/newsfirstlive-kannada/media/media_files/2025/08/05/mother_kid_ai-2025-08-05-20-10-17.jpg)
ಮನೆಯಲ್ಲಿ ಮಗು ಇದ್ದರೇ ನಮ್ಮ ಸಂತೋಷ, ಖುಷಿ ಡಬಲ್ ಆಗಿರುತ್ತದೆ. ಮಗುವಿನ ತಿಂಡಿ, ಆರೋಗ್ಯ, ಅದರ ಆಟ ಎಲ್ಲವನ್ನ ನೋಡಿಕೊಳ್ಳಲೇಬೇಕು. ಮನೆಯಲ್ಲೇ ಇದ್ದು ಮಗುವನ್ನು ಹಾರೈಕೆ ಮಾಡುವಾಗ ಪೋಷಕರು ಒತ್ತಡಕ್ಕೆ ಸಿಲುಕುತ್ತಾರೆ. ಅವರಿಗೆ ಮನೆ, ಮಗು ಬಿಟ್ಟು ಎಲ್ಲಿಗೂ ಹೋಗದಂತೆ ಆಗುತ್ತದೆ. ಇದರಿಂದ ಕೆಲವೊಮ್ಮೆ ತಾಯಂದಿರು ಒತ್ತಡಕ್ಕೆ, ಹತಾಶೆಗೆ ಒಳಗಾಗುತ್ತಾರೆ. ಆದರೆ ಈ ಕೆಳಗಿನವುಗಳನ್ನು ಪಾಲನೆ ಮಾಡಿದರೆ ಒತ್ತಡ, ಹತಾಶೆ ಕಡಿಮೆ ಮಾಡಬಹುದು.
ಮಗುನ ಹಾರೈಕೆ ಮಾಡುವಾಗ ಒತ್ತಡಕ್ಕೆ ಒಳಗಾಗುತ್ತಿದ್ದೇವೆ ಎಂದು ಸಣ್ಣ ಅನುಮಾನ ಬಂದರೆ, ತೀವ್ರವಾದ ಆತಂಕ, ಭಯ ಇದ್ದರೇ ತಕ್ಷಣ ವೈದ್ಯರ ಸಲಹೆ ಪಡೆಯಿರಿ. ಸಮಸ್ಯೆ ದೊಡ್ಡದಾಗುವ ಮೊದಲೇ ಅದನ್ನು ಶಮನ ಮಾಡಿದರೆ ಆರೋಗ್ಯ ಚೆನ್ನಾಗಿ ಇರುತ್ತದೆ.
ಪೋಷಕರು ಆದ ಮೇಲೆ ಮಕ್ಕಳ ಜಬಾಬ್ದಾರಿ ತೆಗೆದುಕೊಂಡ ಬಳಿಕ ನಮ್ಮ ಬಗ್ಗೆ ಕಾಳಜಿ ಮರೆತು ಬಿಡುತ್ತೇವೆ. ಇಂತಹ ಸಮಯದಲ್ಲಿ ವ್ಯಾಯಾಮ, ಆರೋಗ್ಯಕರ ಆಹಾರ, ಒಳ್ಳೆಯ ನಿದ್ರೆ, ತುಂಬಾ ಅಂದರೆ ತುಂಬಾ ಮುಖ್ಯವಾಗುತ್ತದೆ. ನೀವು ಆರೋಗ್ಯದಲ್ಲಿ ಫಿಟ್ ಆಗಿದ್ರೆ ಮಗುನ ಬೆಳೆಸುವುದನ್ನ ಎಂಜಾಯ್ ಮಾಡುತ್ತೀರಾ.
ಇದನ್ನೂ ಓದಿ:ರಾತ್ರಿ ಮಲಗುವುದಕ್ಕೂ ಮೊದಲು ಈ ಹಣ್ಣನ್ನು ತಿನ್ನಿ.. ಕಿವಿ ಫ್ರೂಟ್ನಿಂದ ಏನೆಲ್ಲ ಪ್ರಯೋಜನಗಳಿವೆ?
ಮಗುವಿನ ಜೊತೆ ಬೆರೆಯಲು ಕೆಲ ಸಮಯ ಬೇಕಾಗುತ್ತದೆ. ಇದಕ್ಕೆ ನೀವು ಕಾಯಬೇಕು. ಮೊದಲು ಮಗುವಿನ ಫೀಲಿಂಗ್ಸ್, ಎಮೋಷನ್ಸ್ ಅನ್ನು ಅರ್ಥ ಮಾಡಿಕೊಳ್ಳಿ. ಅವರು ಏನು ಹೇಳುತ್ತಿದ್ದಾರೆ ಎನ್ನುವುದು ಕೇಳಿ.
ಮಕ್ಕಳು ಎಲ್ಲದರಲ್ಲೂ ನಂಬರ್- 1 ಇರಬೇಕು ಎಂದು ಪೋಷಕರು ಎಕ್ಸ್ಪರ್ಟ್ ಮಾಡಬಾರದು. ಹಾಗೇ ಮಾಡಿದರೆ ಮಕ್ಕಳ ಮೇಲೆ ಹಾಗೂ ನಿಮ್ಮ ಮೇಲೆ ಒತ್ತಡ ಅಧಿಕವಾಗುತ್ತದೆ. ಪ್ರತಿ ಮಗುವಿಗೆ ತನ್ನದೇ ಆದ ಶೈಲಿ, ಟ್ಯಾಲೆಂಟ್ ಇದ್ದೇ ಇರುತ್ತದೆ. ಅವರ ಸಾಮರ್ಥ್ಯ ಅರ್ಥ ಮಾಡಿಕೊಂಡು ಮುಕ್ತವಾಗಿ ಅವರನ್ನು ಬೆಳೆಯಲು ಬಿಡಿ. ಇದು ನಿಮಗೂ ಒತ್ತಡ ಕಡಿಮೆ ಮಾಡುತ್ತದೆ.
ಮಕ್ಕಳ ಬಗ್ಗೆ ಅತಿಯಾದ ಕಾಳಜಿಯಿಂದ ಒತ್ತಡ ಹೆಚ್ಚುತ್ತದೆ. ಇದರಿಂದ ನಿಮ್ಮನ್ನು ನೀವು ಮರೆತು ಬಿಡುತ್ತೀರಿ. ಈ ವೇಳೆ ಉಸಿರಾಟದ ವ್ಯಾಯಾಮ, ಧ್ಯಾನ, ಶಾಂತವಾಗಿ ಇರುವುದನ್ನ ಮಾಡಿ. ಇದರಿಂದ ಮೈಂಡ್ ರೀಫ್ರೆಶ್ ಆಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