/newsfirstlive-kannada/media/media_files/2025/10/03/milk_clove-2025-10-03-18-31-06.jpg)
ನಾವು ಸರಿಯಾದ ಆಹಾರ ಆಯ್ಕೆ ಮಾಡಿ ತಿನ್ನದಿದ್ದರೇ ಹೊಟ್ಟೆ ನೋವು ಬರುತ್ತದೆ. ಬೆಳಗ್ಗೆ ನಿತ್ಯಕರ್ಮಗಳು ಸರಿಯಾಗಿ ಮುಗಿಸದಿದ್ದರೇ ಆ ದಿನವೆಲ್ಲ ಸಮಸ್ಯೆಗೆ ಒಳಗಾಗಬೇಕಾಗುತ್ತದೆ. ಇಂತಹ ಸಮಯದಲ್ಲಿ ಕೆಲವೊಂದು ಮನೆಮದ್ದುಗಳು ಅದ್ಭುತವಾಗಿ ಕೆಲಸ ಮಾಡಬಹುದು. ಇವು ನಿಮಗೆ ಇರುವ ಹೊಟ್ಟೆ ಸಮಸ್ಯೆಗಳನ್ನ ದೂರ ಮಾಡಬಹುದು. ಇದಕ್ಕಾಗಿ ನಿತ್ಯ ರಾತ್ರಿ ವೇಳೆ ಮಲಗುವ ಮೊದಲು ಉಗುರು ಬೆಚ್ಚಗಿನ ಹಾಲು ಕುಡಿದು ಮಲಗಿದರೆ ಉತ್ತಮ. ಇದು ಯಾಕೆ ಎಂದು ಇಲ್ಲಿ ವಿವರಿಸಲಾಗಿದೆ.
ರಾತ್ರಿ ಮಲಗುವ ಮೊದಲೇ ಹಾಲು ಕುಡಿಯುವುದರಿಂದ ಅಜೀರ್ಣ, ಮಲಬದ್ಧತೆ, ಆಮ್ಲತ್ವದಂತಹ ಸಮಸ್ಯೆಗಳು ನಿವಾರಣೆ ಆಗುತ್ತವೆ. ಹಾಗೇ ಅಡುಗೆ ಮನೆಯಲ್ಲಿ ಇರುವ ಮಸಾಲೆ ಪದಾರ್ಥವೊಂದನ್ನು ಅದೇ ಹಾಲಿನಲ್ಲಿ ಸೇರಿಸಿಕೊಂಡರೇ ಮತ್ತಷ್ಟು ಪ್ರಯೋಜನಾಗಳನ್ನು ಪಡೆಯಬಹುದು. ಆ ಮಸಾಲೆ ಪದಾರ್ಥ ಬೇರೆ ಯಾವುದು ಅಲ್ಲ, ಲವಂಗ ಆಗಿದೆ.
ಹಾಲಿನಲ್ಲಿ ಲವಂಗ ಪುಡಿ ಸೇರಿಸಿಕೊಂಡು ಕುಡಿದರೆ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ರಕ್ತದೊತ್ತಡ ನಿಯಂತ್ರಣ ಮಾಡೋ ಗುಣಗಳು ಲವಂಗದಲ್ಲಿವೆ. ಹೀಗಾಗಿಯೇ ಬಿಪಿ ಇರುವವರು ಲವಂಗದ ಹಾಲು ಕುಡಿಯಬೇಕು ಎಂದು ಹೇಳಲಾಗುತ್ತದೆ. ಇದರಿಂದ ಜೀರ್ಣ ವ್ಯವಸ್ಥೆ ಬಲವಾಗುತ್ತದೆ. ಜೈವಿಕ ಕ್ರಿಯೆ ವೇಗ ಪಡೆದುಕೊಳ್ಳಬೇಕು ಎಂದರೆ ಲವಂಗದ ಹಾಲು ಕುಡಿಯಬೇಕಾಗುತ್ತದೆ.
ಇದನ್ನೂ ಓದಿ: ಚಾಕೋಲೆಟ್​ಗಿಂತ ಬಿಸ್ಕತ್ತು​ಗಳು ನಮ್ಮ ಆರೋಗ್ಯಕ್ಕೆ ತುಂಬಾ ಡೇಂಜರ್.. ಹುಷಾರ್..!
/filters:format(webp)/newsfirstlive-kannada/media/media_files/2025/10/03/milk_clove_health-2025-10-03-18-31-21.jpg)
ಉಗುರು ಬೆಚ್ಚಗಿನ ಹಾಲಿನಲ್ಲಿ ಲವಂಗದ ಪುಡಿ ಸೇರಿಸಿ ಕುಡಿದರೆ ತೂಕವನ್ನು ಇಳಿಸಬಹುದು. ದೊಡ್ಡ ಕರಳನ್ನು ಶುದ್ಧಿ ಕರಿಸಿ ಆರೋಗ್ಯವಾಗಿ ಇರುವಂತೆ ಕಾಪಾಡುತ್ತದೆ. ಲವಂಗದಲ್ಲಿನ ಕ್ಯಾಲ್ಸಿಯಂ ಹಲ್ಲು, ಮೂಳೆಗಳನ್ನು ಶಕ್ತಿಯುತವಾಗಿಸುತ್ತವೆ. ಮೈ, ಕೈ ನೋವು, ಬಾಯಿಯ ದುರ್ವಾಸನೆ, ಒಸಡು ನೋವು ಎಲ್ಲ ಮಾಯವಾಗುತ್ತವೆ. ಉರಿಯೂತ ನಿವಾರಣೆಯಾಗುತ್ತದೆ.
ಬೆಳಗಿನ ಸಮಯದಲ್ಲಿ ಹೊಟ್ಟೆ ಸರಿಯಾಗಿ ಶುಚಿಯಾಗದಿದ್ದರೇ ರಾತ್ರಿ ವೇಳೆ ಲವಂಗದ ಪುಡಿ ಸೇರಿಸಿ ಹಾಲನ್ನು ಕುಡಿಯಿರಿ. ಇದರಿಂದ ನಿಮ್ಮ ನಿದ್ದೆ ಆಹ್ಲಾದಕರವಾಗಿರುತ್ತದೆ. ಹೊಟ್ಟೆಗೂ ಹೆಚ್ಚು ಉಪಯೋಗಗಳು ಇರುತ್ತವೆ. ಲವಂಗದ ಹಾಲಿನಲ್ಲಿ Carminative, Stimulant ಇರುವುದರಿಂದ ಬಿಪಿಯನ್ನು ನಿಯಂತ್ರಣದಲ್ಲಿ ಇಡುತ್ತವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us