ಮನೆ ನಾಯಿಗೆ ದೀರ್ಘಕಾಲ ಅನಾರೋಗ್ಯ.. ನೊಂದು ಆತ್ಮಹತ್ಯೆ ಮಾಡಿಕೊಂಡ ಸಹೋದರಿಯರು

ಉತ್ತರ ಪ್ರದೇಶದ ಲಕ್ನೋದಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಬ್ಬರು ಸಹೋದರಿಯರು ತಮ್ಮ ಸಾಕು ನಾಯಿಯ ಅನಾರೋಗ್ಯದಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

author-image
Ganesh Kerekuli
Two sister

Photograph: (AI)

Advertisment

ಉತ್ತರ ಪ್ರದೇಶದ ಲಕ್ನೋದಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಬ್ಬರು ಸಹೋದರಿಯರು ತಮ್ಮ ಸಾಕು ನಾಯಿಯ ಅನಾರೋಗ್ಯದಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ರಾಧಾ ಸಿಂಗ್ ಮತ್ತು ಜಿಯಾ ಸಿಂಗ್ ಮೃತ ಸಹೋದರಿಯರು. ಇವರಿಬ್ಬರು ಹಲವು ವರ್ಷಗಳಿಂದ ಖಿನ್ನತೆಯಿಂದ ಬಳಲುತ್ತಿದ್ದರು. ಪದವಿ ಓದಿಕೊಂಡಿದ್ದ ಇವರಿಬ್ಬರು, 2024ರಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರು ಚಿಕಿತ್ಸೆ ಕೂಡ ಪಡೆಯುತ್ತಿದ್ದರು. 

ಈ ಮಧ್ಯೆ ಇವರಿಬ್ಬರು ಪ್ರೀತಿಯಿಂದ ಸಾಕಿದ್ದ ನಾಯಿ ಅನಾರೋಗ್ಯಕ್ಕೆ ಒಳಗಾಗಿತ್ತು. ಇದರಿಂದ ತುಂಬಾ ದುಃಖಿತರಾಗಿದ್ದರು.  ತಾಯಿ ದಿನಸಿ ತರಲು ಕಳುಹಿಸಿದಾಗ ಫಿನೈಲ್ ಖರೀದಿಸಿ ಸೇವಿಸಿದ್ದಾರೆ. ಕೂಡಲೇ ಅಸ್ವಸ್ಥರಾದ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: Super six: ಟೀಂ ಇಂಡಿಯಾಗೆ ಭರ್ಜರಿ ಗುಡ್​ನ್ಯೂಸ್; ಫೀಲ್ಡಿಗೆ ಇಳಿದ ಸ್ಟಾರ್​ ಬ್ಯಾಟರ್​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Dog
Advertisment