ಲಿಸ್ಟ್​​ ಎ ಟೂರ್ನಿಯಲ್ಲಿ ಕೊಹ್ಲಿ ಬಾರಿಸಿದ ಶತಕಗಳು ಎಷ್ಟು ಗೊತ್ತಾ..?

ಭಾರತದ ಡೊಮೆಸ್ಟಿಕ್​ ಟೂರ್ನಿ ವಿಜಯ್​ ಹಜಾರೆ ನಿನ್ನೆ ವಿಶ್ವ ಮಟ್ಟದಲ್ಲಿ ಸದ್ದು ಮಾಡ್ತು. ವಿಶ್ವದ ನಂಬರ್​ 1 & ನಂಬರ್​ 2 ಬ್ಯಾಟರ್ಸ್​ ಡೊಮೆಸ್ಟಿಕ್​ ಕಣದಲ್ಲಿ ಧೂಳೆಬ್ಬಿಸಿದ್ರು. ಜೈಪುರದಲ್ಲಿ ಹಿಟ್​ಮ್ಯಾನ್​, ಬೆಂಗಳೂರಿನಲ್ಲಿ ಕೊಹ್ಲಿ ಕಮಾಲ್​ ಮಾಡಿದ್ರು. ಜೋಡೆತ್ತುಗಳ ದರ್ಬಾರ್​ ಹೇಗಿತ್ತು?

author-image
Ganesh Kerekuli
Virat kohli (4)
Advertisment
  • 7 ವರ್ಷದ ಬಳಿಕ ವಿಜಯ್​ ಹಜಾರೆ ಆಡಿದ ರೋಹಿತ್
  • ಸವಾಯಿ ಮಾನ್​ ಸಿಂಗ್​ ಸ್ಟೇಡಿಯಂ ಹೌಸ್​ಫುಲ್​
  • ಜೈಪುರದಲ್ಲಿ ಹಿಟ್​​ಮ್ಯಾನ್​ ಸೂಪರ್​ ಹಿಟ್​ ಶೋ

ಭಾರತದ ಡೊಮೆಸ್ಟಿಕ್​ ಟೂರ್ನಿ ವಿಜಯ್​ ಹಜಾರೆ ನಿನ್ನೆ ವಿಶ್ವ ಮಟ್ಟದಲ್ಲಿ ಸದ್ದು ಮಾಡ್ತು. ವಿಶ್ವದ ನಂಬರ್​ 1 & ನಂಬರ್​ 2 ಬ್ಯಾಟರ್ಸ್​ ಡೊಮೆಸ್ಟಿಕ್​ ಕಣದಲ್ಲಿ ಧೂಳೆಬ್ಬಿಸಿದ್ರು. ಜೈಪುರದಲ್ಲಿ ಹಿಟ್​ಮ್ಯಾನ್​ ಸೂಪರ್​ ಹಿಟ್​ ಆದ್ರೆ ಬೆಂಗಳೂರಿನಲ್ಲಿ ಕೊಹ್ಲಿ ಕಮಾಲ್​ ಮಾಡಿದ್ರು. ಜೋಡೆತ್ತುಗಳ ದರ್ಬಾರ್​ ಹೇಗಿತ್ತು ಅನ್ನೋದ್ರ ರಿಪೋರ್ಸ್​ ಇಲ್ಲಿದೆ. 

ನಿನ್ನೆ ಜೈಪುರದಲ್ಲಿ ನಡೆದ ಮುಂಬೈ ಹಾಗೂ ಸಿಕ್ಕಿಂ ನಡುವಿನ ಮ್ಯಾಚ್​ ನೋಡೋಕೆ ಸಾಗರೋಪಾದಿಯಲ್ಲಿ ಫ್ಯಾನ್ಸ್​ ಸ್ಟೇಡಿಯಂಗೆ ಎಂಟ್ರಿ ಕೊಟ್ಟಿದ್ರು. ಪೋಲಿಸರು ಅಭಿಮಾನಿಗಳನ್ನ ಕಂಟ್ರೋಲ್ ಮಾಡೋದ್ರಲ್ಲಿ​ ಬೆಸ್ತು ಬಿದ್ರು. ಸವಾರಿ ಮಾನ್​​ಸಿಂಗ್​ ಸ್ಟೇಡಿಯಂ ಅಟ್ಮಾಸ್ಪಿಯರ್​ ಬೇರೆಯದ್ದೇ ಲೆವೆಲ್​ನಲ್ಲಿತ್ತು. ನೋಡಿದವರಿಗೆ ಇಲ್ಲಿ ನಡಿತೀರೋದು ಡೊಮೆಸ್ಟಿಕ್​ ಪಂದ್ಯನಾ.? ಇಂಟರ್​​ನ್ಯಾಷನಲ್​​​ ಪಂದ್ಯನಾ.? ಅನ್ನೋ ಡೌಟ್​ ಬರುವಂತಿತ್ತು ವಾತಾವರಣ. ಇದಕ್ಕೆಲ್ಲಾ ಕಾರಣ ಯಾರು ಗೊತ್ತಾ..? ಕ್ರಿಕೆಟ್​ ಲೋಕದ ಹಿಟ್​ ಮ್ಯಾನ್​ ರೋಹಿತ್​ ಶರ್ಮಾ.!

