/newsfirstlive-kannada/media/media_files/2025/09/25/honey-2025-09-25-17-12-36.jpg)
ಜೇನುತುಪ್ಪ Photograph: (ಜೇನುತುಪ್ಪ)
ನೀವು ಈಗಾಗಲೇ ಮನೆಯಲ್ಲಿ ಹೊಂದಿರುವ ನೈಸರ್ಗಿಕ ಪದಾರ್ಥಗಳೊಂದಿಗೆ ಅದ್ಭುತ ಫಲಿತಾಂಶಗಳನ್ನ ಪಡೆಯಬಹುದು. ಅದು ಯಾವುದು ಅಂದರೆ ಬೆಳ್ಳುಳ್ಳಿ(Garlic) ಮತ್ತು ಜೇನುತುಪ್ಪದ (honey) ಮಿಶ್ರಣ. ಇದನ್ನು ಸರಿಯಾದ ರೀತಿಯಲ್ಲಿ ತೆಗೆದುಕೊಂಡರೆ ಇದು ಅನೇಕ ಆರೋಗ್ಯ ಪ್ರಯೋಜನಗಳನ್ನ ನಿಮಗೆ ನೀಡುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಾಗಬೇಕೇ, ಈ ಟಿಪ್ಸ್ ಫಾಲೋ ಮಾಡಿ
ಪ್ರತಿ ದಿನ ಬೆಳಿಗ್ಗೆ ಬೆಳ್ಳುಳ್ಳಿ ಮತ್ತು ಜೇನುತುಪ್ಪದ ಮಿಶ್ರಣವನ್ನ ಸೇವಿಸುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ನಿಮ್ಮಲ್ಲಿರುವ ಶೀತ, ಗಂಟಲು ನೋವು ಮತ್ತು ಆಗಾಗ್ಗೆ ಜ್ವರದಂತಹ ಸಮಸ್ಯೆಗಳಿಂದ ರಕ್ಷಣೆ ನೀಡುತ್ತದೆ.
/filters:format(webp)/newsfirstlive-kannada/media/media_files/2025/09/25/ginger-2025-09-25-17-21-06.jpg)
ಬೆಳ್ಳುಳ್ಳಿ ಮತ್ತು ಜೇನುತುಪ್ಪ ಎರಡರಲ್ಲೂ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿವೈರಲ್ ಗುಣಗಳಿವೆ. ಹಾಗಾಗಿ ನಿಮ್ಮ ಆರೋಗ್ಯ ಸುಧಾರಣೆಗೆ ಸಹಾಯ ಆಗಲಿದೆ.ಅಷ್ಟೇ ಯಾಕೆ, ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಜೇನುತುಪ್ಪದಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಹೊಟ್ಟೆಯ ಸಮಸ್ಯೆಗಳಿಂದ ಪರಿಹಾರವನ್ನ ನೀಡುತ್ತವೆ. ಈ ಮಿಶ್ರಣವು ನೈಸರ್ಗಿಕ ಕಫ ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ಸೈನಸ್ ಮತ್ತು ಎದೆಯ ದಟ್ಟಣೆಯನ್ನ ಕೂಡ ಕಡಿಮೆ ಮಾಡುತ್ತದೆ.
ಹಾಗಾಗಿ ಆದಷ್ಟು ದುಬಾರಿ ಮಾತ್ರೆಗಳ ಮೊರೆ ಹೋಗುವ ಬದಲು ಜೇನುತುಪ್ಪದ ಜೊತೆ ಬೆಳ್ಳುಳ್ಳಿಯನ್ನ ಮಿಶ್ರಣ ಮಾಡಿ ಸೇವಿಸುವುದರಿಂದ ನಿಮ್ಮ ಆರೋಗ್ಯ ಉತ್ತವಾಗಿರುತ್ತದೆ. ಈ ಟಿಪ್ಸ್ ಸೂಪರ್​ ಡೂಪರ್​ ಆಗಿದೆ. ನಿಮ್ಮ ಆರೋಗ್ಯದಲ್ಲಿ ಚಮತ್ಕಾರ ತರಲಿದೆ.
ಇದನ್ನೂ ಓದಿ:ಸಾಮಾಜಿಕ, ಆರ್ಥಿಕ ಶೈಕ್ಷಣಿಕ ಸಮೀಕ್ಷೆಗೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಕಾರ: ಷರತ್ತು ವಿಧಿಸಿ ಗ್ರೀನ್ ಸಿಗ್ನಲ್ ನೀಡಿದ ಹೈಕೋರ್ಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