Advertisment

ನಾಯಕತ್ವದಿಂದ ರೋಹಿತ್​ಗೆ ಗೇಟ್​ಪಾಸ್; ​​ಪಾಂಡ್ಯ, ಪಂತ್​ ಔಟ್, ಜಡೇಜಾಗೂ ಅನ್ಯಾಯ

ಕುತೂಹಲ ಹುಟ್ಟು ಹಾಕಿದ್ದ ಆಸ್ಟ್ರೇಲಿಯಾ ಪ್ರವಾಸದ ಟೀಮ್​ ಇಂಡಿಯಾ ಸೆಲೆಕ್ಷನ್ ಆಗಿದೆ. ಸರ್​ಪ್ರೈಸ್​ ನಿರ್ಧಾರ ತೆಗೆದುಕೊಂಡು ಶಾಕ್​ ಕೊಟ್ಟಿರುವ ಬಿಸಿಸಿಐ ಫ್ಯಾನ್ಸ್​ಗೆ ಗುಡ್​ನ್ಯೂಸ್​ ನೀಡಿದೆ. ಒನ್​ ಡೇ ಟೀಮ್​ನಲ್ಲಿ ಯಾಗಿರಲ್ಲಾ ಸ್ಥಾನ ಸಿಕ್ಕಿದೆ? ಯಾರಿಗೆ ಕೊಕ್​ ನೀಡಲಾಗಿದೆ? ರಿಪೋರ್ಟ್ ಇಲ್ಲಿದೆ.​​

author-image
Ganesh Kerekuli
Jadeja rohit
Advertisment

ತೀವ್ರ ಕುತೂಹಲ ಹುಟ್ಟು ಹಾಕಿದ್ದ ಆಸ್ಟ್ರೇಲಿಯಾ ಪ್ರವಾಸದ ಟೀಮ್​ ಇಂಡಿಯಾ ಸೆಲೆಕ್ಷನ್ ಅಂತ್ಯ ಕಂಡಿದೆ. ಸರ್​ಪ್ರೈಸ್​ ನಿರ್ಧಾರ ತೆಗೆದುಕೊಂಡು ಶಾಕ್​ ಕೊಟ್ಟಿರುವ ಸೆಲೆಕ್ಷನ್​ ಕಮಿಟಿ, ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೂಡ ನೀಡಿದೆ. ಆಸ್ಟ್ರೇಲಿಯಾ ಪ್ರವಾಸದ ಒನ್​ ಡೇ ಟೀಮ್​ನಲ್ಲಿ ಯಾಗಿರಲ್ಲಾ ಸ್ಥಾನ ಸಿಕ್ಕಿದೆ? ಯಾರಿಗೆ ಕೊಕ್​ ನೀಡಲಾಗಿದೆ? ಕಂಪ್ಲೀಟ್​ ರಿಪೋರ್ಟ್ ಇಲ್ಲಿದೆ.​​  

Advertisment

2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್​ ಬಳಿಕ ಏಕದಿನ ಮಾದರಿಯಿಂದ ದೂರ ಉಳಿದಿದ್ದ ಟೀಮ್ ಇಂಡಿಯಾ 7 ತಿಂಗಳ ಬಳಿಕ ಒನ್​ ಡೇ ಫಾರ್ಮೆಟ್​ಗೆ ಕಮ್​ಬ್ಯಾಕ್​ ಮಾಡೋಕೆ ಸಜ್ಜಾಗಿದೆ. ಆಸ್ಟ್ರೇಲಿಯಾ ಎದುರಿನ ಸರಣಿಯೊಂದಿಗೆ ಒನ್​​ ಡೇ ಅಖಾಡಕ್ಕೆ ಮರಳ್ತಾ ಇರೋ ಟೀಮ್​ ಇಂಡಿಯಾ 2027ರ ಏಕದಿನ ವಿಶ್ವಕಪ್​​ ಅಧಿಕೃವಾಗಿ ಸಿದ್ಧತೆಯನ್ನೂ ಆರಂಭಿಸಿದೆ. ಆಸ್ಟ್ರೇಲಿಯಾ ಪ್ರವಾಸಕ್ಕೆ ಅನೌನ್ಸ್​​ ಮಾಡಿರೋ ತಂಡವೇ ಸಿದ್ಧತೆ ಆರಂಭವಾದ ಕತೆಯನ್ನ ಹೇಳ್ತಿದೆ.  

ಇದನ್ನೂ ಓದಿ:ಪ್ರೀತಿಯ ತಂಗಿಯ ಮದುವೆಗೆ ಹೋಗಲೇ ಇಲ್ಲ ಯಂಗ್​ ಕ್ರಿಕೆಟರ್​ ಅಭಿಷೇಕ್ ಶರ್ಮಾ.. ಕಾರಣ?