ಇದನ್ನೂ ಓದಿ: SUPER SIX: ಸ್ಮೃತಿ ಮಂದಾನಗೆ ಬಿಗ್ ಶಾಕ್..!

ವಿಜಯ್​ ಹಜಾರೆ ಆಡಿದ ರೋಹಿತ್

ಬರೋಬ್ಬರಿ 7 ವರ್ಷಗಳ ಬಳಿಕ ಹಿಟ್​ಮ್ಯಾನ್​ ರೋಹಿತ್​ ಶರ್ಮಾ ವಿಜಯ್​ ಹಜಾರೆ ಟೂರ್ನಿಯಲ್ಲಿ ಕಣಕ್ಕಿಳಿದಿದ್ರು. ಡೊಮೆಸ್ಟಿಕ್​ ಕ್ರಿಕೆಟ್​ಗೆ ಕಮ್​ಬ್ಯಾಕ್​ ಮಾಡಿದ ರೋಹಿತ್​ನ ಕಣ್ತುಂಬಿಕೊಳ್ಳಲು ಸಾವಿರ ಸಾವಿರ ಸಂಖ್ಯೆಯಲ್ಲಿ ಫ್ಯಾನ್ಸ್​ ಜಮಾಯಿಸಿದ್ರು. ರೋಹಿತ್​, ರೋಹಿತ್​ ಎಂಬ ಝೇಂಕಾರ ಸ್ಟೇಡಿಯಂನಲ್ಲಿ ಮಾರ್ದನಿಸಿತು. ಇತಿಹಾಸದಲ್ಲೇ ಮೊದಲ ಬಾರಿಗೆ ಡೊಮೆಸ್ಟಿಕ್​ ಪಂದ್ಯದ ವೇಳೆ ಜೈಪುರದ ಸವಾಯಿ ಮಾನ್​ ಸಿಂಗ್​ ಸ್ಟೇಡಿಯಂ ಹೌಸ್​ ಫುಲ್​ ಆಗಿತ್ತು. 

ರೋಹಿತ್​ ಶರ್ಮಾ ನೋಡಲು ಸಾಗರೋಪಾದಿಯಲ್ಲಿ ಹರಿದು ಬಂದ ಫ್ಯಾನ್ಸ್​ಗೆ ನಿರಾಸೆಯಾಗಲಿಲ್ಲ. ಆರಂಭದಲ್ಲಿ ಬೌಂಡರಿ ಲೈನ್​​ ಬಳಿಯೇ ಹೆಚ್ಚು ಕಾಲ ಫೀಲ್ಡ್​ ಮಾಡಿ ಅಭಿಮಾನಿಗಳನ್ನ ಖುಷಿ ಪಡಿಸಿದ್ರು. ಬಳಿಕ ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಸೂಪರ್​ ಹಿಟ್​ ಇನ್ನಿಂಗ್ಸ್​ ಕಟ್ಟಿ ಭರ್ಜರಿ ಟ್ರೀಟ್​​ ನೀಡಿದ್ರು. ಸಿಕ್ಸರ್​, ಬೌಂಡರಿಗಳ ಆರ್ಭಟಕ್ಕೆ ಫ್ಯಾನ್ಸ್​ ಹುಚ್ಚೆದ್ದು ಕುಣಿದ್ರು. 

ಇದನ್ನೂ ಓದಿ: ದಯಾಳ್​​ಗೆ ಕೋರ್ಟ್ ಶಾಕ್.. ಈತನ ಉಳಿಸಿಕೊಂಡು ತಪ್ಪು ಮಾಡ್ತಾ RCB?

ಪಿಂಕ್​ ಸಿಟಿಯಲ್ಲಿ ಬೌಂಡರಿ, ಸಿಕ್ಸರ್​ಗಳ ಬೋರ್ಗರೆತ ಸೃಷ್ಟಿಸಿದ ಮುಂಬೈಕರ್​ ರೋಹಿತ್​ ಸೆಂಚುರಿ ಸಿಡಿಸಿದ್ರು. ಕೇವಲ 61 ಎಸೆತಗಳಲ್ಲಿ ಶತಕ ಸಿಡಿಸಿ ಧಮಾಕ ಸೃಷ್ಟಿಸಿದ್ರು. ಪಂದ್ಯದಲ್ಲಿ ಒಟ್ಟು 94 ಎಸೆತಗಳನ್ನ ಎದುರಿಸಿದ ರೋಹಿತ್ 14 ಬೌಂಡರಿ, 9 ಸಿಕ್ಸರ್​ ಸಿಡಿಸಿದ್ರು. 164ರ ಸ್ಟ್ರೈಕ್​ರೇಟ್​ನಲ್ಲಿ ಘರ್ಜಿಸಿದ ಮುಂಬೈಕರ್​, 155 ರನ್​ ಚಚ್ಚಿ ಬಿಸಾಕಿದ್ರು. 

