Advertisment

ಟ್ರ್ಯಾಕ್​ಗೆ ಮರಳಿದ ರೋಹಿತ್, ನಿಧಾನವಾದ ಅರ್ಧಶತಕ.. ಶ್ರೇಯಸ್​ ಅಯ್ಯರ್​ ಕೂಡ ಫಿಫ್ಟಿ!

ಓಪನರ್ ಆಗಿ ಕ್ರೀಸ್​ಗೆ ಆಗಮಿಸಿದ ರೋಹಿತ್ ಶರ್ಮಾ ಮೊದಲ ಪಂದ್ಯದಲ್ಲಿ ಮಾಡಿದಂತ ಯಡವಟ್ಟನ್ನು ಮತ್ತೆ ಮಡಲಿಲ್ಲ. ತಾಳ್ಮೆಯ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಿದ್ದರು. ಇದು ರೋಹಿತ್ ಶರ್ಮಾ ಅವರ 2015ರ ನಂತರದ ಅತ್ಯಂತ ನಿಧಾನಗತಿಯ ಹಾಫ್​ಸೆಂಚುರಿ ಆಗಿದೆ.

author-image
Bhimappa
ROHIT_SHARMA_50
Advertisment

ಟೀಮ್ ಇಂಡಿಯಾದ ಓಪನರ್ ಹಾಗೂ ಅನುಭವಿ ಬ್ಯಾಟರ್​ ರೋಹಿತ್ ಶರ್ಮಾ ಅವರು ಆಸ್ಟ್ರೇಲಿಯಾ ವಿರುದ್ಧ ಅಮೋಘವಾದ ಅರ್ಧಶತಕ ಸಿಡಿಸಿದ್ದಾರೆ. ಇದು ಹಿಟ್​​ಮ್ಯಾನ್ ಅವರ ಅತ್ಯಂತ ನಿಧಾನಗತಿಯ ಫಿಫ್ಟಿ ಆಗಿದೆ ಎಂದು ಹೇಳಲಾಗಿದೆ. 

Advertisment

ಅಡಿಲೇಡ್ ಓವಲ್ ಸ್ಟೇಡಿಯಂನಲ್ಲಿ​ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಆಸಿಸ್​ ನಾಯಕ ಮಿಚೆಲ್ ಮಾರ್ಷ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದರು. ಅದರಂತೆ ಟೀಮ್ ಇಂಡಿಯಾ ಮೊದಲ ಬ್ಯಾಟಿಂಗ್ ಮಾಡುತ್ತಿದೆ. ಭಾರತದ ಪರ ಓಪನರ್ ಆಗಿ ಕ್ರೀಸ್​ಗೆ ಆಗಮಿಸಿದ ರೋಹಿತ್ ಶರ್ಮಾ ಮೊದಲ ಪಂದ್ಯದಲ್ಲಿ ಮಾಡಿದಂತ ಯಡವಟ್ಟನ್ನು ಮತ್ತೆ ಮಡಲಿಲ್ಲ. ತಾಳ್ಮೆಯ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಿದ್ದಾರೆ. 

ಇದನ್ನೂ ಓದಿ: ಟೀಮ್ ಇಂಡಿಯಾಗೆ ಶಾಕ್​ ಮೇಲೆ ಶಾಕ್.. ಗಿಲ್​ ಔಟ್​ ಆದ ಬೆನ್ನಲ್ಲೇ​ ಕೊಹ್ಲಿ ಮತ್ತೊಮ್ಮೆ ಡಕೌಟ್​!

ROHIT_SHARMA

ಆಸಿಸ್​ ವೇಗಿಗಳನ್ನು ಕಾಡಿದ ಹಿಟ್​ಮ್ಯಾನ್​ ರೋಹಿತ್ ತಮ್ಮ ಬ್ಯಾಟಿಂಗ್ ಖದರ್ ಏನೆಂಬುದನ್ನು ಮನದಟ್ಟು ಮಾಡಿದ್ದಾರೆ. ಈ ಪಂದ್ಯದಲ್ಲಿ 74 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್​ನಿಂದ ಅಮೋಘವಾದ 50 ರನ್​ಗಳನ್ನು ಸಿಡಿಸಿದರು. ಇದು ರೋಹಿತ್ ಶರ್ಮಾ ಅವರ 2015ರ ನಂತರದ ಅತ್ಯಂತ ನಿಧಾನಗತಿಯ ಹಾಫ್​ಸೆಂಚುರಿ ಆಗಿದೆ. ಅಲ್ಲದೇ ರೋಹಿತ್ ಶರ್ಮಾ ವೃತ್ತಿ ಜೀವನದ 59ನೇ ಅರ್ಧಶತಕವಾಗಿದೆ. 

Advertisment

ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡುವಾಗ 97 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್​ಗಳಿಂದ 73 ರನ್ ಗಳಿಸಿದ್ದರು. ಈ ವೇಳೆ ಹ್ಯಾಜಲ್​ವುಡ್​ಗೆ ಕ್ಯಾಚ್ ಕೊಟ್ಟು ಹೊರ ನಡೆದರು. ಶ್ರೇಯಸ್ ಅಯ್ಯರ್ ಭರ್ಜರಿಯಾದ ಹಾಫ್ ಸೆಂಚುರಿ ಸಿಡಿಸಿದ್ದಾರೆ. 67 ಬಾಲ್​ಗಳನ್ನು ಎದುರಿಸಿದ ಐಯ್ಯರ್ 5 ಬೌಂಡರಿಗಳಿಂದ ಅರ್ಧಶತಕ ಬಾರಿಸಿದ್ದಾರೆ. ಇದು ಅವರ 23ನೇ ಹಾಫ್​​ಸೆಂಚುರಿಯಾಗಿದೆ. ಇನ್ನು ಟೀಮ್ ಇಂಡಿಯಾ 3 ವಿಕೆಟ್​ ನಷ್ಟಕ್ಕೆ 142 ರನ್​ಗಳಿಂದ ಬ್ಯಾಟಿಂಗ್ ಮಾಡುತ್ತಿದೆ. ಇದೀಗ ಅಯ್ಯರ್​ಗೆ ಜೊತೆಯಾಗಿ ಅಕ್ಷರ್ ಪಟೇಲ್ ಅವರು ಕ್ರೀಸ್​ಗೆ ಆಗಮಿಸಿದ್ದಾರೆ.  

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Rohit Sharma-Virat Kohli Rohith Sharma
Advertisment
Advertisment
Advertisment