/newsfirstlive-kannada/media/media_files/2025/09/13/sayil_vasu-2025-09-13-22-41-51.jpg)
ಸಾಯಿಲ್ ವಾಸು ಎಂದೇ ಖ್ಯಾತಿಗಳಿಸಿದ್ದ ಎಸ್ಒಐಎಲ್ ಸಂಸ್ಥೆಯ ಸಂಸ್ಥಾಪಕ ಸಾಯಿಲ್ ಪಿ.ಶ್ರೀನಿವಾಸ್ ವಾಸು ಅವರು ಇಂದು ಸಂಜೆ ಕಾರ್ಡಿಕ್ ಅರೆಸ್ಟ್ (ಹೃದಯಸ್ತಂಭನ)ನಿಂದ ನಿಧನರಾಗಿದ್ದಾರೆ.
ಶ್ರೀನಿವಾಸ್ ವಾಸು ಅವರು ಕರ್ನಾಟಕದಾದ್ಯಂತ ಮಣ್ಣಿನ ಆರೋಗ್ಯವನ್ನು ರಕ್ಷಿಸುವ ಕಾರ್ಯದಲ್ಲಿ ಸಕ್ರಿಯರಾಗಿದ್ದರು. ಮಣ್ಣು ಪುನರ್ನಿರ್ಮಾಣ ಮಾಡುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸುಸ್ಥಿರ ಕೃಷಿಯನ್ನು ಉತ್ತೇಜಿಸುವತ್ತ ಹೆಚ್ಚಿನ ಗಮನಹರಿಸಿದ್ದರು. ಪ್ರಾತ್ಯಕ್ಷಿಕೆ ಮಾಡ್ಯೂಲ್ ಅನ್ನು ಅಭಿವೃದ್ಧಿ ಪಡಿಸಿ, ಅದರ ಮೂಲಕ ಜಾಗೃತಿ ಮಣ್ಣಿನ ಗುಣಮಟ್ಟ ಮತ್ತು ಫಲವತ್ತತೆ ಕಾಪಾಡಿಕೊಳ್ಳುವ ಬಗ್ಗೆ ರಾಜ್ಯದ್ಯಂತ ಜಾಗೃತಿ ಮೂಡಿಸಿದ್ದರು. ರೈತರಿಗೆ ಸರಳ ರೀತಿಯಲ್ಲಿ ಮಾಹಿತಿ ನೀಡುತ್ತಿದ್ದರು.
ಇದನ್ನೂ ಓದಿ: ಹಾಸನ ದುರಂತ; ರಾಜಕೀಯ ಬೆರೆಸಲ್ಲ, ಪೊಲೀಸರು ಸ್ವಲ್ಪ ಅಲರ್ಟ್ ಆಗಬೇಕಿತ್ತು; HD ದೇವೇಗೌಡರು
ಮಣ್ಣಿನ ಕುರಿತು ರೈತರಿಗೆ ತಿಳಿವಳಿಕೆ ನೀಡಲು ಅವರು ಮಾಡಿದ ಕೆಲಸಕ್ಕೆ ಎಲ್ಲರೂ ಮೆಚ್ಚುವಂತಹದ್ದು ಆಗಿದೆ. ಸಾಯಿಲ್ ವಾಸು ಅಗಲಿಕೆ ಕೃಷಿ ಸಮುದಾಯಕ್ಕೆ ಬಹುದೊಡ್ಡ ನಷ್ಟ ಎಂದು ಹೇಳಬಹುದು. ಅಲ್ಲದೇ ನ್ಯೂಸ್ ಫಸ್ಟ್ನ ಕೃಷಿದೇವೋಭವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದ ಮೂಲಕ ರೈತರಿಗೆ ಅಮೂಲ್ಯವಾದ ಮಾಹಿತಿ ನೀಡಿದ್ದರು.
ಇನ್ನು ಶ್ರೀನಿವಾಸ್ ವಾಸು ನಿಧನಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಸಂತಾಪ ಸೂಚಿಸಿದ್ದಾರೆ. ಈ ಸಂಬಂಧ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