ROHIT SHARMA AND VIRAT KOHLI

ಭವಿಷ್ಯದ ಲೆಕ್ಕಾಚಾರವನ್ನ ಹಾಕಿರುವ ಸೆಲೆಕ್ಷನ್​ ಕಮಿಟಿ ನಿರೀಕ್ಷೆಯಂತೆ ರೋಹಿತ್​ ಶರ್ಮಾಗೆ ನಾಯಕತ್ವದಿಂದ ಕೊಕ್​ ನೀಡಿದೆ. 2027ರ ಏಕದಿನ ವಿಶ್ವಕಪ್​ಗೆ ಈಗಿನಿಂದಲೇ ಸಿದ್ಧತೆ ಆರಂಭವಾಗಬೇಕು ಅನ್ನೋ ಲೆಕ್ಕಾಚಾರದಲ್ಲಿ ಯುವ ಆಟಗಾರ ಶುಭ್​ಮನ್​ ಗಿಲ್​ಗೆ ಒನ್​ ಡೇ ತಂಡದ ಸಾರಥ್ಯವನ್ನ ವಹಿಸಲಾಗಿದೆ. ಶುಭ್​ಮನ್​ ಗಿಲ್​ ನಾಯಕತ್ವದಲ್ಲಿ ಟೀಮ್​ ಇಂಡಿಯಾ ಆಸ್ಟ್ರೇಲಿಯಾ ಸರಣಿಯನ್ನ ಆಡಲಿದ್ದು, ಶ್ರೇಯಸ್​ ಅಯ್ಯರ್​ಗೆ ಉಪನಾಯಕನ ಪಟ್ಟ ಕಟ್ಟಲಾಗಿದೆ.

Advertisment

7 ತಿಂಗಳ ಬಳಿಕ ಜೋಡೆತ್ತುಗಳು ಕಮ್​ಬ್ಯಾಕ್​

ಕಳೆದ ಕೆಲ ದಿನಗಳಿಂದ ವಿರಾಟ್​​ ಕೊಹ್ಲಿ, ರೋಹಿತ್​ ಶರ್ಮಾ ಭವಿಷ್ಯ ಕ್ರಿಕೆಟ್​ ಜಗತ್ತಿನಲ್ಲಿ ತೀವ್ರವಾಗಿ ಚರ್ಚೆಯಾಗಿತ್ತು. ಟೆಸ್ಟ್​ ಹಾಗೂ ಟಿ20ಯಿಂದ ದೂರವಾಗಿರೋ ಜೋಡೆತ್ತುಗಳಿಗೆ ಏಕದಿನ ಫಾರ್ಮೆಟ್​​ನಿಂದಲೂ ಗೇಟ್​​ಪಾಸ್​ ನೀಡಲಾಗುತ್ತೆ ಎಂಬ ಚರ್ಚೆ ನಡೆದಿತ್ತು. ಈ ಅಂತೆ-ಕಂತೆಗಳಿಗೆಲ್ಲಾ ಫುಲ್​ ಸ್ಟಾಫ್​ ಬಿದ್ದಿದೆ. ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಏಕದಿನ ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 

ಇದನ್ನೂ ಓದಿ: ಕನ್ನಡಿಗ KL ರಾಹುಲ್, ಪ್ರಸಿದ್ಧ್ ಕೃಷ್ಣಗೆ ಒಂದು ಗುಡ್​ನ್ಯೂಸ್​.. ಇನ್ನೊಂದು ಬ್ಯಾಡ್ ನ್ಯೂಸ್​; ಏನದು?

Virat kohli (10)

ಕನ್ನಡಿಗ ಕೆ.ಎಲ್​​ ರಾಹುಲ್​ ಏಕದಿನ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಿಕೆಟ್​ ಕೀಪರ್​ ಬ್ಯಾಟರ್​​ ಆಗಿ ರಾಹುಲ್​ ಸ್ಥಾನಗಿಟ್ಟಿಸಿಕೊಂಡಿದ್ದು, ಮಿಡಲ್​ ಆರ್ಡರ್​ನ ಬ್ಯಾಟಿಂಗ್ಗೆ ಬಲ ತುಂಬಲಿದ್ದಾರೆ. ನಿರೀಕ್ಷೆಯಂತೆ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಬ್ಯಾಕ್​ ಅಪ್​ ಓಪನರ್​ ಆಗಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. 

