ಅಂದು ಅಶಿಸ್ತಿನಿಂದಾಗಿ ಅವಮಾನ, ಇಂದು ದಾಖಲೆ ವೀರನಿಗೆ ಸನ್ಮಾನ..!

ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಇಶಾನ್ ಕಿಶನ್​ಗೆ ಬ್ಯಾಡ್ ಲಕ್ ದೂರವಾಗಿದೆ. ಕಳೆದೆರಡು ವರ್ಷದಿಂದ ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದ ಕಿಶನ್ ಈಗ ಟಿ-20 ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಡ್ರೀಮ್ ಫಾರ್ಮ್​​ನಲ್ಲಿ ಬ್ಯಾಟಿಂಗ್ ನಡೆಸ್ತಿರುವ ಅವರು, ಸಿಕ್ಕ ಸಿಕ್ಕ ದಾಖಲೆಗಳನ್ನ ಪೀಸ್ ಪೀಸ್ ಮಾಡ್ತಿದ್ದಾರೆ.

author-image
Ganesh Kerekuli
Ishan kishan (2)
Advertisment
  • ಲಿಸ್ಟ್​ 'ಎ' ಕ್ರಿಕೆಟ್​​ನಲ್ಲಿ ಇಶಾನ್ ದಾಖಲೆಯ ಸರದಾರ
  • ಅಂದು ಪುಣೆ, ಇಂದು ಅಹ್ಮದಾಬಾದ್​ನಲ್ಲಿ ಸಿಕ್ಸರ್​ಗಳ ಮಳೆ
  • ಪಂತ್​ಗೆ ಪಂಚ್ ಕೊಟ್ರಾ ಗೆಳೆಯ ಇಶಾನ್ ಕಿಶನ್..!

ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಇಶಾನ್ ಕಿಶನ್​ಗೆ ಬ್ಯಾಡ್ ಲಕ್ ದೂರವಾಗಿದೆ. ಕಳೆದೆರಡು ವರ್ಷದಿಂದ ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದ ಕಿಶನ್ ಈಗ ಟಿ-20 ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಡ್ರೀಮ್ ಫಾರ್ಮ್​​ನಲ್ಲಿ ಬ್ಯಾಟಿಂಗ್ ನಡೆಸ್ತಿರುವ ಅವರು, ಸಿಕ್ಕ ಸಿಕ್ಕ ದಾಖಲೆಗಳನ್ನ ಪೀಸ್ ಪೀಸ್ ಮಾಡ್ತಿದ್ದಾರೆ.

ಇಶಾನ್ ಕಿಶನ್ ಕರಿಯರ್ ಮುಗೀತು ಅಂತಿದ್ದವರಿಗೆ ಜಾರ್ಖಂಡ್ ವಿಕೆಟ್ ಕೀಪರ್ ಮುಟ್ಟಿನೋಡಿಕೊಳ್ಳುವ ಹಾಗೆ ಉತ್ತರ ಕೊಟ್ಟಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಸೈಯ್ಯದ್ ಮುಷ್ತಾಕ್ ಅಲಿ T20 ಫೈನಲ್​ ಪಂದ್ಯದಲ್ಲಿ ಘರ್ಜಿಸಿದ್ದ ಕಿಶನ್, ಇದೀಗ ವಿಜಯ್ ಹಜಾರೆ ಟೂರ್ನಿಯ ಮೊದಲ ಪಂದ್ಯದಲ್ಲೇ ಅಬ್ಬರಿಸಿದ್ದಾರೆ. ಅಹ್ಮಾದಾಬಾದ್​ನಲ್ಲಿ ಬೌಂಡರಿ, ಸಿಕ್ಸರ್​ಗಳ ಮಳೆ ಸುರಿಸಿರುವ ಕಿಶನ್, ದಾಖಲೆ ಸೃಷ್ಟಿಸಿದ್ದಾರೆ. 

ಇದನ್ನೂ ಓದಿ:ಲಿಸ್ಟ್​​ ಎ ಟೂರ್ನಿಯಲ್ಲಿ ಕೊಹ್ಲಿ ಬಾರಿಸಿದ ಶತಕಗಳು ಎಷ್ಟು ಗೊತ್ತಾ..?