ಬೆಂಗಳೂರಿನಲ್ಲಿ ಕಿಂಗ್​ ಕೊಹ್ಲಿ ಘರ್ಜನೆ

ಜೈಪುರದಲ್ಲಿ ಹಿಟ್​ಮ್ಯಾನ್​ ರೋಹಿತ್​ ಸೂಪರ್​ ಹಿಟ್​​ ಶೋ ನೀಡಿದ್ರೆ, ಬೆಂಗಳೂರಿನಲ್ಲಿ ಕೊಹ್ಲಿ ಘರ್ಜಿಸಿದ್ರು. ವಿರಾಟ್​ ಕೊಹ್ಲಿ ವಿರಾಟ ರೂಪ ದರ್ಶನಕ್ಕೆ ಆಂದ್ರ ಪ್ರದೇಶ ಬೌಲರ್ಸ್​ ಬೆಚ್ಚಿಬಿದ್ರು. ಸೆಂಟರ್​ ಆಫ್​​ ಎಕ್ಸಲೆನ್ಸ್​​ನಲ್ಲಿ ಅಬ್ಬರದ ಆಟವಾಡಿದ ಕೊಹ್ಲಿ, ಬೌಂಡರಿ, ಸಿಕ್ಸರ್​​ಗಳ ಸುರಿಮಳೆ ಸುರಿಸಿದ್ರು. ಲಿಸ್ಟ್​ ಎ ಕ್ರಿಕೆಟ್​ನಲ್ಲಿ ವೇಗವಾಗಿ 16 ಸಾವಿರ ರನ್​ ಪೂರೈಸಿ ಸ್ಪೆಷಲ್​ ರೆಕಾರ್ಡ್​ ಮಾಡಿದ್ರು. 
ಸೌತ್​ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅಬ್ಬರಿಸಿದಂತೆ ಆಂದ್ರ ವಿರುದ್ಧವೂ ಅಬ್ಬರಿಸಿ ವಿರಾಟ್​ ಕೊಹ್ಲಿ ಶತಕ ಸಿಡಿಸಿದ್ರು. 83 ಎಸೆತಗಳಲ್ಲಿ ಲಿಸ್ಟ್​ ಎ ಕ್ರಿಕೆಟ್​ನಲ್ಲಿ 58ನೇ ಸೆಂಚುರಿ ಕಂಪ್ಲೀಟ್​ ಮಾಡಿದ್ರು. ಒಟ್ಟಾರೆ 101 ಎಸೆತಗಳನ್ನ ಎದುರಿಸಿದ ಕೊಹ್ಲಿ, 131 ರನ್​ ಗಳಿಸಿದ್ರು. 14 ಬೌಂಡರಿ, 3 ಸಿಕ್ಸರ್​ ಕೊಹ್ಲಿ ಇನ್ನಿಂಗ್ಸ್​ನಲ್ಲಿದ್ವು. 

ಅಂದ್ಹಾಗೆ, ಚಿನ್ನಸ್ವಾಮಿಯಿಂದ ಬಿಸಿಸಿಐ ಸೆಂಟರ್​ ಆಫ್​ ಎಕ್ಸಲೆನ್ಸ್​​ಗೆ ಡೆಲ್ಲಿ ಮ್ಯಾಚ್​ ಶಿಫ್ಟ್​​ ಒಂದು ರೀತಿಯಲ್ಲಿ ಒಳ್ಳೆದೆ ಆಯ್ತು ಅಂತಾ ನಿನ್ನೆ ಕೆಲ ಕ್ರಿಕೆಟ್​ ಅಭಿಮಾನಿಗಳಿಗೆ ಅನ್ನಿಸಿದ್ದು ಸುಳ್ಳಲ್ಲ. ರೋಹಿತ್ ಶರ್ಮಾ​ ನೋಡೋಕೆ ಜೈಪುರದಲ್ಲಿ ಅಷ್ಟು ಅಭಿಮಾನಿಗಳು ಸೇರಿದ್ರು. ಇನ್ನು, 2ನೇ ಹೋಮ್​ಗ್ರೌಂಡ್​​ ಚಿನ್ನಸ್ವಾಮಿಯಲ್ಲಿ ವಿರಾಟ್​ ಕೊಹ್ಲಿ ಕಣಕ್ಕಿಳಿದಿದ್ರೆ, ಫ್ಯಾನ್ಸ್​​ ದಂಡೇ ಹರಿದು ಬರ್ತಿತ್ತು ಬಿಡಿ. ಅಭಿಮಾನಿಗಳನ್ನ ಕಂಟ್ರೋಲ್​ ಮಾಡೋದು ಅಸಾಧ್ಯವಾದ ಕೆಲಸವೇ ಆಗ್ತಿತ್ತು. 

ಇದನ್ನೂ ಓದಿ:ಕೆಲಸ ಹುಡುಕುತ್ತಿರೋರಿಗೆ ಗುಡ್​ನ್ಯೂಸ್.. ಇವತ್ತೇ ಅಪ್ಲೇ ಮಾಡಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kohli Rohit Sharma Vijay Hazare Trophy
Advertisment