Advertisment

ನಿತೀಶ್​​, ಜುರೇಲ್​ಗೆ ಚಾನ್ಸ್​ 

ಇಂಜುರಿಯಾಗಿರುವ ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ಆಸ್ಟ್ರೇಲಿಯಾ ಪ್ರವಾಸದ ತಂಡದಿಂದ ಹೊರಬಿದ್ದಿದ್ದಾರೆ. ಪಂತ್ ಸ್ಥಾನದಲ್ಲಿ ದೃವ್​ ಜುರೇಲ್​, ಹಾರ್ದಿಕ್​ ಪಾಂಡ್ಯ ಸ್ಥಾನದಲ್ಲಿ ನಿತೀಶ್​​ ರೆಡ್ಡಿ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸರ್​​ಪ್ರೈಸಿಂಗ್​ ರೀತಿಯಲ್ಲಿ ರವೀಂದ್ರ ಜಡೇಜಾನ ತಂಡದಿಂದ ಡ್ರಾಪ್​ ಮಾಡಲಾಗಿದ್ದು, ಅಕ್ಷರ್​ ಪಟೇಲ್​ಗೆ ಮಣೆ ಹಾಕಲಾಗಿದೆ. ಆಫ್​ ಸ್ಪಿನ್ನರ್​ ವಾಷಿಂಗ್ಟನ್​ ಸುಂದರ್​ ಕೂಡ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಸ್ಪೆಷಲಿಸ್ಟ್​ ಸ್ಪಿನ್ನರ್​ ಕೋಟಾದಲ್ಲಿ ಕುಲ್​​ದೀಪ್​ ಯಾದವ್​ಗೆ ಸೆಲೆಕ್ಷನ್​ ಕಮಿಟಿ ಮಣೆ ಹಾಕಿದೆ. 

ಸಿರಾಜ್ ಕಮ್​ಬ್ಯಾಕ್

ಏಕದಿನ ಸರಣಿಯಿಂದ ಯಾರ್ಕರ್​ ಸ್ಪೆಷಲಿಸ್ಟ್​ ಜಸ್​ಪ್ರೀತ್ ಬೂಮ್ರಾಗೆ ರೆಸ್ಟ್ ನೀಡಲಾಗಿದೆ. ವರ್ಕ್​​ಲೋಡ್​ ಕಾರಣಕ್ಕೆ ಬೂಮ್ರಾಗೆ ರೆಸ್ಟ್​ ನೀಡಲಾಗಿದ್ದು, ಏಕದಿನ ತಂಡದಿಂದ ಹೊರಬಿದ್ದಿದ್ದ ಮೊಹಮ್ಮದ್​ ಸಿರಾಜ್​ ಕಮ್​ಬ್ಯಾಕ್​ ಮಾಡಿದ್ದಾರೆ. ಜೊತೆಗೆ ಹರ್ಷಿತ್​ ರಾಣಾ, ಎಡಗೈ ವೇಗಿ ಆರ್ಷ್​​ದೀಪ್​ ಸಿಂಗ್​, ಕನ್ನಡಿಗ ಪ್ರಸಿದ್ಧ್​ ಕೃಷ್ಣ ವೇಗಿಗಳ ಕೋಟಾದಲ್ಲಿ ಸ್ಥಾನ ನೀಡಲಾಗಿದೆ. 

ಒಟ್ಟಿನಲ್ಲಿ, 2027ರ ಏಕದಿನ ವಿಶ್ವಕಪ್​ ಟೂರ್ನಿಯ ಸಿದ್ಧತೆಯ ಲೆಕ್ಕಾಚಾರ ಹಾಕಿರುವ ಸೆಲೆಕ್ಷನ್​ ಕಮಿಟಿ ಅಳೆದು ತೂಗಿ ಲೆಕ್ಕಾಚಾರ ಹಾಕಿ ಬ್ಯಾಲೆನ್ಸ್​ಡ್​​ ಟೀಮ್ ಸೆಲೆಕ್ಟ್​ ಮಾಡಿದೆ. ಯುವ ನಾಯಕನ ಸಾರಥ್ಯದಲ್ಲಿ ಟೀಮ್​ ಇಂಡಿಯಾ ಹೇಗೆ ಪರ್ಫಾಮ್​ ಮಾಡುತ್ತೆ.? ಮುಖ್ಯವಾಗಿ ಸುದೀರ್ಘ ಕಾಲದಿಂದ ಫೀಲ್ಡ್​ನಿಂದ ದೂರ ಉಳಿದಿದ್ದ ಕೊಹ್ಲಿ, ರೋಹಿತ್​ ಆಟ ಹೇಗಿರುತ್ತೆ.? ಅನ್ನೋ ಕುತೂಹಲ ಈಗಲೇ ಅಭಿಮಾನಿಗಳಲ್ಲಿ ಹೆಚ್ಚಿದೆ. 

Advertisment

ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಟೀಮ್ ಇಂಡಿಯಾ ತಂಡ ಪ್ರಕಟ: ಸೂರ್ಯಕುಮಾರ್ ಕ್ಯಾಪ್ಟನ್‌

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

India vs Australia IND vs AUS
Advertisment
Advertisment
Advertisment