ಕರ್ನಾಟಕ ವಿರುದ್ಧ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​​ಗಿಳಿದ ಇಶಾನ್ ಕಿಶನ್, ಸಿಡಿಲಬ್ಬರದ ಶತಕ ಸಿಡಿಸಿದ್ದಾರೆ. ಕೇವಲ 33 ಎಸೆತಗಳಲ್ಲಿ ಸೆಂಚುರಿ ಬಾರಿಸಿರುವ ಕಿಶನ್, ಕರ್ನಾಟಕ ಬೌಲರ್​ಗಳಿಗೆ ಬೆವರಿಳಿಸಿದ್ದಾರೆ. 39 ಎಸೆತಗಳನ್ನ ಎದುರಿಸಿದ್ದ ವಿಕೆಟ್ ಕೀಪರ್ ಬ್ಯಾಟರ್​​​​​, 7 ಬೌಂಡರಿ 14 ಸಿಕ್ಸರ್​ಗಳ ಸಹಿತ ಒಟ್ಟು 125 ರನ್​ಗಳಿಸಿದ್ರು. ಕಿಶನ್ ಬ್ಯಾಟಿಂಗ್ ಸ್ಟ್ರೈಕ್​ರೇಟ್ 321.

ಇಶಾನ್ ಕಿಶನ್​​ ವಿಶ್ವದಾಖಲೆಗೆ ಜಸ್ಟ್ ಮಿಸ್ ಆಯ್ತು. ಕೇವಲ ಒಂದೇ ಒಂದು ಎಸೆತದಿಂದ ಕಿಶನ್, ವರ್ಲ್ಡ್​ ರೆಕಾರ್ಡ್ ಮಿಸ್ ಮಾಡಿಕೊಂಡ್ರು. ಬಿಹಾರದ ಸಕಿಬುಲ್ ಗನಿ, ಅರುಣಾಚಲ್ ಪ್ರದೇಶ್ ತಂಡದ ವಿರುದ್ಧ 32 ಎಸೆತಗಳಲ್ಲಿ ಶತಕ ಸಿಡಿಸಿದ್ರು. ಆದ್ರೆ ಕಿಶನ್ 33 ಎಸೆತಗಳಲ್ಲಿ ಮೂರಂಕಿ ದಾಟಿದ್ರು. ಲಿಸ್ಟ್​ 'ಎ' ಕ್ರಿಕೆಟ್​​ನಲ್ಲಿ ಕಿಶನ್,​​​​ 2ನೇ ಶರವೇಗದ ಶತಕ ದಾಖಲಿಸಿದ್ರು.

ಇದನ್ನೂ ಓದಿ: ದಯಾಳ್​​ಗೆ ಕೋರ್ಟ್ ಶಾಕ್.. ಈತನ ಉಳಿಸಿಕೊಂಡು ತಪ್ಪು ಮಾಡ್ತಾ RCB?

Ishan kishan

ಡಿಸೆಂಬರ್ 18, ಪುಣೆಯಲ್ಲಿ ನಡೆದ ಸೈಯ್ಯದ್ ಮುಷ್ತಾಕ್ ಅಲಿ T20 ಫೈನಲ್​ ಪಂದ್ಯದಲ್ಲಿ ಇಶಾನ್ ಕಿಶನ್, 45 ಎಸೆತಗಳಲ್ಲಿ ಶತಕ ಸಿಡಿಸಿದ್ರು. ಆ ಇನ್ನಿಂಗ್ಸ್​ನಲ್ಲಿ ಕಿಶನ್ 10 ಭರ್ಜರಿ ಸಿಕ್ಸರ್​ಗಳನ್ನ ಸಿಡಿಸಿದ್ರು. ನೆನ್ನೆ ಅಹ್ಮಾದಾಬಾದ್​ನಲ್ಲಿ ನಡೆದ ವಿಜಯ್ ಹಜಾರೆ ಟೂರ್ನಿಯ ಮೊದಲ ಪಂದ್ಯದಲ್ಲಿ ಕಿಶನ್, 33 ಎಸೆತಗಳಲ್ಲಿ ಶತಕ ಸಿಡಿಸಿದ್ರು. 14 ಸಿಕ್ಸರ್​ಗಳು, ಕಿಶನ್ ಹೆಸರಲ್ಲಿ ದಾಖಲಾಗಿತ್ತು.

