/newsfirstlive-kannada/media/media_files/2025/10/04/rcr_bike_car-2025-10-04-22-15-32.jpg)
ರಾಯಚೂರು: ಬೈಕ್ ಹಾಗೂ ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿ ಅಕ್ಕ- ತಮ್ಮ ಸ್ಥಳದಲ್ಲೇ ಮೃತಪಟ್ಟಿದ್ದು ಪವಾಡ ಎಂಬಂತೆ ಎರಡು ವರ್ಷದ ಮಗು ಬದುಕುಳಿದಿದೆ. ಜಿಲ್ಲೆಯ ಮಾನ್ವಿ ತಾಲೂಕಿನ ಪೋತ್ನಾಳ ಬಳಿ ಈ ಘಟನೆ ನಡೆದಿದೆ.
ಅಕ್ಕ ಮರಿಯಮ್ಮ (28), ತಮ್ಮ ಶೇಖರಪ್ಪ (25) ಮೃತ ಬೈಕ್ ಸವಾರರು ಆಗಿದ್ದಾರೆ. ಇವರು ಬೈಕ್​ನಲ್ಲಿ ಪೋತ್ನಾಳ ಬಳಿ ತೆರಳುತ್ತಿದ್ದರು. ಈ ವೇಳೆ ಅತಿ ವೇಗವಾಗಿ ಎದುರುಗಡೆಯಿಂದ ಬಂದ ಕಾರೊಂದು ಭೀಕರವಾಗಿ ಬೈಕ್​ಗೆ ಡಿಕ್ಕಿ ಹೊಡೆದಿದೆ. ತಕ್ಷಣ ಬೈಕ್​ ಹಿಂದಿದ್ದ ಇನ್ನೊಂದು ಕಾರಿಗೂ ಭಯಾನಕವಾಗಿ ಗುದ್ದಿ ಒಂದು ಪಲ್ಟಿಯಾಗಿ ಕರೆಂಟ್​ ಕಂಬಕ್ಕೆ ರಭಸವಾಗಿ ಗುದ್ದಿ ಕಾರು ಪೀಸ್ ಪೀಸ್ ಆಗಿದೆ. ಕರೆಂಟ್ ಕಂಬ ನೆಲಕ್ಕೆ ಉರುಳಿದೆ.
ಇದನ್ನೂ ಓದಿ: ತುಮಕೂರು- ಚಿತ್ರದುರ್ಗ, ಬಾಗಲಕೋಟೆ- ಕುಡಚಿ ರೈಲು ಮಾರ್ಗ 2026ಕ್ಕೆ ಆರಂಭ- ಪ್ರಹ್ಲಾದ್ ಜೋಶಿ
ಕಾರು ವೇಗವಾಗಿ ಬಂದು ಗುದ್ದಿ ರಭಸಕ್ಕೆ ಬೈಕ್​ನಲ್ಲಿದ್ದವರು 5 ಅಡಿಗೂ ಹೆಚ್ಚು ಮೇಲೆ ಹೋಗಿ ನೆಲಕ್ಕೆ ಬಿದ್ದಿದ್ದಾರೆ. ಇದರಿಂದ ಸ್ಥಳದಲ್ಲೇ ಅಕ್ಕ-ತಮ್ಮನ ಜೀವ ಹೋಗಿದೆ. ಪವಾಡ ಎಂಬಂತೆ ಎರಡು ವರ್ಷದ ಮಗುವಿನ ಜೀವ ಉಳಿದಿದೆ. ಮಗುವಿಗೂ ಸಣ್ಣಪುಟ್ಟ ಗಾಯಗಳು ಆಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮಾನ್ವಿಯ ವಲ್ಕಂದಿನ್ನಿಯಿಂದ ಕರೆಗುಡ್ಡಕ್ಕೆ ಬೈಕ್ ಹೋಗುತ್ತಿದ್ದಾಗ ರಾಯಚೂರಿನಿಂದ ಕೊಪ್ಪಳದ ದೇಸಾಯಿ ಕ್ಯಾಂಪ್‌ಗೆ ಕಡೆಗೆ ಬರುತ್ತಿದ್ದ ಕಾರು ಭೀಕರವಾಗಿ ಡಿಕ್ಕಿಯಾಗಿದೆ. ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದು ಕಾರು ಪಲ್ಟಿಯಾಗಿ ಬಿದ್ದಿದೆ. ಅತಿ ವೇಗವೇ ಈ ಅಪಘಾತಕ್ಕೆ ಕಾರಣ ಎಂದು ಸಿಸಿಟಿವಿ ದೃಶ್ಯಗಳು ಸಾಕ್ಷಿಗಳು ಆಗಿವೆ. ಎರಡು ಕಾರಿನಲ್ಲಿದ್ದವರಿಗೆ ಗಾಯಗಳು ಆಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