Super six: ಟೀಂ ಇಂಡಿಯಾಗೆ ಭರ್ಜರಿ ಗುಡ್​ನ್ಯೂಸ್; ಫೀಲ್ಡಿಗೆ ಇಳಿದ ಸ್ಟಾರ್​ ಬ್ಯಾಟರ್​!

ಕ್ರಿಕೆಟ್ ಲೋಕದ ಪ್ರಮುಖ ಆರು ಸುದ್ದಿಗಳು ಇಲ್ಲಿವೆ. ವಿಜಯ್​ ಹಜಾರೆ ಟೂರ್ನಿ ದೆಹಲಿ ಹಾಗೂ ಗುಜರಾತ್​ ನಡುವಿನ ಪಂದ್ಯ ನಡೆಯಲಿದೆ. ವಿಶ್ವಕಪ್​ನಿಂದ ಹೊರಬಿದ್ದಿರುವ ಗಿಲ್, ಸ್ಫೋಟಕ ಬ್ಯಾಟಿಂಗ್​ಗೆ ಸಿದ್ಧರಾಗಿದ್ದಾರೆ.

author-image
Ganesh Kerekuli
Shreyas iyer
Advertisment

ವಿರಾಟ್​ ಕೊಹ್ಲಿ ಮೇಲೆ ಫ್ಯಾನ್ಸ್​ ಕಣ್ಣು

Virat kohli (4)

ವಿಜಯ್​ ಹಜಾರೆ ಟೂರ್ನಿ ದೆಹಲಿ ಹಾಗೂ ಗುಜರಾತ್​ ನಡುವಿನ ಪಂದ್ಯದ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಬಿಸಿಸಿಐನ ಸೆಂಟರ್​ ಆಫ್​ ಎಕ್ಸಲೆನ್ಸ್​ನಲ್ಲಿ ನಡೆಯೋ ಇಂದಿನ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಪ್ರಮುಖ ಆಕರ್ಷಣೆಯಾಗಿದ್ದಾರೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿರುವ ವಿರಾಟ್​ ಕೊಹ್ಲಿಯಿಂದ ಮತ್ತೊಂದು ಭರ್ಜರಿ ಇನ್ನಿಂಗ್ಸ್​ನ ನಿರೀಕ್ಷೆ ಅಭಿಮಾನಿಗಳಲ್ಲಿದೆ. ಬಹುತೇಕ ಇದೇ ಈ ಸೀಸನ್​ನಲ್ಲಿ ಕೊಹ್ಲಿ ಆಡೋ ಕೊನೆಯ ವಿಜಯ್​ ಹಜಾರೆ ಪಂದ್ಯವಾಗಿದೆ.

ಅಭ್ಯಾಸದ ಕಣಕ್ಕೆ ಮರಳಿದ ಶ್ರೇಯಸ್​ ಅಯ್ಯರ್

Iyer

ಆಸ್ಟ್ರೇಲಿಯಾ ಪ್ರವಾಸದಲ್ಲಿ ಇಂಜುರಿಗೆ ತುತ್ತಾಗಿದ್ದ ಟೀಮ್​ ಇಂಡಿಯಾ ಏಕದಿನ ತಂಡದ ಉಪನಾಯಕ ಶ್ರೇಯಸ್​ ಅಯ್ಯರ್ ಮೈದಾನಕ್ಕೆ ಮರಳಿದ್ದಾರೆ.  ಒಂದೂವರೆ ತಿಂಗಳ ಬಳಿಕ ಫೀಲ್ಡ್​ಗೆ ಕಮ್​ಬ್ಯಾಕ್ ಮಾಡಿರೋ ಶ್ರೇಯಸ್​​ ಮುಂಬೈನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಬ್ಯಾಟಿಂಗ್​ಗಿಂತ ಫಿಟ್​ನೆಸ್​ ಕಡೆಗೆ ಹೆಚ್ಚು ಗಮನವಹಿಸಿದ್ದು, ಫಿಸಿಯೋ ನೆರವಿನೊಂದಿಗೆ ಶ್ರೇಯಸ್​​ ಅಯ್ಯರ್​ ಸಿದ್ಧತೆಯನ್ನ ಆರಂಭಿಸಿದ್ದಾರೆ. ಅಕ್ಟೋಬರ್​ನಲ್ಲಿ ಆಸ್ಟ್ರೇಲಿಯಾ ಪ್ರವಾಸದ ವೇಳೆ ಭುಜದ ಗಂಭೀರ ಇಂಜುರಿಗೆ ಶ್ರೇಯಸ್​ ತುತ್ತಾಗಿದ್ರು. 

