Advertisment

ಪ್ರೀತಿಯ ತಂಗಿಯ ಮದುವೆಗೆ ಹೋಗಲೇ ಇಲ್ಲ ಯಂಗ್​ ಕ್ರಿಕೆಟರ್​ ಅಭಿಷೇಕ್ ಶರ್ಮಾ.. ಕಾರಣ?

ಅಭಿಷೇಕ್ ಶರ್ಮಾ ಅವರ ಪ್ರೀತಿಯ ತಂಗಿ ಕೋಮಲ ಅವರು ಉದ್ಯಮಿ ಲವೀಶ್​ ಒಬೆರಾಯ್​ ಅವರನ್ನು ಪಂಜಾಬ್​ನ ಅಮೃತಸರದಲ್ಲಿ ಮದುವೆಯಾಗಿದ್ದಾರೆ. ಈ ಬಗ್ಗೆ ಮಾತನಾಡಿದ ನವದಂಪತಿ ಅಭಿಷೇಕ್ ಶರ್ಮಾ ನಮ್ಮ ಮದುವೆಗೆ ಬಾರದೇ ಇರುವುದು ಬೇಸರ ಇದೆ.

author-image
Bhimappa
ABHISHEK_SHARMA_SISTER
Advertisment

ಟೀಮ್ ಇಂಡಿಯಾದ ಯಂಗ್ ಬ್ಯಾಟರ್​ ಅಭಿಷೇಕ್ ಶರ್ಮಾ ಅವರು ಏಷ್ಯಾಕಪ್​ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ಟ್ರೋಫಿ ಗೆಲುವಿಗೆ ಪ್ರಮುಖ ಕಾರಣರಾಗಿದ್ದರು. ದುಬೈ ಸ್ಟೇಡಿಯಂನಲ್ಲಿ ಪಾಕಿಸ್ತಾನವನ್ನು ಸೋಲಿಸಿದ್ದ ಟೀಮ್ ಇಂಡಿಯಾ ಕಪ್​ಗೆ ಮುತ್ತಿಕ್ಕಿತ್ತು. ಏಷ್ಯಾಕಪ್​ ಗೆದ್ದ ಬೆನ್ನಲ್ಲೇ ಅಭಿಷೇಕ್ ಶರ್ಮಾ ಭಾರತದ ಎ- ತಂಡಕ್ಕೆ ಆಯ್ಕೆ ಆಗಿದ್ದು ಸಹೋದರಿಯ ಮದುವೆಗೆ ಹಾಜರಾಗಲು ಸಾಧ್ಯವಾಗಿಲ್ಲ. 

Advertisment

ABHISHEK_SHARMA

ಭಾರತದ ಎ ತಂಡವು ಆಸ್ಟ್ರೇಲಿಯಾ ಎ ತಂಡದ ವಿರುದ್ಧ ಉತ್ತರ ಪ್ರದೇಶದ ಕಾನ್ಪುರದ ಗ್ರೀನ್ ಪಾರ್ಕ್​ ಸ್ಟೇಡಿಯಂನಲ್ಲಿ ಅನಧಿಕೃತ ಏಕದಿನ​ ಪಂದ್ಯವಾಡುತ್ತಿದ್ದಾರೆ. ಅಕ್ಟೋಬರ್​ 3 ರಂದು ಪಂದ್ಯ ಇದ್ದ ಕಾರಣ ಅಭಿಷೇಕ್ ಶರ್ಮಾ ತನ್ನ ಸಹೋದರಿಯ ಮದುವೆಗೆ ಹೋಗಲು ಸಾಧ್ಯವಾಗಿಲ್ಲ. ಆಸ್ಟ್ರೇಲಿಯಾ- ಎ ತಂಡ ಜೊತೆ ಪಂದ್ಯವಾಡುವಲ್ಲೇ ನಿರತರಾಗಿದ್ದರು ಎಂದು ಹೇಳಲಾಗಿದೆ. 

