/newsfirstlive-kannada/media/media_files/2025/08/19/heart-attack-cases-2025-08-19-14-11-23.jpg)
ಸಣ್ಣ ಹೃದಯಾಘಾತದ ನಂತರ ಸಕಾಲಿಕ ಚಿಕಿತ್ಸೆ, ಸಮತೋಲಿತ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು. ಹಾಗೆ ಮಾಡಿದರೆ ಮಾತ್ರ ಹೃದಯ ಸಂಬಂಧಿ ಕಾಯಿಲೆಯಿಂದ ದೂರ ಇರಬಹುದು ಎಂದು ತಜ್ಞರು ಹೇಳುತ್ತಾರೆ.
ಹೃದಯಾಘಾತಕ್ಕೆ ಕೆಲವು ದಿನಗಳು ಅಥವಾ ತಿಂಗಳುಗಳ ಮೊದಲು ಸಣ್ಣ ಹೃದಯಾಘಾತ ಸಂಭವಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ. ಎಲ್ಲರಿಗೂ ಅದರ ಬಗ್ಗೆ ಅಷ್ಟೊಂದು ತಿಳುವಳಿಕೆ ಇರೋದಿಲ್ಲ. ಕೆಲವು ಲಕ್ಷಣಗಳನ್ನು ಮೊದಲೇ ಗುರುತಿಸಿದರೆ ದೊಡ್ಡ ಅನಾಹುತದಿಂದ ಪಾರಾಗಬಹುದು ಎಂಬುವುದು ತಜ್ಞ ವೈದ್ಯರ ಸಲಹೆ. ಈ ಸಣ್ಣ ಹೃದಯಾಘಾತವನ್ನು NSTEMI (Non-ST-Segment Elevation Myocardial Infarction) ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ:ಕಿಚನ್ ರೂಮ್ ಪಳಪಳ ಹೊಳೆಯುವಂತೆ ಮಾಡಬೇಕಾ.. ಅದಕ್ಕೆ ಇಲ್ಲಿವೆ ಕೆಲ ಟಿಪ್ಸ್​!
ಇದು ಹೃದಯ ಸ್ನಾಯುಗಳಿಗೆ ರಕ್ತ ಪೂರೈಕೆ ಕಡಿಮೆಯಾದಾಗ ಸಂಭವಿಸುವ ಗಂಭೀರ ಹೃದಯಾಘಾತವಾಗಿದೆ. ತೀವ್ರತೆ ಸ್ವಲ್ಪ ಕಡಿಮೆಯಾಗಬಹುದಾದರೂ, ಎದೆ ನೋವು, ಉಸಿರಾಟದ ತೊಂದರೆ, ವಾಕರಿಕೆ, ಬೆವರುವುದು ಮತ್ತು ಆಯಾಸದಂಥ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದು ಮೈನರ್ ಹೃದಯಾಘಾತವಾಗಿದ್ದರೂ ಗಂಭೀರವಾಗುವ ಮೊದಲೇ ವೈದ್ಯರ ಸಹಾಯ ಪಡೆಯೋದು ಉತ್ತಮ
ಲಕ್ಷಣಗಳು
- ಎದೆಯಲ್ಲಿ ತಳಮಳ ಅಥವಾ ಒತ್ತಡದಂತಹ ನೋವು
- ಉಸಿರಾಟದ ತೊಂದರೆ
- ಆಯಾಸ - ದೌರ್ಬಲ್ಯ.
- ಎಡಗೈ-ದವಡೆ ನೋವು
- ತೋಳುಗಳು, ಭುಜಗಳು, ಕುತ್ತಿಗೆ ಅಥವಾ ಬೆನ್ನಿನಲ್ಲಿ ಸೌಮ್ಯ ನೋವು
- ಬೆವರುವುದು ಅಥವಾ ಚಡಪಡಿಕೆ
ಈ ಸಲಹೆಗಳನ್ನು ಅನುಸರಿಸಿ..
- ಎಣ್ಣೆ ಮತ್ತು ಸಂಸ್ಕರಿಸಿದ ಆಹಾರಗಳನ್ನು ಕಡಿಮೆ ಮಾಡಿ. ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ
- ದೈನಂದಿನ ಲಘು ವ್ಯಾಯಾಮ ಅಥವಾ ನಡಿಗೆ ಹೃದಯದ ಆರೋಗ್ಯಕ್ಕೆ ಒಳ್ಳೆಯದು
- ಹೃದಯ ಕಾಯಿಲೆಗೆ ನಿರಂತರ ಒತ್ತಡ ಪ್ರಮುಖ ಕಾರಣ
- ಯೋಗ ಮತ್ತು ಧ್ಯಾನವನ್ನು ಅಭ್ಯಾಸ ಮಾಡಿಕೊಳ್ಳಿ
- ಧೂಮಪಾನ ಮತ್ತು ಮದ್ಯಪಾನವನ್ನು ತಪ್ಪಿಸಿ
ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಮುಖ್ಯ.
ಇದನ್ನೂ ಓದಿ:ಅಪ್ಪಿತಪ್ಪಿಯೂ ಈ ವಸ್ತುಗಳನ್ನು ದಾನ ಮಾಡಬೇಡಿ..! ಅದು ನಿಮ್ಮ ಜೀವನ ಹಾಳು ಮಾಡುತ್ತದೆ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