ಡೆಲ್ಲಿ ಪಂದ್ಯದ ಬಗ್ಗೆ ಗೂಗಲ್​ನಲ್ಲಿ ದಾಖಲೆಯ ಹುಡುಕಾಟ

ಬೆಂಗಳೂರಿನ ಬಿಸಿಸಿಐ ಸೆಂಟರ್​ ಆಫ್​ ಎಕ್ಸಲೆನ್ಸ್​ನಲ್ಲಿ ಮೊನ್ನೆ ನಡೆದ ಡೆಲ್ಲಿ ಹಾಗೂ ಆಂಧ್ರ ಪ್ರದೇಶ ನಡುವಿನ ವಿಜಯ್​ ಹಜಾರೆ ಪಂದ್ಯ ಗೂಗಲ್​ನಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಮಂಗಳವಾರ ನಡೆದ ಪಂದ್ಯದ ಬಗ್ಗೆ ಗೂಗಲ್​ನಲ್ಲಿ 1 ಮಿಲಿಯನ್​ ಅಧಿಕ ಬಾರಿ ಹುಡುಕಾಟ ನಡೆದಿದೆ. ಇದ್ರೊಂದಿಗೆ ಒಂದೇ ದಿನ ಅತಿ ಹೆಚ್ಚು ಬಾರಿ ಸರ್ಚ್​ ಆದ ಡೊಮೆಸ್ಟಿಕ್​ ಪಂದ್ಯ ಎಂಬ ದಾಖಲೆ ಬರೆದಿದೆ. ದೆಹಲಿ ಪರ ವಿರಾಟ್​ ಕೊಹ್ಲಿ ಕಣಕ್ಕಿಳಿದಿದ್ದ ಈ ಪಂದ್ಯದ ನೇರ ಪ್ರಸಾರವಿರಲಿಲ್ಲ. ಹೀಗಾಗಿ ಸ್ಕೋರ್​ ನೋಡಲು ಫ್ಯಾನ್ಸ್​ 1 ಮಿಲಿಯನ್​ಗೂ ಅಧಿಕ ಬಾರಿ ಸರ್ಚ್​ ಮಾಡಿದ್ದಾರೆ. 

ಇದನ್ನೂ ಓದಿ: ಲಿಸ್ಟ್​​ ಎ ಟೂರ್ನಿಯಲ್ಲಿ ಕೊಹ್ಲಿ ಬಾರಿಸಿದ ಶತಕಗಳು ಎಷ್ಟು ಗೊತ್ತಾ..?

ವಿಜಯ್​ ಹಜಾರೆ ಪಂದ್ಯಕ್ಕೆ ಗಿಲ್​ ಭರ್ಜರಿ ಅಭ್ಯಾಸ

Gill (1)

ಟೀಮ್​ ಇಂಡಿಯಾ ಏಕದಿನ ತಂಡದ ನಾಯಕ ಶುಭ್​ಮನ್​ ಗಿಲ್​, ವಿಜಯ್​ ಹಜಾರೆ ಟೂರ್ನಿಗೆ ಭರ್ಜರಿ ಸಿದ್ಧತೆ ಆರಂಭಿಸಿದ್ದಾರೆ. ಸೌತ್​ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಇಂಜುರಿಗೆ ತುತ್ತಾಗಿದ್ದ ಗಿಲ್ ಸಂಪೂರ್ಣ ಫಿಟ್​ ಆಗಿದ್ದು, ಅಭ್ಯಾಸದ ಕಣಕ್ಕೆ ಮರಳಿದ್ದಾರೆ. ಪಂಜಾಬ್​ ಕ್ರಿಕೆಟ್​ ಅಸೋಸಿಯೇಷನ್​ ಸ್ಟೇಡಿಯಂನಲ್ಲಿ ಯುವ ಆಟಗಾರರ ನೆರವಿನೊಂದಿಗೆ ಅಭ್ಯಾಸ ನಡೆಸಿದ್ದಾರೆ. ಜನವರಿ 11ರಿಂದ ಆರಂಭವಾಗೋ ಸೌತ್​ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೂ ಮುನ್ನ ವಿಜಯ್​ ಹಜಾರೆ ಟೂರ್ನಿಯಲ್ಲಿ ಗಿಲ್​ ಕೆಲ ಪಂದ್ಯಗಳನ್ನಾಡಲಿದೆ. 

