Advertisment

ಕನ್ನಡಿಗ KL ರಾಹುಲ್, ಪ್ರಸಿದ್ಧ್ ಕೃಷ್ಣಗೆ ಒಂದು ಗುಡ್​ನ್ಯೂಸ್​.. ಇನ್ನೊಂದು ಬ್ಯಾಡ್ ನ್ಯೂಸ್​; ಏನದು?

ತಂಡದಲ್ಲಿ ಘಟಾನುಘಟಿಗಳಿಗೆ ಅವಕಾಶ ನೀಡಲಾಗಿದ್ದು ಕಾಂಗರುಗಳನ್ನ ಸದೆಬಡಿಯಲು ಬಲಿಷ್ಠರು ಅಖಾಡದಲ್ಲಿ ಬಲೆ ಬೀಸಲಿದ್ದಾರೆ. ಈ ತಂಡದಲ್ಲಿ ಇಬ್ಬರು ಕನ್ನಡಿಗರಿಗೆ ಅವಕಾಶ ನೀಡಿರುವುದು ಸಂತಸದ ಸಂಗತಿ ಆಗಿದೆ. ಇದರ ಜೊತೆಗೆ ಬೇಸರವೂ ಒಂದು ಇದೆ.

author-image
Bhimappa
KL_RAHUL_PRASIDH_KRISHNA
Advertisment

ಆಸ್ಟ್ರೇಲಿಯಾ ಜೊತೆಗಿನ ಏಕದಿನ ಸರಣಿಗೆ ಟೀಮ್ ಇಂಡಿಯಾದ ಆಟಗಾರರ ಹೆಸರನ್ನು ಬಿಸಿಸಿಐನ ಆಯ್ಕೆ ಸಮಿತಿಯು ಘೋಷಣೆ ಮಾಡಿದೆ. ತಂಡದಲ್ಲಿ ಘಟಾನುಘಟಿಗಳಿಗೆ ಅವಕಾಶ ನೀಡಲಾಗಿದ್ದು ಕಾಂಗರುಗಳನ್ನ ಸದೆಬಡಿಯಲು ಬಲಿಷ್ಠರು ಅಖಾಡದಲ್ಲಿ ಬಲೆ ಬೀಸಲಿದ್ದಾರೆ. ಈ ತಂಡದಲ್ಲಿ ಇಬ್ಬರು ಕನ್ನಡಿಗರಿಗೆ ಅವಕಾಶ ನೀಡಿರುವುದು ಸಂತಸದ ಸಂಗತಿ ಆಗಿದೆ. ಇದರ ಜೊತೆಗೆ ಬೇಸರವೂ ಒಂದು ಇದೆ.

Advertisment

ವೆಸ್ಟ್​ ಇಂಡೀಸ್​ ವಿರುದ್ಧದ ಮೊದಲ ಟೆಸ್ಟ್​ ಮ್ಯಾಚ್​ನಲ್ಲಿ ಅಮೋಘವಾದ ಬ್ಯಾಟಿಂಗ್ ಮಾಡಿದ್ದ ಕೆ.ಎಲ್ ರಾಹುಲ್ ಸೆಂಚುರಿ ಸಿಡಿಸಿದ್ದರು. ಇದರ ಬೆನ್ನಲ್ಲೇ ಟೀಮ್ ಇಂಡಿಯಾ ಟೆಸ್ಟ್​ನಲ್ಲಿ ಗೆಲುವು ದಾಖಲಿಸಿದೆ. ಇದಕ್ಕೆ ಬಹುಮಾನ ಎನ್ನುವಂತೆ ಕೆ.ಎಲ್ ರಾಹುಲ್​ ಅವರನ್ನು ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿದೆ. ಆದರೆ ಟಿ20 ಸರಣಿಗೆ ಆಯ್ಕೆ ಮಾಡದಿರುವುದು ಬೇಸರ ತರಿಸಿದೆ ಎನ್ನಬಹುದು. 

ಇನ್ನ ಪ್ರಸಿದ್ಧ್ ಕೃಷ್ಣ ಅವರಿಗೂ ಗುಡ್​ನ್ಯೂಸ್​ ನೀಡಲಾಗಿದ್ದು ಆಸ್ಟ್ರೇಲಿಯಾ ಜೊತೆಗಿನ ಏಕದಿನ ಪಂದ್ಯಕ್ಕೆ ಹೆಸರನ್ನು ಘೋಷಣೆ ಮಾಡಲಾಗಿದೆ. ಇದರಿಂದ ಕಾಂಗರೂ ನಾಡಲ್ಲಿ ಕನ್ನಡಿಗನ ಬೌಲಿಂಗ್ ಖದರ್​ ನಡೆಯಲಿದೆ. ಕೊನೆಯದಾಗಿ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಪ್ರಸಿದ್ಧ್ ಕೃಷ್ಣ ಆಡಿದ್ದರು. ಇದಾದ ಮೇಲೆ ಇದೀಗ ಆಸಿಸ್​ ವಿರುದ್ಧದ ಒನ್​ಡೇ ಮ್ಯಾಚ್​ಗೆ ಆಯ್ಕೆ ಆಗಿದ್ದಾರೆ. ಆದರೆ ಇವರಿಗು ಕೂಡ ಟಿ20 ಸರಣಿಯಲ್ಲಿ ಚಾನ್ಸ್​ ಕೊಡದೇ ಇರುವುದು ಕನ್ನಡಿಗರಿಗೆ ಯೋಚನೆ ತರಿಸಿದೆ.

