/newsfirstlive-kannada/media/media_files/2025/09/03/rail_indian-2025-09-03-11-24-51.jpg)
ಪಾಟ್ನಾ: ರೈಲು ಡಿಕ್ಕಿ ಹೊಡೆದು ನಾಲ್ವರು ದುರ್ಮರಣ ಹೊಂದಿರುವ ಘಟನೆ ಬಿಹಾರದ ಬೇಗುಸರಾಯ್​ ಜಿಲ್ಲೆಯಲ್ಲಿ ನಡೆದಿದೆ. ಕಾಳಿ ಪೂಜಾ ಜಾತ್ರೆಯಿಂದ ಹಿಂತಿರುಗುವಾಗ ಆಮ್ರಪಾಲಿ ರೈಲು ಡಿಕ್ಕಿ ಹೊಡೆದಿದೆ.
ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ರೈಲು ಡಿಕ್ಕಿ ಹೊಡೆದು ಎರಡು ಕುಟುಂಬದ ನಾಲ್ವರು ಜೀವ ಕಳೆದುಕೊಂಡಿದ್ದಾರೆ. ಸಾಹಿಬ್​​ಪುರ ಕಮಲ್ ಠಾಣಾ ವ್ಯಾಪ್ತಿಯ ರಾಹುವಾ ಗ್ರಾಮದ ಬಳಿಯ ಬರೌನಿ ಕತಿಹಾರ್​​​​ ರೈಲು ಮಾರ್ಗದಲ್ಲಿ ಅಪಘಾತ ಸಂಭವಿಸಿದೆ. ಎರಡು ಕುಟುಂಬದ ನಾಲ್ವರು ಕಾಳಿ ಪೂಜಾ ಜಾತ್ರೆಯಿಂದ ಹಿಂತಿರುಗುತ್ತಿದ್ದರು. ಈ ವೇಳೆ ಇವರೆಲ್ಲಾ ಹಳಿ ದಾಟಲು ಪ್ರಯತ್ನಿಸುತ್ತಿದ್ದರು.
ಇದನ್ನೂ ಓದಿ:2 ಬಾರಿ ಡಕೌಟ್​.. ಅಭಿಮಾನಿಗಳಿಗೆ ವಿರಾಟ್​ ಕೊಹ್ಲಿ ಮಾಡಿದ ಆ ‘ಸನ್ನೆ’ಯ ಅರ್ಥವೇನು?
ಆಗ ವೇಗವಾಗಿ ಬಂದ ರೈಲು ಡಿಕ್ಕಿಯಾಗಿದೆ. ಮೃತರನ್ನು ರಘುನಾಥಪುರ ಕರಾರಿ ಪಂಚಾಯತ್ ನಿವಾಸಿ ಧರ್ಮದೇವ್ ಮೆಹತೋ, ಪತ್ನಿ ರೀಟಾ ದೇವಿ, ಮೊಮ್ಮಗ ಮದನ್, ಮೊಮ್ಮಗಳು ರೋಶ್ನಿ ಕುಮಾರ್ ಎಂದು ಗುರುತಿಸಲಾಗಿದೆ. ಸದ್ಯ ಅಪಘಾತದ ಬಗ್ಗೆ ಮಾಹಿತಿ ಪಡೆದ ನಂತರ, ಪೊಲೀಸರು ಸ್ಥಳಕ್ಕೆ ಧಾವಿಸಿ ನಾಲ್ವರ ಮೃತದೇಹಗಳನ್ನು ಆಸ್ವತ್ರೆಗೆ ರವಾನೆ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us