಳಿನ ಗೆಡ್ಡೆ, ಪಾರ್ಶ್ವವಾಯುನಂತ ಕಾಯಿಲೆಗಳ ಲಕ್ಷಣವಾಗಿರುವ ಸಾಧ್ಯತೆಗಳಿವೆ. ಇಂತಹ ವೇಳೆ ಸೂಕ್ತ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಬೇಕು. ಅವಶ್ಯಕತೆ ಇದ್ದಲ್ಲಿ ವೈದ್ಯರು ಹೇಳಿದ್ದನ್ನು ನಾವು ಮಾಡಲೇಬೇಕು.
ಹಗಲಿನಲ್ಲಿ ನಿದ್ದೆ ಮಾಡುವುದರಿಂದ ಸೋಮಾರಿತನ ಬರುವುದಲ್ಲದೇ ವಾಹನ ಅಪಘಾತಗಳು, ಮಾನಸಿಕ ಆರೋಗ್ಯ, ಕೆಲಸದ ದೋಷ ಮತ್ತು ದೀರ್ಘಕಾಲಿನ ಕಾಯಿಲೆಗೂ ಎಡೆಮಾಡಿಕೊಡುವ ಸಾಧ್ಯತೆ ಇರುತ್ತದೆ. ಆಕಳಿಕೆಗಳು ನಿದ್ರಾಹೀನತೆಯ ಸಂಕೇತ ಆಗಿರಬಹುದು.
ಆಕಳಿಕೆ ತಡೆಯಬೇಕು.. ಅದು ಹೇಗೆ?
ಇಂದಿನ ಕಂಪ್ಯೂಟರ್ ಯುಗದಲ್ಲಿ ಸ್ಕ್ರೀನ್​ ನೋಡಿಕೊಂಡೇ ದಿನಗಳನ್ನು ಕಳೆಯುತ್ತೇವೆ. ಇದರಿಂದ ನಿದ್ದೆ ಎಷ್ಟು ಗಂಟೆಗಳ ಕಾಲ ಮಾಡುತ್ತೇವೆ ಎನ್ನುವುದು ಗೊತ್ತಿರಲ್ಲ. ಏಕೆಂದರೆ ಮಲಗಿದರು, ಎದ್ದರೂ ಮೊಬೈಲ್ ಕೈಯಲ್ಲಿ ಇರುವುದರಿಂದ ಅರ್ಧ ನಿದ್ದೆನ ಈ ಮೊಬೈಲ್ ಕಸಿದು ಬಿಡುತ್ತದೆ. ಆದ್ದರಿಂದ ಪದೇ ಪದೇ ಆಕಳಿಕೆ ಬರಬಾರದು ಎಂದರೆ ದೈಹಿಕ ಚಟುವಟಿಕೆಗಳು ಮುಖ್ಯ. ಸ್ಕ್ರೀನ್ ನೋಡುವುದು ಕಡಿಮೆ ಮಾಡಿ ದಿನಕ್ಕೆ 7 ರಿಂದ 8 ಗಂಟೆ ನಿದ್ದೆ ಮಾಡಬೇಕು. ಒತ್ತಡ ಕಡಿಮೆ ಮಾಡಿಕೊಳ್ಳಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