ಇದನ್ನೂ ಓದಿ: ದಿನಕ್ಕೆ ಒಂದೇ ಹೊತ್ತು ಊಟ.. ಡಿವೋರ್ಸ್ ಕೊಟ್ಟು ಲವ್! ಇದು ಕಾಂತಾರ ವಿಲನ್ ಲೈಫ್​ಸ್ಟೈಲ್

Advertisment

KL ರಾಹುಲ್ ಬಗ್ಗೆ ಖುಷಿ ಪಡುವ ವಿಚಾರ ಹಂಚಿಕೊಂಡ ಕೋಚ್ ಗಂಭೀರ್..!

ಭಾರತದ ಟಿ20 ತಂಡದಲ್ಲಿ ಆಡಬೇಕು ಎನ್ನುವುದು ಕೆ.ಎಲ್ ರಾಹುಲ್ ಹಾಗೂ ಪ್ರಸಿದ್ಧ್ ಕೃಷ್ಣ ಅವರ ಬಯಕೆ ಆಗಿದೆ. ಈ ಬಗ್ಗೆ ಈಗಾಗಲೇ ಕೆ.ಎಲ್ ರಾಹುಲ್ ಅವರು ಹೇಳಿಕೊಂಡಿದ್ದಾರೆ. ಆದರೆ ಇದನ್ನು ಬಿಸಿಸಿಐ ಆಯ್ಕೆ ಸಮಿತಿ ಪರಿಗಣನೆಗೆ ತೆಗೆದುಕೊಂಡಂತಿಲ್ಲ. ಕೆ.ಎಲ್ ರಾಹುಲ್​ ಫಿಟ್​ ಆ್ಯಂಡ್​ ಫೈನ್ ಆಗಿದ್ದು ಟಿ20 ತಂಡದಲ್ಲೂ ಅದ್ಭುತ ಬ್ಯಾಟಿಂಗ್ ಮಾಡುವ ಚಾಣಕ್ಷ. ಈ ಬಗ್ಗೆ ಐಪಿಎಲ್​ನಲ್ಲಿ ಸಾಬೀತು ಪಡಿಸಿದ್ದಾರೆ. ಆದರೆ ಭಾರತ ತಂಡಕ್ಕೆ ಆಯ್ಕೆ ಮಾಡದೇ ಇರುವುದಕ್ಕೆ ಕಾರಣ ಏನು ಎಂಬುದು ತಿಳಿದಿಲ್ಲ  ಎನ್ನಲಾಗಿದೆ. ಭಾರತ ತಂಡದ ಟಿ20 ತಂಡದಲ್ಲಿ ಓರ್ವ ಕನ್ನಡಿಗ ವರುಣ್ ಚಕ್ರವರ್ತಿಗೆ ಸ್ಥಾನ ನೀಡಲಾಗಿದೆ. 

ಆಸ್ಟ್ರೇಲಿಯಾ ಜೊತೆಗೆ ಟೀಮ್ ಇಂಡಿಯಾ ಶುಭ್​ಮನ್​ ಗಿಲ್ ನೇತೃತ್ವದಲ್ಲಿ ಅಖಾಡಕ್ಕೆ ಧುಮಕಲಿದ್ದು ಹಿಟ್​ಮ್ಯಾನ್ ರೋಹಿತ್ ಶರ್ಮಾ, ಕಿಂಗ್ ಕೊಹ್ಲಿ ತಂಡದಲ್ಲಿದ್ದಾರೆ. ಅಕ್ಟೋಬರ್​ 19 ರಂದು ಪರ್ತ್​ನಲ್ಲಿ ಮೊದಲ ಪಂದ್ಯ ನಡೆಯಲಿದೆ. 23 ರಂದು ಅಡಿಲೇಡ್​ನಲ್ಲಿ 2ನೇ ಪಂದ್ಯ ಹಾಗೂ 25 ರಂದು ಸಿಡ್ನಿಯಲ್ಲಿ 3ನೇ ಏಕದಿನ ಪಂದ್ಯ ನಡೆಯಲಿದೆ. ಇದಾದ ಮೇಲೆ 5 ಪಂದ್ಯಗಳ ಟಿ20 ಸರಣಿ ಅಕ್ಟೋಬರ್​ 29 ರಿಂದ ನವೆಂಬರ್​ 8 ರವರೆಗೆ ನಡೆಯಲಿವೆ. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Advertisment
IND vs AUS Prasidh Krishna KL Rahul T20 KL Rahul
Advertisment
Advertisment
Advertisment