Advertisment

2 ಬಾರಿ ಡಕೌಟ್​.. ಅಭಿಮಾನಿಗಳಿಗೆ ವಿರಾಟ್​ ಕೊಹ್ಲಿ ಮಾಡಿದ ಆ ‘ಸನ್ನೆ’ಯ ಅರ್ಥವೇನು?

ಕೊಹ್ಲಿ ಅವರ ಈ ರೀತಿಯಾದ ಬ್ಯಾಟಿಂಗ್ ವೈಫಲ್ಯ ಅಭಿಮಾನಿಗಳು ಯಾವಾಗಲೂ ನೋಡೇ ಇರಲಿಲ್ಲ. ಅಷ್ಟೊಂದು ಡಿಸಪಾಯಿಂಟ್​ನಲ್ಲಿ ಡ್ರಸ್ಸಿಂಗ್ ರೂಮ್​ನತ್ತ ಕೊಹ್ಲಿ ಮರಳಿದರು. ಪರ್ತ್​​ ಮೈದಾನದಲ್ಲಿ ನಡೆದ ಮೊದಲ ಒಡಿಐನಲ್ಲಿ ವಿರಾಟ್ ಕೊಹ್ಲಿ ಅವರು ಕೇವಲ 8 ಬಾಲ್ ಆಡಿ ಸೊನ್ನೆ ಸುತ್ತಿದ್ದರು.

author-image
Bhimappa
KOHLI_00
Advertisment

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್​ ಕಿಂಗ್ ಕೊಹ್ಲಿ ಆಸ್ಟ್ರೇಲಿಯಾದ ವಿರುದ್ಧದ ಏಕದಿನ ಸರಣಿಯಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವುದು ಚರ್ಚೆಗೆ ಕಾರಣವಾಗಿದೆ. ಇವತ್ತು ನಡೆಯುತ್ತಿರುವ 2ನೇ ಒಡಿಐ ಪಂದ್ಯದಲ್ಲಿ ಮತ್ತೊಮ್ಮೆ ಡಕೌಟ್ ಆಗಿ ಪೆವಿಲಿಯನ್​ಗೆ ತೆರಳುವಾಗ ಕೊಹ್ಲಿ ಅಭಿಮಾನಿಗಳಿಗೆ ಮಾಡಿದ ಅದೊಂದು ಸನ್ನೆ ಏಕದಿನದಿಂದಲೂ ನಿವೃತ್ತಿ ಘೋಷಣೆ ಮಾಡುತ್ತಾರಾ ಎನ್ನುವ ಪ್ರಶ್ನೆ ಮೂಡಿಸಿದೆ.    

Advertisment

ವಿರಾಟ್ ಕೊಹ್ಲಿ ಅವರ ಈ ರೀತಿಯಾದ ಬ್ಯಾಟಿಂಗ್ ವೈಫಲ್ಯ ಅಭಿಮಾನಿಗಳು ಯಾವಾಗಲೂ ನೋಡೇ ಇರಲಿಲ್ಲ. ಅಷ್ಟೊಂದು ಡಿಸಪಾಯಿಂಟ್​ನಲ್ಲಿ ಡ್ರಸ್ಸಿಂಗ್ ರೂಮ್​ನತ್ತ ಕೊಹ್ಲಿ ಮರಳಿದರು. ಪರ್ತ್​​ ಮೈದಾನದಲ್ಲಿ ನಡೆದ ಮೊದಲ ಒಡಿಐನಲ್ಲಿ ವಿರಾಟ್ ಕೊಹ್ಲಿ ಅವರು ಕೇವಲ 8 ಬಾಲ್ ಆಡಿ ಸೊನ್ನೆ ಸುತ್ತಿದ್ದರು. ಇದರ ಬೆನ್ನಲ್ಲೇ ಇಂದು ನಡೆದ 2ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಮತ್ತೆ ಡಕೌಟ್ ಆಗಿದ್ದಾರೆ. ಸತತ ಡಕೌಟ್​ ಆಗಿದ್ದು ಅವರ ಕ್ರಿಕೆಟ್​ ವೃತ್ತಿ ಜೀವನದಲ್ಲಿ ಇದೇ ಮೊದಲು ಎನ್ನಲಾಗುತ್ತಿದೆ. 

