/newsfirstlive-kannada/media/media_files/2025/12/26/tea-2025-12-26-12-10-28.jpg)
ದೇಶದಲ್ಲಿ ಬಹುತೇಕ ಮಂದಿ ದಿನ ಆರಂಭಿಸೋದು ಒಂದು ಕಪ್ ಬಿಸಿ ಬಿಸಿ ಚಹಾದೊಂದಿಗೆ. ಈ ಚಹಾ ಯಾವುದೇ ಪ್ರಯೋಗಾಲಯದಿಂದ ಹುಟ್ಟಿಕೊಂಡಿರೋದು ಅಲ್ಲ. ಚಹಾದ ಮೂಲ ಮತ್ತು ಇತಿಹಾಸ ಹೀಗಿದೆ..
ಈ ಕಥೆಯು ಪ್ರಾಚೀನ ಚೀನಾದ ಶೆನ್ ನಂಗ್ (Shen Nung) ಅವರೊಂದಿಗೆ ಪ್ರಾರಂಭವಾಗುತ್ತದೆ. ಶೆನ್ ನಂಗ್ ಕ್ರಿ.ಪೂ 2737ರ ಸುಮಾರಿಗೆ ಚಕ್ರವರ್ತಿಯಾಗಿ ಆಳಿದ. ಚಕ್ರವರ್ತಿ ಶೆನ್, ನೈರ್ಮಲ್ಯ ಮತ್ತು ಸಾರ್ವಜನಿಕ ಆರೋಗ್ಯದಲ್ಲಿ ನಂಬಿಕೆ ಇಟ್ಟಿದ್ದ. ರೋಗವನ್ನು ತಡೆಗಟ್ಟಲು ಅವರು ಕಂಡುಕೊಂಡ ಮೊದಲ ಉಪಾಯ ನೀರನ್ನು ಕುದಿಸಿ ಕುಡಿಯೋದಾಗಿತ್ತು.
/filters:format(webp)/newsfirstlive-kannada/media/media_files/2025/10/06/mango_leaf_tea-2025-10-06-18-43-52.jpg)
ಒಂದು ದಿನ ಚಕ್ರವರ್ತಿ ಶೆನ್ ನಂಗ್ ತಮ್ಮ ತೋಟದಲ್ಲಿ ನೀರನ್ನು ಕುದಿಸುತ್ತಿದ್ದಾಗ, ಗಾಳಿಯ ರಭಸಕ್ಕೆ ಹತ್ತಿರದ ಪೊದೆಯಿಂದ ಕೆಲವು ಎಲೆಗಳು ಮಡಕೆ ಮೇಲೆ ಬಿದ್ದವು. ಆಗ ನೀರಿನ ಬಣ್ಣ ಮತ್ತು ವಾಸನೆ ಬದಲಾಗಿರೋದನ್ನ ಚಕ್ರವರ್ತಿ ಗಮನಿಸಿದ. ಅದನ್ನು ಎಸೆಯುವ ಬದಲು ರುಚಿ ನೋಡಿದ. ಕುಡಿದ ಬಳಿಕ ಆತನಿಗೆ ಸಿಕ್ಕ ಮಜವೇ ಬೇರೆಯಾಗಿತ್ತು..
ಕುದಿಯುವ ನೀರಿನಲ್ಲಿ ಬಿದ್ದ ಎಲೆಗಳು ಕ್ಯಾಮೆಲಿಯಾ ಸೈನೆನ್ಸಿಸ್ (Camellia sinensis) ಸಸ್ಯದಿಂದ ಬಂದವು. ಇಂದು ಎಲ್ಲಾ ರೀತಿಯ ಚಹಾಗಳನ್ನು ಅದೇ ಸಸ್ಯದಿಂದ ತಯಾರಿಸಲಾಗುತ್ತದೆ..
ಆರಂಭಿಕ ದಿನಗಳಲ್ಲಿ ಚಹಾ ಸಾಮಾನ್ಯ ಪಾನೀಯ ಆಗಿರಲಿಲ್ಲ. ಪ್ರಾಚೀನ ಚೀನಾದಲ್ಲಿ ಇದನ್ನು ಔಷಧೀಯ ಕಷಾಯವಾಗಿ ಸೇವಿಸಲಾಗುತ್ತಿತ್ತು. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ದೇಹದಲ್ಲಿರುವ ವಿಷವನ್ನು ತೆಗೆದುಹಾಕುತ್ತದೆ. ಜೊತೆಗೆ ಮಾನಸಿಕ ಆರೋಗ್ಯವನ್ನು ಮತ್ತಷ್ಟು ಸ್ಟ್ರಾಂಗ್ ಮಾಡುತ್ತದೆ ಎಂದು ನಂಬಲಾಗಿತ್ತು.
ಇದನ್ನೂ ಓದಿ:ನಿಂಬೆ ಸಿಪ್ಪೆ ಮಾಡುತ್ತೆ ಮ್ಯಾಜಿಕ್​! ದಯವಿಟ್ಟು ಇನ್ಮೇಲೆ ಸಿಪ್ಪೆ ಎಸೆಯಬೇಡಿ..!
/filters:format(webp)/newsfirstlive-kannada/media/media_files/2025/08/18/black_tea-2025-08-18-21-52-30.jpg)
ಇನ್ನು ಭಾರತದಲ್ಲಿ ಬೋಧಿಧರ್ಮನಿಗೆ ಸಂಬಂಧಿಸಿದ ಮತ್ತೊಂದು ಕಥೆ ಇದೆ. ಬೋಧಿಧರ್ಮ 6 ನೇ ಶತಮಾನದ ಬೌದ್ಧ ಸನ್ಯಾಸಿ. ದೀರ್ಘ ಧ್ಯಾನದ ಸಮಯದಲ್ಲಿ ಎಚ್ಚರವಾಗಿರಲು ಅವರು ಚಹಾ ಎಲೆಗಳನ್ನು ಅಗಿಯುತ್ತಿದ್ದರು ಎಂದು ನಂಬಲಾಗಿದೆ. ಇದು ಅವರಿಗೆ ಧ್ಯಾನಿಸಲು ಸಹಾಯ ಮಾಡಿತು. ಹೀಗೆಯೇ ಚಹಾವು ಮನಸ್ಸನ್ನು ಚುರುಕುಗೊಳಿಸುವ ಪಾನೀಯ ಎಂದು ಪ್ರಸಿದ್ಧವಾಯಿತು ಎನ್ನಲಾಗುತ್ತದೆ.
1830ರ ದಶಕದಲ್ಲಿ ಚಹಾ ಜಾಗತಿಕವಾಗಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತು. ಈ ಸಮಯದಲ್ಲಿ, ಬ್ರಿಟಿಷರು ಅಸ್ಸಾಂನಲ್ಲಿ ಸ್ಥಳೀಯ ಚಹಾ ಸಸ್ಯಗಳನ್ನು ಕಂಡುಹಿಡಿದರು. ನಂತರ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಕೃಷಿ ಆರಂಭವಾಯಿತು. ಅಂತಿಮವಾಗಿ ಇದು ವಿಶ್ವದಲ್ಲೇ ಹೆಚ್ಚು ಸೇವಿಸುವ ಪಾನೀಯಗಳಲ್ಲಿ ಒಂದಾಯಿತು.
ಇದನ್ನೂ ಓದಿ: ‘ಕರ್ಪೂರ’ ಮನೆಗೆ ರಕ್ಷಾ ಕವಚ.. ಅಬ್ಬಾ ಎಷ್ಟೊಂದು ಲಾಭ ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us