ಇಶಾನ್ ಕಿಶನ್ ಫಾರ್ಮ್ ನೋಡ್ತಿದ್ರೆ ಆತ ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ಗಳನ್ನೆಲ್ಲಾ ಸಂಕಷ್ಟಕ್ಕೆ ಸಿಲುಕಿಸಿದಂತೆ ಕಾಣುತ್ತದೆ. ಅದ್ರಲ್ಲೂ ಕಿಶನ್ ತನ್ನ ಆಪ್ತ ಮಿತ್ರ, ರಿಷಭ್ ಪಂತ್​ಗೂ ಕಿರಿಕಿರಿ ಉಂಟುಮಾಡುವಂತೆ ಬ್ಯಾಟಿಂಗ್ ಮಾಡಿದ್ದಾರೆ. ಮುಷ್ತಾಕ್ ಅಲಿ ಫೈನಲ್​ನಲ್ಲಿ ಆರಂಭಿಕನಾಗಿ ಶತಕ ಸಿಡಿಸಿದ್ದ ಕಿಶನ್, ಕರ್ನಾಟಕ ವಿರುದ್ಧ ನಂಬರ್.6 ಸ್ಲಾಟ್​​ನಲ್ಲಿ ಬಂದು ಬಿರುಸಿನ ಶತಕ ಸಿಡಿಸಿದ್ದಾರೆ. ಅಂದ್ರೆ ಇಶಾನ್ ಕಿಶನ್​ಗೆ ಟಾಪ್ ಆರ್ಡರ್ ಆದ್ರೂ ಓಕೆ..! ಲೋವರ್ ಆರ್ಡರ್ ಆದ್ರೂ ಓಕೆ ಅನ್ನೋ ಮೆಸೇಜ್ ಕೊಟ್ಟಿದ್ದಾರೆ. 

ಇದನ್ನೂ ಓದಿ: SUPER SIX: ಸ್ಮೃತಿ ಮಂದಾನಗೆ ಬಿಗ್ ಶಾಕ್..!

ಡಿಸೆಂಬರ್ 23, 2023ರಂದು ಇಶಾನ್ ಕಿಶನ್ ಮೆಂಟಲ್ ಹೆಲ್ತ್ ಸಮಸ್ಯೆ ಅಂತ ಟೀಮ್ ಇಂಡಿಯಾದಿಂದ ದೂರ ಉಳಿದಿದ್ದರು. ಕಿಶನ್ ತಂಡದ ಪ್ಲಾನ್ಸ್​ನಲ್ಲಿದ್ರೂ ಅದ್ಯಾಕೆ ಇಂತಹ ನಿರ್ಧಾರ ಕೈಗೊಂಡ್ರೋ ಗೊತ್ತಿಲ್ಲ. ಆದ್ರೆ ಕಿಶನ್ ನಡುವಳಿಕೆಯನ್ನ ಪ್ರಶ್ನಿಸಿದ್ದ ಬಿಸಿಸಿಐ ಅಶಸ್ತಿನ ಆಧಾರದ ಮೇಲೆ, ರಾಷ್ಟ್ರೀಯ ತಂಡದಿಂದ ದೂರವಿಟ್ಟಿತ್ತು. 

ಟೆಸ್ಟ್, ಏಕದಿನ ತಂಡದಿಂದ ಡ್ರಾಪ್.  ಬಿಸಿಸಿಐ ಕಾಂಟ್ರ್ಯಾಕ್ಟ್​ನಿಂದ ಡ್ರಾಪ್. ಆದ್ರೆ ಅಂದಿನಿಂದ ನಿರಂತವಾಗಿ ಡೊಮೆಸ್ಟಿಕ್ ಕ್ರಿಕೆಟ್ ಆಡಿದ್ದ ಇಶಾನ್ ಕಿಶನ್, ಮತ್ತೆ ತನ್ನ ಸಾಮರ್ಥ್ಯ ತೋರಿಸಿ ಗ್ರೇಟ್​ ಕಮ್​ಬ್ಯಾಕ್ ಮಾಡಿದ್ದಾರೆ. ಅಂದು ಇಶಾನ್​​ ಕಿಶನ್​ಗೆ ಇನ್ನಿಲ್ಲದ ಅವಮಾನವಾಗಿತ್ತು. ಆದ್ರೀಗ ಅಂದು ಅವಮಾನ ಮಾಡಿದ್ದವರೇ ಸನ್ಮಾನ ಮಾಡಿ, ಟೀಮ್ ಇಂಡಿಯಾದಲ್ಲಿ ಸ್ಥಾನ ನೀಡಿದ್ದಾರೆ. ಇಶಾನ್ ಕಿಶನ್ ಒಬ್ಬ ಅಪ್ರತಿಮ ಕ್ರಿಕೆಟಿಗ. ಫಿಯರ್​ಲೆಸ್ ಕ್ರಿಕೆಟರ್ ಕಿಶನ್ ಕಮ್​ಬ್ಯಾಕ್ ಸ್ಟೋರಿ, ಇತಿಹಾಸ ಪುಟಗಳಲ್ಲಿ ಸೇರೋದ್ರಲ್ಲಿ ಯಾವುದೇ ಅನುಮಾನವಿಲ್ಲ. 

ಇದನ್ನೂ ಓದಿ:15 ಸಿಕ್ಸರ್​​, 16 ಬೌಂಡರಿ! ವೈಭವ್ ಆಟದಿಂದ ಹಿರಿಯ ಆಟಗಾರರಿಗೆ ನಡುಕ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Virat Kohli Ishan Kishan
Advertisment