ಅಭಿಷೇಕ್ ಶರ್ಮಾ ಅವರ ಪ್ರೀತಿಯ ತಂಗಿ ಕೋಮಲ ಅವರು ಉದ್ಯಮಿ ಲವೀಶ್​ ಒಬೆರಾಯ್​ ಅವರನ್ನು ಪಂಜಾಬ್​ನ ಅಮೃತಸರದಲ್ಲಿ ಮದುವೆಯಾಗಿದ್ದಾರೆ. ಈ ಬಗ್ಗೆ ಮಾತನಾಡಿದ ನವದಂಪತಿ ಅಭಿಷೇಕ್ ಶರ್ಮಾ ನಮ್ಮ ಮದುವೆಗೆ ಬಾರದೇ ಇರುವುದು ಬೇಸರ ಇದೆ. ಆದರೂ ಎಲ್ಲರ ಆಶೀರ್ವಾದ ಸಿಕ್ಕಿದೆ. ಅಭಿಷೇಕ್ ಶರ್ಮಾ ನೂರಕ್ಕೆ ನೂರರಷ್ಟು ಕಾನಸ್ಟ್ರೇಷನ್ ಎಲ್ಲ ಭಾರತ-ಆಸಿಸ್​ ನಡುವಿನ ಪಂದ್ಯದ ಮೇಲೆ ಇರಬೇಕು, ದೇಶಕ್ಕಾಗಿ ಆಡಬೇಕು ಎಂದು ಹೇಳಿದ್ದಾರೆ.   

ಮದುವೆ ದಿನದಂದು ಅಭಿಷೇಕ್ ಶರ್ಮಾ ಮೈದಾನದಿಂದಲೇ ಸಹೋದರಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ. ಅಲ್ಲಿಂದಲೇ ನವ ಜೋಡಿಗೆ ಶುಭ ಹಾರೈಸಿದ್ದಾರೆ. ಈ ಸಂಬಂಧದ ಸ್ಕ್ರೀನ್ ಶಾಟ್ ಅನ್ನು ತಮ್ಮ ಇನ್​ಸ್ಟಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇನ್ನು ಸಹೋದರಿ ಕೋಮಲ- ಲವೀಶ್​ ಒಬೆರಾಯ್ ಅವರ ಹಳದಿ ಶಾಸ್ತ್ರದಲ್ಲಿ ಅಭಿಷೇಕ್ ಶರ್ಮಾ ಭಾಗಿಯಾಗಿರುವ ಪೋಟೋಗಳು ಹರಿದಾಡುತ್ತಿವೆ.  

Advertisment

ಇದನ್ನೂ ಓದಿ:ಭಯಾನಕ ಆ್ಯಕ್ಸಿಡೆಂಟ್​, ಸ್ಥಳದಲ್ಲೇ ಜೀವ ಬಿಟ್ಟ ಅಕ್ಕ-ತಮ್ಮ.. ಪವಾಡದಂತೆ ಬದುಕುಳಿದ 2 ವರ್ಷದ ಕಂದ

ABHISHEK_SHARMA_NEW

ಏಷ್ಯಾ ಕಪ್​ ಟೂರ್ನಿಯಲ್ಲಿ ಭರ್ಜರಿಯಾಗಿ ಬ್ಯಾಟಿಂಗ್ ಮಾಡಿದ್ದ ಅಭಿಷೇಕ್ ಶರ್ಮಾ ಅವರು ಅಮೋಘವಾದ 3 ಅರ್ಧಶತಕಗಳನ್ನು ಸಿಡಿಸಿದ್ದರು. ಅಭೀಷೇಕ್ ಶರ್ಮಾ ಬ್ಯಾಟಿಂಗ್, ಟೀಮ್ ಇಂಡಿಯಾ ಫೈನಲ್​ ತಲುಪಲು ನೆರವಾಯಿತು. ಅಲ್ಲದೇ ಈ ಟೂರ್ನಿಯಲ್ಲಿ 75 ರನ್​ಗಳು ಇವರ ಗರಿಷ್ಠ ರನ್​ ಎನಿಸಿವೆ. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Advertisment
india win asia cup Asia Cup 2025 Asia cup final Abhishek Sharma
Advertisment
Advertisment
Advertisment