/newsfirstlive-kannada/media/post_attachments/wp-content/uploads/2024/08/HEART-DECEASE.jpg)
ಸದ್ಯ ಈಗ ಕಾಲ ಹೇಗಿದೆ ಎಂದರೆ ಸ್ಟೌವ್ ಮೇಲಿನ ಆಹಾರ ಇನ್ನು ಸರಿಯಾಗಿ ಬೇಯಿಸಿರುವುದಿಲ್ಲ. ಆವಾಗಲೇ ಆಫೀಸ್​ಗೆ ಹೋಗೋಕೆ ಟೈಮ್ ಆಗುತ್ತೆ ಎಂದು ಅದೇ ಆಹಾರವನ್ನು ತಿಂದು ಬಿಟ್ಟು ಹೋಗುವುದು. ಅದು ನಮ್ಮ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಎನ್ನುವ ಪರಿಜ್ಞಾನ ಕೂಡ ನಮ್ಮಲ್ಲಿ ಇರುವುದಿಲ್ಲ. ಇತ್ತೀಚೆಗೆ ಸರಿಯಾದ ಆಹಾರ ತಿನ್ನದಿರುವುದಕ್ಕೆ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗುತ್ತಿವೆ.
ಸಂಸ್ಕರಿಸಿದ ಆಹಾರಗಳು, ಹೆಚ್ಚಿನ ಉಪ್ಪು, ಟ್ರಾನ್ಸ್ ಫ್ಯಾಟ್‌ಗಳು, ಸ್ಯಾಚುರೇಟೆಡ್ ಕೊಬ್ಬು ಹೃದಯ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಆಹಾರಗಳು ಅಧಿಕ ರಕ್ತದೊತ್ತಡ, ಬೊಜ್ಜು, ಹೆಚ್ಚಿನ ಕೊಲೆಸ್ಟ್ರಾಲ್ ಮತ್ತು ರಕ್ತನಾಳಗಳ ಉರಿಯೂತವನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ. ಸರಿಯಾದ ಆಹಾರ, ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಕಡಿಮೆ ಕೊಬ್ಬಿನ ಆಯ್ಕೆಗಳನ್ನು ಒಳಗೊಂಡಿರುತ್ತದೆ. ಇವುಗಳಿಂದ ಹೃದಯವನ್ನು ರಕ್ಷಣೆ ಮಾಡಬಹುದು.
ಆಹಾರದಲ್ಲಿ ಉಪ್ಪುನ್ನು ಹೆಚ್ಚಿಗೆ ತಿನ್ನುವುದರಿಂದ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಇದು ಹೃದಯ ಕಾಯಿಲೆ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಸಂಸ್ಕರಿಸಿದ ಆಹಾರಗಳು, ಪ್ಯಾಕೆಟ್​ ಫುಡ್​ ಮತ್ತು ಫಾಸ್ಟ್​ ಫುಡ್​ಗಳನ್ನು ಸೇವನೆ ಮಾಡುವುದು ಕಡಿಮೆ ಮಾಡಬೇಕು.
/filters:format(webp)/newsfirstlive-kannada/media/post_attachments/wp-content/uploads/2024/02/Heart-Attack.jpg)
ಸಂಸ್ಕರಿಸಿದ ಆಹಾರಗಳು ಎಂದರೆ ಫ್ಯಾಟ್ ಹಾಗೂ ಸಕ್ಕರೆ ಹೆಚ್ಚಿಗೆ ಇರುವುದರಿಂದ ಇವು ಬೊಜ್ಜು ಮತ್ತು ಹೃದಯ ಸಂಬಂಧಿಗೆ ಅಪಾಯವನ್ನು ಉಂಟುಮಾಡುತ್ತವೆ. ಹಣ್ಣುಗಳು, ತರಕಾರಿಗಳು, ಹಸಿರು ಎಲೆಗಳನ್ನು ಹೆಚ್ಚು ಸೇವಿಸಬೇಕು. ವಿಟಮಿನ್, ಖನಿಜಗಳು ಮತ್ತು ಫೈಬರ್ ಅನ್ನು ನಮಗೆ ನೀಡುತ್ತವೆ.
ಹೆಚ್ಚಿನ ಸಂಸ್ಕರಿಸಿದ ಮಾಂಸದ ಸೇವನೆ ನಮ್ಮ ಹೃದಯಕ್ಕೆ ಅಪಾಯ ಎಂದು ಹೇಳಲಾಗುತ್ತದೆ. ಇದು ಅಧಿಕ ಉಪ್ಪು ತಿನ್ನುವ ಕಾರಣದಿಂದ ಹೃದಯಕ್ಕೆ ಅಪಾಯ ತಂದುಡ್ಡೊತ್ತದೆ. ಹೀಗಾಗಿ ಆರೋಗ್ಯಕರ ಕೊಬ್ಬುಗಳನ್ನು ತಿನ್ನಬೇಕು. ಮೀನಿನಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲಗಳು ಹೃದಯಕ್ಕೆ ಒಳ್ಳೆಯದು. ಬಾದಾಮಿ ಮತ್ತು ವಾಲ್‌ನಟ್ಸ್​ ನಮಗೆ ಆರೋಗ್ಯವನ್ನು ಒದಗಿಸುತ್ತವೆ.
ಪೂರ್ಣ ಧಾನ್ಯಗಳು ಅಥವಾ ಓಟ್ಸ್‌ನಂತ ಪೂರ್ಣ ಧಾನ್ಯಗಳನ್ನು ನಾವು ನಿತ್ಯ ತಿನ್ನಬೇಕು. ಓಟ್ಸ್ ಎಲ್​ಡಿಎಲ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತೆ. ಇತ್ತೀಚಿನ ದಿನಗಳಲ್ಲಿ ಸರಿಯಾದ ಜೀವನಶೈಲಿ, ಆಹಾರ ಕ್ರಮ, ದೈಹಿಕ ಚಟುವಟಿಕೆಗಳು ಇಲ್ಲದೆ ಇರುವುದರಿಂದ ಹೃದಯದ ಕಾಯಿಲೆಗಳು ಯುವ ಜನತೆಯಲ್ಲಿ ಹೆಚ್ಚುತ್ತಿದೆ. ಹೀಗಾಗಿ ಸರಿಯಾದ ಆಹಾರ ಕ್ರಮ ಪಾಲಿಸುವುದು ಉತ್ತಮ.
ಇದನ್ನೂ ಓದಿ: ಕಾಳಿ ಜಾತ್ರೆ ಮುಗಿಸಿ ವಾಪಸ್ ಬರುವಾಗ ಡಿಕ್ಕಿ ಹೊಡೆದ ರೈಲು.. ನಾಲ್ವರು ದುರಂತ ಅಂತ್ಯ
ವಿಶೇಷ ಸೂಚನೆ:ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us