ತಂದೆಯ ಹುಟ್ಟುಹಬ್ಬ ಸೆಲಬ್ರೇಟ್​ ಮಾಡಿದ ಚಹಲ್​

ಸೂರ್ಯ, ಸಿರಾಜ್ ಸೇರಿ ಈ ಆಟಗಾರರು ಇನ್ಮುಂದೆ ಒನ್​ಡೇ ಮ್ಯಾಚ್ ಆಡುವುದೇ ಡೌಟ್​

ಟೀಮ್​ ಇಂಡಿಯಾ ಸ್ಪಿನ್ನರ್​ ಯುಜುವೇಂದ್ರ ಚಹಲ್​ ತಂದೆಯ ಹುಟ್ಟುಹಬ್ಬವನ್ನ ಆಚರಿಸಿದ್ದಾರೆ. ನಿನ್ನೆ ಚಹಲ್​ ತಂದೆ 75ನೇ ವರ್ಷಕ್ಕೆ ಕಾಲಿಟ್ರು. ತಂದೆಯ ಹುಟ್ಟುಹಬ್ಬವನ್ನ ಚಹಲ್​, ತಾಯಿ ಹಾಗೂ ಸಹೋದರಿ ಜೊತೆಗೆ ಆಚರಿಸಿದ್ದಾರೆ. ಸಂಭ್ರಮಾಚರಣೆಯ ಫೋಟೋ, ವಿಡಿಯೋವನ್ನ ಸೋಷಿಯಲ್​ ಮೀಡಿಯಾದಲ್ಲಿ ಚಹಲ್​ ಹಂಚಿಕೊಂಡಿದ್ದು, ಫ್ಯಾನ್ಸ್​ ಶುಭಕೋರಿದ್ದಾರೆ. 

ಇಂದು ಭಾರತ-ಶ್ರೀಲಂಕಾ 3ನೇ T20 ಪಂದ್ಯ

ಶ್ರೇಯಾಂಕ ಪಾಟೀಲ್​ಗೆ​ ಬಿಗ್ ಶಾಕ್.. ಹರಾಜಿನಲ್ಲಿ ಅನ್​ಸೋಲ್ಡ್.. ಸ್ಮೃತಿ ಮಂದಾನಗೆ ಒಲಿದ ಲಕ್​..!

ಭಾರತ-ಶ್ರೀಲಂಕಾ ವನಿತೆಯರ ಟಿ20 ಸರಣಿಯ 3ನೇ ಪಂದ್ಯಕ್ಕೆ ಕೌಂಟ್​​ಡೌನ್​ ಆರಂಭವಾಗಿದೆ. ಕೇರಳದ ತಿರುವನಂತಪುರಂನ ಗ್ರೀನ್​ಫೀಲ್ಡ್​ ಸ್ಟೇಡಿಯಂನಲ್ಲಿ ಇಂದಿನ ಪಂದ್ಯ ನಡೆಯಲಿದೆ. ಸತತ 2 ಪಂದ್ಯಗಳನ್ನ ಗೆದ್ದಿರುವ ಟೀಮ್​ ಇಂಡಿಯಾ, ಇಂದೇ ಸರಣಿ ಗೆದ್ದು ಬೀಗುವ ಲೆಕ್ಕಾಚಾರದಲ್ಲಿದೆ. ಪ್ರವಾಸಿ ಶ್ರೀಲಂಕಾ ತಂಡ ಸರಣಿಯನ್ನ ಜೀವಂತವಾಗಿರಿಸಿಕೊಳ್ಳೋ ಅನಿವಾರ್ಯತೆಗೆ ಸಿಲುಕಿದೆ. 

ಇದನ್ನೂ ಓದಿ:ಅಂದು ಅಶಿಸ್ತಿನಿಂದಾಗಿ ಅವಮಾನ, ಇಂದು ದಾಖಲೆ ವೀರನಿಗೆ ಸನ್ಮಾನ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Virat Kohli Cricket news in Kannada Shreyas Iyer Yuzvendra Chahal Kohli
Advertisment