/newsfirstlive-kannada/media/media_files/2025/11/01/health-2025-11-01-12-54-36.jpg)
ಅಂಜೂರದಿಂದ ನಮಗೆ ಎಷ್ಟೋ ಆರೋಗ್ಯದ ಪ್ರಯೋಜನಗಳಿವೆ. ದಿನಚರಿಯಲ್ಲಿ ಅಂಜೂರು ತಿನ್ನುವುದನ್ನು ಸೇರಿಸಿಕೊಂಡರೇ ಅನೇಕ ಕಾಯಿಲೆಗಳು ದೂರವಾಗುವುದು ಪಕ್ಕಾ. ಒಂದು ದಿನಕ್ಕೆ ಒಂದು ಅಂಜೂರ ತಿನ್ನುವುದು ಆರೋಗ್ಯಕ್ಕೆ ಹೆಚ್ಚು ಉಪಯೋಗ ಸಿಗುತ್ತದೆ. ಅಂಜೂರದಲ್ಲಿ ಎಲ್ಲ ತರಹದ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಇದೆ ಎಂದು ಹೇಳಬಹುದು. ಅಷ್ಟೊಂದು ಆರೋಗ್ಯ ನಿಧಿಯಾಗಿದೆ ಈ ಅಂಜೂರು.
ಅಂಜೂರದಲ್ಲಿ ಇರುವಷ್ಟು ವಿಟಮಿನ್ಸ್​ ಬೇರೆ ಯಾವುದರಲ್ಲೂ ನಾವು ಕಾಣಲು ಸಾಧ್ಯವಿಲ್ಲ ಎನ್ನಬಹುದು. ಏಕೆಂದರೆ ಇದರಲ್ಲಿನ ಜೀವಸತ್ವಗಳು ಯಾವುವು ಎಂದು ನೋಡುವುದಾದರೆ, ವಿಟಮಿನ್ ಎ, ವಿಟಮಿನ್ ಸಿ, ಬಿ ಜೀವಸತ್ವಗಳು, ವಿಟಮಿನ್ ಬಿ6 ಸೇರಿದಂತೆ ವಿವಿಧ ಜೀವಸತ್ವಗಳು ಇವೆ. ವಿಟಮಿನ್ ಕೆ, ಖನಿಜಗಳು (ಪೊಟ್ಯಾಸಿಯಂ, ಕ್ಯಾಲ್ಸಿಯಂ, ಮೆಗ್ನೀಷಿಯಂ, ತಾಮ್ರ) ಹಾಗೂ ಫೈಬರ್ ಸಮೃದ್ಧವಾಗಿವೆ.
ಅಂಜೂರದಲ್ಲಿ ಪ್ರೋಟೀನ್ಸ್​, ಕಾರ್ಬೋಹೈಡ್ರೇಟ್‌ಗಳು ಜೊತೆಗೆ ಇತರೆ ಅಗತ್ಯವಾದ ಪೋಷಕಾಂಶಗಳು ಹೇರಳವಾಗಿವೆ. ಇವು ನಮ್ಮಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡಲು ಸಹಾಯ ಮಾಡುತ್ತವೆ. ನಮಗೆ ಯಾವುದೇ ಸೋಂಕು ತಗುಲದಂತೆ ಹೋರಾಡಿ ರಕ್ಷಣೆ ನೀಡುತ್ತವೆ.
ಇದನ್ನೂ ಓದಿ: ಹೃದಯವನ್ನು ಆರೋಗ್ಯವಾಗಿ ಕಾಪಾಡಿಕೊಳ್ಳುವುದು ಹೇಗೆ.. ಇಲ್ಲಿವೆ ಕೆಲ ಟಿಪ್ಸ್​!
/filters:format(webp)/newsfirstlive-kannada/media/media_files/2025/11/01/health_fit-2025-11-01-12-54-50.jpg)
ಪೋಷಕಾಂಶಗಳ ಗಣಿ ಎಂದು ಅಂಜೂರವನ್ನು ನಾವು ಕರೆಯಬಹುದು. ಇದರಲ್ಲಿ ಮ್ಯಾಂಗನೀಸ್, ವಿಟಮಿನ್-ಕೆ, ಮೆಗ್ನೀಸಿಯಮ್, ತಾಮ್ರ ಮತ್ತು ಪೊಟ್ಯಾಷಿಯಂ ನಂತಹ ಪೋಷಕಾಂಶಗಳು ಇವೆ. ಅಂಜೂರವನ್ನು ತಿಂದಾಗ ಇವೆಲ್ಲಾ ದೇಹದ ಆರೋಗ್ಯಕ್ಕೆ ಪ್ರಮುಖ ಪಾತ್ರ ವಹಿಸುತ್ತವೆ.
ನಾವು ನಿತ್ಯ ಅಂಜೂರವನ್ನು ತಿನ್ನುವುದರಿಂದ ನಮ್ಮ ಹೃದಯದ ಅಪಾಯಗಳನ್ನು ಕಡಿಮೆ ಮಾಡುತ್ತದೆ. ಪೊಟ್ಯಾಷಿಯಂ ಮತ್ತು ಫೈಬರ್ ಅಂಶವು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ. ಜೊತೆಗೆ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಎಲ್ಲವೂಗಳಿಂದ ನಮ್ಮ ಹೃದಯ ಆರೋಗ್ಯವಾಗಿರುತ್ತದೆ.
ಫೈಬರ್ ಅಂಶ ಹೆಚ್ಚಿಗೆ ಇರುವುದರಿಂದ ಮಲಬದ್ಧತೆಯನ್ನು ಹೋಗಲಾಡಿಸುತ್ತದೆ. ಕರುಳಿನ ಆರೋಗ್ಯ ಸುಧಾರಿಸಿ ಆಹಾರದ ಚಲನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಕರುಳಿನಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾವನ್ನು ಪೋಷಿಸುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us