/newsfirstlive-kannada/media/media_files/2025/12/26/lemon-1-2025-12-26-10-30-25.jpg)
ನಿಂಬೆಹಣ್ಣಿನ ಬಗ್ಗೆ ಗೊತ್ತಿಲ್ಲದವರು ಇಲ್ಲ. ದೈನಂದಿನ ಜೀವನದಲ್ಲಿ ಅವುಗಳನ್ನು ಹಲವು ರೀತಿಯಲ್ಲಿ ಬಳಸುತ್ತೇವೆ. ಆಹಾರದಲ್ಲಿ ನಿಂಬೆಹಣ್ಣನ್ನು ಸೇರಿಸೋದ್ರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸಬಹುದು ಎಂದು ಆರೋಗ್ಯ ತಜ್ಞರು ಹೇಳ್ತಾರೆ. ಇದು ವಿಶೇಷವಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡ್ತದೆ.
ಅನೇಕರು ಊಟಕ್ಕೆ ನಿಂಬೆ ರಸ ಸೇರಿಸುತ್ತಾರೆ. ನಿಂಬೆಯಲ್ಲಿ ಅತ್ಯಧಿಕ ಪ್ರಮಾಣದ ವಿಟಮಿನ್ ಸಿ ಇರುತ್ತದೆ. ವಿಟಮಿನ್ ಸಿ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ನಿಂಬೆಹಣ್ಣು ಮಾತ್ರವಲ್ಲ, ನಿಂಬೆ ಸಿಪ್ಪೆಯೂ ಪ್ರಯೋಜನಕಾರಿ.
ಇದನ್ನೂ ಓದಿ: ‘ಕರ್ಪೂರ’ ಮನೆಗೆ ರಕ್ಷಾ ಕವಚ.. ಅಬ್ಬಾ ಎಷ್ಟೊಂದು ಲಾಭ ಗೊತ್ತಾ?
/filters:format(webp)/newsfirstlive-kannada/media/media_files/2025/12/26/lemon-2025-12-26-10-39-09.jpg)
ನಿಂಬೆ ಸಿಪ್ಪೆಗಳಲ್ಲಿ ವಿಟಮಿನ್ ಸಿ ಮತ್ತು ಫ್ಲೇವನಾಯ್ಡ್‌ಗಳಿವೆ. ಅವು ವಿವಿಧ ರೀತಿಯ ಫೈಬರ್ ಹೊಂದಿರುತ್ತವೆ. ನಿಂಬೆ ಸಿಪ್ಪೆಯಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಕೂಡ ಸಮೃದ್ಧವಾಗಿದೆ.
ನಿಂಬೆ ಸಿಪ್ಪೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ನಿಂಬೆ ಸಿಪ್ಪೆಯಿಂದ ಪಾತ್ರೆಗಳನ್ನು ಸ್ವಚ್ಛಗೊಳಿಸಿದರೆ ಅವು ಹೊಳೆಯುತ್ತವೆ. ನಿಂಬೆ ಸಿಪ್ಪೆಗಳನ್ನು ಬಿಸಿ ನೀರಿನಲ್ಲಿ ಕುದಿಸಿ ಆ ನೀರಿನಲ್ಲಿ ಸ್ವಚ್ಛವಾದ ಬಟ್ಟೆಯನ್ನು ಅದ್ದಿ ದೇಹದ ಮೇಲೆ ಉಜ್ಜಿದರೆ ದುರ್ವಾಸನೆ ಮಾಯ ಆಗುತ್ತದೆ. ನಿಂಬೆ ಸಿಪ್ಪೆಯಲ್ಲಿ ನಾರು ಸಮೃದ್ಧವಾಗಿದೆ, ಆದ್ದರಿಂದ ಇದು ಮಲಬದ್ಧತೆ ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಕರುಳಿನ ಹುಣ್ಣುಗಳನ್ನು ಗುಣಪಡಿಸುತ್ತದೆ.
ಮೊಡವೆ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಸಹಾಯಕ. ನಿಂಬೆ ಸಿಪ್ಪೆಯ ಪುಡಿmoಯಿಂದ ತಯಾರಿಸಿದ ಫೇಸ್ ಮಾಸ್ಕ್ ಬಳಸಬಹುದು. ಇದು ಮೊಡವೆ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ:ಮನೆ ನಾಯಿಗೆ ದೀರ್ಘಕಾಲ ಅನಾರೋಗ್ಯ.. ನೊಂದು ಆತ್ಮಹತ್ಯೆ ಮಾಡಿಕೊಂಡ ಸಹೋದರಿಯರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us