ಇಂದಿನ ಪಂದ್ಯದಲ್ಲಿ ನಾಯಕ ಗಿಲ್ ಔಟ್ ಆದ ಬಳಿಕ ಕ್ರೀಸ್​ಗೆ ಆಗಮಿಸಿದ ಕಿಂಗ್ ಕೊಹ್ಲಿ ಬ್ಯಾಟಿಂಗ್​​ನಲ್ಲಿ ಮತ್ತೊಮ್ಮೆ ಎಡವಿ ಬಿದ್ದರು. ಆಸ್ಟ್ರೇಲಿಯಾದ ವೇಗಿ ಜೇವಿಯರ್ ಬಾರ್ಟ್ಲೆಟ್ ಹಾಕಿದ 6.5ನೇ ಬಾಲ್​ ಅನ್ನು ಹೊಡೆಯಲು ಹೋದ ವಿರಾಟ್​ ಕೊಹ್ಲಿ ಎಲ್​​ಬಿಡಬ್ಲುಗೆ ಬಲಿಯಾದರು. ಬಾಲ್ ಮಿಡ್ಲ್​ ವಿಕೆಟ್​ ನೇರ ಇದ್ದಿದ್ದರಿಂದ ವಿರಾಟ್ ಕೊಹ್ಲಿ ಔಟ್​ ಸ್ಪಷ್ಟವಾಗಿತ್ತು. 

ಇದನ್ನೂ ಓದಿ: ಟ್ರ್ಯಾಕ್​ಗೆ ಮರಳಿದ ರೋಹಿತ್, ನಿಧಾನವಾದ ಅರ್ಧಶತಕ.. ಶ್ರೇಯಸ್​ ಅಯ್ಯರ್​ ಕೂಡ ಫಿಫ್ಟಿ!

Advertisment

VIRAT_KOHLI (3)

ಇದರಿಂದ ಈ ಸರಣಿಯಲ್ಲಿ ವಿರಾಟ್​ ಕೊಹ್ಲಿ ಡಕೌಟ್ ಆಗಿದ್ದು ಫ್ಯಾನ್ಸ್​ಗೆ ಭಾರೀ ಬೇಸರ ಮೂಡಿಸಿದೆ. ಈ ಪಂದ್ಯದಲ್ಲಿ 4 ಬಾಲ್ ಆಡಿದ್ದ ಕೊಹ್ಲಿ ಸೊನ್ನೆ ಸುತ್ತಿದರು. ಕೊಹ್ಲಿ ಪೆವಿಲಿಯನ್​ಗೆ ಹೋಗುವಾಗ ತಲೆ ತಗ್ಗಿಸಿಕೊಂಡು, ಎರಡು ಗ್ಲೌಸ್​ ಬಿಚ್ಚಿ ಒಂದು ಕೈನಲ್ಲಿ ಹಿಡಿದುಕೊಂಡು ಮೇಲೆತ್ತಿ ಅಲ್ಲಾಡಿಸುತ್ತಾ ಹೋದರು. ಈ ವೇಳೆ ಗ್ಯಾಲರಿಯಲ್ಲಿ ಕುಳಿತ್ತಿದ್ದ ಫ್ಯಾನ್ಸ್​ ಹೋ..ಹೋ ಎಂದು ಕೂಗುತ್ತಿದ್ದರು. ಆದರೆ ಕೊಹ್ಲಿ ತಲೆ ಎತ್ತಲೇ ಇಲ್ಲ, ಕೈಯಲ್ಲಿದ್ದ ಗ್ಲೌಸ್​ಗಳನ್ನ ಅಲ್ಲಾಡಿಸುತ್ತ ಹೋದರು. ಇದೇ ಅವರ ಏಕದಿನ ಕ್ರಿಕೆಟ್ ನಿವೃತ್ತಿ ಸೂಚಿಸುತ್ತಿದೆಯಾ ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಲಾಗುತ್ತಿದೆ.   

ಈಗಾಗಲೇ ವಿರಾಟ್ ಕೊಹ್ಲಿ ಅವರು ಟಿ20 ಇಂಟರ್​ನ್ಯಾಷನಲ್​ ಹಾಗೂ ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಏಕದಿನಕ್ಕೂ ರಿಟೈರ್​ಮೆಂಟ್​ ಘೋಷಣೆ ಮಾಡುತ್ತಾರಾ ಎನ್ನುವುದು ಅಭಿಮಾನಿಗಳ ವಲಯದಲ್ಲಿ ಅನುಮಾನ ಮೂಡಿದೆ. ಏಕೆಂದರೆ ಇವತ್ತು ಔಟ್​ ಆಗುತ್ತಿದ್ದಂತೆ ಕೊಹ್ಲಿ ಅವರ ವರ್ತನೆ ನಿವೃತ್ತಿಗೆ ಪುಷ್ಟಿ ನೀಡುವಂತೆ ಇತ್ತು ಎನ್ನಲಾಗುತ್ತಿದೆ. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Advertisment
Rohit Sharma-Virat Kohli Virat Kohli
Advertisment
Advertisment
Advertisment