/newsfirstlive-kannada/media/media_files/2025/10/05/cough-syrup-1-2025-10-05-09-00-37.jpg)
ಮಧ್ಯಪ್ರದೇಶದ ಚಿಂದ್ವಾರಾದ ಪರಾಸಿಯಾದಲ್ಲಿ ಕೋಲ್ಡ್ರಿಫ್ ಕೆಮ್ಮಿನ ಸಿರಪ್ (Coldrif syrup) ಸೇವಿಸಿ 10 ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಡಾ.ಪ್ರವೀಣ್ ಸೋನಿ (Praveen Soni)ಯನ್ನು ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ಶ್ರೀಸನ್ ಫಾರ್ಮಾಸ್ಯುಟಿಕಲ್ಸ್ (Srisan Pharmaceuticals) ಮತ್ತು ಡಾ. ಸೋನಿ ಅಕ್ರಮವಾಗಿ ಸಿರಪ್ ವಿತರಿಸಿದ್ದಾರೆ ಎನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದು, ಅಪರಾಧಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಡಾ. ಸೋನಿ ವಿರುದ್ಧ ಭಾರತೀಯ ದಂಡ ಸಂಹಿತೆಯ (INC) ಸೆಕ್ಷನ್ 276, ಭಾರತೀಯ ದಂಡ ಸಂಹಿತೆಯ (INC) 105 ಮತ್ತು ಔಷಧಗಳು ಮತ್ತು ಸೌಂದರ್ಯವರ್ಧಕ ಕಾಯ್ದೆಯ 27A ಅಡಿಯಲ್ಲಿ ಕೇಸ್ ದಾಖಲಾಗಿದೆ.
ಪ್ರಕರಣದ ತೀವ್ರತೆ ಮತ್ತು ಸಾವಿನ ಸಂಖ್ಯೆ
5 ವರ್ಷದೊಳಗಿನ ಮಕ್ಕಳ ದುರಂತ ಪ್ರಕರಣವು ಮೂತ್ರಪಿಂಡದ ತೀವ್ರ ಗಾಯದಿಂದ ಆಗಿದೆ. ಎನ್ಸೆಫಾಲಿಟಿಸ್ ಸಿಂಡ್ರೋಮ್ (AES) ನಿಂದ ಬಳಲಿ ಮಕ್ಕಳು ಪ್ರಾಣ ಕಳೆದುಕೊಂಡಿಲ್ಲ ಅನ್ನೋದು ಗಮನಾರ್ಹ. ಒಟ್ಟು ಇದೇ ಪ್ರಕರಣದಿಂದ ಒಟ್ಟು 10 ಕ್ಕೂ ಹೆಚ್ಚು ಮಕ್ಕಳು ಜೀವ ಬಿಟ್ಟಿದ್ದಾರೆ. ಹೆಚ್ಚುವರಿಯಾಗಿ ಮಹಾರಾಷ್ಟ್ರ ನಾಗ್ಪುರ ಆಸ್ಪತ್ರೆಯಲ್ಲಿ ಕನಿಷ್ಠ ಮಕ್ಕಳು ಡಯಾಲಿಸಿಸ್ ಮತ್ತು ವೆಂಟಿಲೇಟರ್ ಸಹಾಯದಿಂದ ಜೀವ ಉಳಿಸಿಕೊಳ್ಳಲು ಹೋರಾಟ ನಡೆಸ್ತಿದ್ದಾರೆ.
ತನಿಖೆ ಮತ್ತು ಕಾರಣಗಳು
ರಾಷ್ಟ್ರೀಯ ವೈರಾಲಜಿ ಸಂಸ್ಥೆ (NIV-ಪುಣೆ) ಸೇರಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಗಳು.. ಮಕ್ಕಳ ನಿವಾಸದಿಂದ ನೀರು ಮತ್ತು ಇತರ ಮಾದರಿಗಳ ಪರೀಕ್ಷೆ ಮಾಡಿತ್ತು. ಈ ವೇಳೆ ನೀರು ಅಥವಾ ರೋಗಕಾರಕಗಳಿಂದ ಹರಡುವ ರೋಗಗಳು ಅಥವಾ ಇಲಿಗಳು ಕಾರಣವಲ್ಲ ಅನ್ನೋದನ್ನು ತೀರ್ಮಾನಿಸಿದೆ. ಅಲ್ಲದೇ ಮಕ್ಕಳ ವೈದ್ಯಕೀಯ ಇತಿಹಾಸ ಪರಿಶೀಲಿಸಿದಾಗ ಎಲ್ಲಾ ಸಾವುಗಳಲ್ಲಿ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಬಳಕೆಯು ಸಾಮಾನ್ಯ ಅಂಶವಾಗಿದೆ ಅನ್ನೋದು ಪಕ್ಕಾ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