/newsfirstlive-kannada/media/media_files/2025/10/12/health_blood_pressure_1-2025-10-12-17-54-08.jpg)
ಅಧಿಕ ರಕ್ತದೊತ್ತಡ ಎಂದರೆ ದೇಹದ ಒಳಗಿನ ರಕ್ತನಾಳಗಳ ಗೋಡೆಗಳ ಮೇಲೆ ರಕ್ತದ ಒತ್ತಡ ಹೆಚ್ಚಾಗುವುದು. ಅಧಿಕ ರಕ್ತದೊತ್ತಡ ಸಾಮಾನ್ಯ ಎಂದು ಕಡೆಗಣಿಸಬಾರದು. ಏಕೆಂದರೆ ಇದು ಹೃದಯಾಘಾತ, ಕಿಡ್ನಿ, ಮೆದುಳು ಹಾಗೂ ಪಾರ್ಶ್ವವಾಯು ಸೇರಿದಂತೆ ಇತರೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ. ರಕ್ತದೊತ್ತಡದ ಲಕ್ಷಣಗಳಿರಲ್ಲ. ಹಾಗಾಗಿಯೇ ನಾವು ಆಗಾಗ ತಪಾಸಣೆಗೆ ಒಳಗಾಗಬೇಕು. ವೈದ್ಯರ ಸಲಹೆಯಿಂದ ಇದನ್ನು ನಿಯಂತ್ರಿಸಬಹುದು.
ಡಾಕ್ಟರ್ ನೀಡುವ ಸಲಹೆಗಳೊಂದಿಗೆ ನಾವು ಕೆಲವೊಂದು ಆರೋಗ್ಯದ ಸುಧಾರಣೆಗಾಗಿ ಎಚ್ಚರಿಕೆ ತೆಗೆದುಕೊಳ್ಳಬೇಕು. ಅಂದರೆ ರಕ್ತದೊತ್ತಡ ನಿಯಂತ್ರಣ ಮಾಡಲು ಕೆಲವೊಂದು ಸುಧಾರಣೆ ನಮ್ಮ ಜೀವನದಲ್ಲಿ ಅಳವಸಿಕೊಳ್ಳಬೇಕು. ಔಷಧ, ಮಾತ್ರೆಗಳನ್ನು ತೆಗೆದುಕೊಳ್ಳುವದರ ಜೊತೆಗೆ ಆರೋಗ್ಯಕ್ಕಾಗಿ ಮುಂಜಾನೆ ಜ್ಯೂಸ್ ಕುಡುಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಈ ಜ್ಯೂಸ್​ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಹಾಗಾದ್ರೆ ಯಾವ್ಯಾವ ಜ್ಯೂಸ್ ಕುಡಿಯಬೇಕು?.
ನಮ್ಮ ಆರೋಗ್ಯಕ್ಕೆ ಹೆಚ್ಚು ಫಲ ಕೊಡುವಂತದ್ದು ಎಂದರೆ ಅದು ದಾಳಿಂಬೆ. ಈ ದಾಳಿಂಬೆಯಲ್ಲಿ ಪಾಲಿಫೆನಾಲಿಕ್ ಆಂಟಿಆಕ್ಸಿಡೆಂಟ್ (Polyphenolic antioxidant) ಅಧಿಕ ಮಟ್ಟದಲ್ಲಿ ಇರುತ್ತದೆ. ಹೀಗಾಗಿ ಇದರ ಜ್ಯೂಸ್​ ಕುಡಿಯುವುದರಿಂದ ರಕ್ತದೊತ್ತಡ ನಿಯಂತ್ರಣದ ಜೊತೆಗೆ ಹೃದಯವನ್ನು ರಕ್ಷಣೆ ಮಾಡುತ್ತದೆ.
ಇದನ್ನೂ ಓದಿ:ಸೂರ್ಯಕಾಂತಿ ನೋಡಲು ಎಷ್ಟು ಚಂದವೋ.. ನಮ್ಮ ಆರೋಗ್ಯಕ್ಕೂ ಅಷ್ಟೇ ಉಪಯೋಗ..!
/filters:format(webp)/newsfirstlive-kannada/media/media_files/2025/10/12/health_blood_pressure-2025-10-12-17-54-58.jpg)
ಅಧಿಕ ರಕ್ತದೊತ್ತಡದ ಪರಿಣಾಮವೂ ಹೃದಯದ ಆರೋಗ್ಯದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿದೆ. ನಿಮಗೆ ಏನಾದರೂ ರಕ್ತದೊತ್ತಡ ಕಾಡುತ್ತಿದ್ದರೇ ಮುಂಜಾನೆ ವೇಳೆ ದಾಸವಾಳ ಹೂವಿನ ಚಹಾ ಕುಡಿಯಿರಿ. ಏಕೆಂದರೆ ಇದರಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳು (Antioxidant elements) ಹೆಚ್ಚಾಗಿರುತ್ತವೆ.
ದಾಸವಾಳ ಹೂವಿನ ಚಹಾ ಕುಡಿಯಲು ಆಗದಿದ್ದರೇ ಪ್ರತಿದಿನ ಬೆಳಗಿನ ಸಮಯದಲ್ಲಿ, ಕಡಿಮೆ ಪ್ರಮಾಣದಲ್ಲಿ ಕೊಬ್ಬಿನಾಂಶ ಇರುವಂತಹ ಕೆನೆ ಇಲ್ಲದ ಹಾಲನ್ನು ಕುಡಿಯಬೇಕು. ಇದು ಕೂಡ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
ಮೂಲಂಗಿಯನ್ನು ಸಲಾಡ್, ಸಾಂಬಾರ್ ಹಾಗೂ ಕರಿಯಂತಹ ವಿವಿಧ ಅಡುಗೆಗಳಲ್ಲಿ ಉಪಯೋಗಿಸುತ್ತಾರೆ. ಮೂಲಂಗಿಯಲ್ಲಿ ವಿಟಮಿನ್ ಎ, ಬಿ ಹಾಗೂ ಸಿ ಇರುತ್ತದೆ. ಇದನ್ನು ತಿನ್ನವುದರಿಂದ ರೋಗನಿರೋಧಕ ಶಕ್ತಿನ (Immunity) ಹೆಚ್ಚಿಸುತ್ತದೆ. ಇದರಲ್ಲಿ ಪೊಟ್ಯಾಶಿಯಂ ಇರುವುದರಿಂದ ಜ್ಯೂಸ್ ಮಾಡಿ ಕುಡಿದರೆ ರಕ್ತದೊತ್ತಡ ನಿಯಂತ್ರಣ ಆಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us