ದಿಢೀರನೇ ಉಗುರಿನ ಮಧ್ಯೆ ಬಿರುಕು ಬಿಡುವುದೇಕೆ? ಇಲ್ಲಿದೆ ಅಸಲಿ ಕಾರಣ..!

ಇತ್ತೀಚಿನ ದಿನಗಳಲ್ಲಿ ಕೆಲವರು ಉಗುರನ್ನು ಉದ್ದವಾಗಿ ಬಿಡೋದಕ್ಕೆ ಶುರು ಮಾಡಿದ್ದಾರೆ. ಅದರಲ್ಲೂ ಕೆಲವರು ಉಗುರಿನ ಬಗ್ಗೆ ವಿಶೇಷವಾದ ಕಾಳಜಿಯನ್ನು ವಹಿಸುತ್ತಾ ಇರುತ್ತಾರೆ. ವಿಶೇಷವಾಗಿ ಹೆಣ್ಣು ಮಕ್ಕಳು ಉಗುರುಗಳು ನೋಡಲು ಚೆನ್ನಾಗಿ ಕಾಣುತ್ತೆ ಅಂತ ಉದ್ದವಾಗಿ ಬೆಳೆಸುತ್ತಾರೆ.

author-image
Veenashree Gangani
nail cracked(2)
Advertisment

ಇತ್ತೀಚಿನ ದಿನಗಳಲ್ಲಿ ಕೆಲವರು ತಮ್ಮ ಉಗುರುಗಳನ್ನು ಉದ್ದವಾಗಿ ಬಿಡೋದಕ್ಕೆ ಶುರು ಮಾಡಿದ್ದಾರೆ. ಅದರಲ್ಲೂ ಕೆಲವರು ಉಗುರಿನ ಬಗ್ಗೆ ವಿಶೇಷವಾದ ಕಾಳಜಿಯನ್ನು ವಹಿಸುತ್ತಾ ಇರುತ್ತಾರೆ. ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳು ತಮ್ಮ ಉಗುರುಗಳು ನೋಡಲು ಚೆನ್ನಾಗಿ ಕಾಣುತ್ತವೆಯೇ ಅಂತ ಉದ್ದವಾಗಿ ಉಗುರು ಬೆಳೆಸುತ್ತಾರೆ.

nail cracked(1)

ಮೊದ ಮೊದಲು ಚೆನ್ನಾಗಿ ಬೆಳೆಯುತ್ತಿದ್ದ ಉಗುರುಗಳು ದಿಢೀರನೇ ದುರ್ಬಲ, ಬಿರುಕು, ಕತ್ತರಿಸಿದ, ಒಡೆದ ಅಥವಾ ಸುಲಿದಂತೆ ಕಾಣುತ್ತವೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಚೆನ್ನಾಗಿ ಬೆಳೆಸುತ್ತಿದ್ದ ಉಗುರು ದಿಢೀರ್​ನೇ ಮಧ್ಯೆಕ್ಕೆ ಕಟ್​ ಆಗಿ ಬಿಡುತ್ತೆ. ಅದು ಎಷ್ಟೇ ಕಾಳಜಿಯಿಂದ ಬೆಳೆಸಿದ್ರೂ ಸಾಕಷ್ಟು ಬಾರಿ ಅರ್ಧಕ್ಕೆ ಕಟ್​ ಆಗಿ ಬಿಡುತ್ತವೆ. ಹೀಗೆ ನಿಮಗೂ ಆಗುತ್ತಿದೆ ಎಂದರೇ ನಿರ್ಲಕ್ಷಿಸಬೇಡಿ. ಹೀಗೆ ನಿಮ್ಮ ಉಗುರುಗಳು ಅರ್ಧಕ್ಕೆ ಕಟ್​ ಆದರೆ ಒನಿಕೊಸ್ಚಿಜಿಯಾ ಎಂದು ಕರೆಯಲಾಗುತ್ತದೆ. ಇದು ಏಕೆ ಕಾಣಿಸಿಕೊಳ್ಳುತ್ತದೆ ಅಂತ ಸಾಕಷ್ಟು ಮಂದಿ ತಲೆಕೆಡಿಸಿಕೊಂಡಿದ್ದು ಉಂಟು.

ಇದನ್ನೂ ಓದಿ: ‘ನಾವಿಬ್ಬರು ಮ್ಯೂಚುಯಲ್ ಬ್ರೇಕಪ್ ಆಗಿದ್ದೇವೆ..’ ಭರ್ಜರಿ ಬ್ಯಾಚ್ಯುಲರ್ಸ್ ವಿನ್ನರ್​ ಸುನಿಲ್, ಅಮೃತಾ ಹೇಳಿದ್ದೇನು

nail cracked

ಕೂದಲು ಮತ್ತು ತ್ವಚೆಯ ಜೊತೆಗೆ ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಉಗುರುಗಳ ಆರೋಗ್ಯದ ಬಗ್ಗೆಯೂ ಸಂಪೂರ್ಣ ಕಾಳಜಿ ವಹಿಸುತ್ತಿದ್ದಾರೆ. ಆದರೆ ಅನೇಕರು ಉಗುರುಗಳನ್ನು ಆರೈಕೆ ಮಾಡಿದ ನಂತರವೂ ದುರ್ಬಲವಾಗುತ್ತವೆ. ಇದರಿಂದಾಗಿ ಅವರ ಉಗುರುಗಳು ಆಗಾಗ್ಗೆ ಒಡೆಯುತ್ತಲೇ ಇರುತ್ತವೆ. ಇದಕ್ಕೆ ಪ್ರಮುಖ ಕಾರಣವೆಂದರೆ ದೇಹದಲ್ಲಿನ ವಿಟಮಿನ್ ಕೊರತೆ. 

ಉಗುರು ಕತ್ತರಿಸಿ ನೆಲದ ಮೇಲೆ ಬಿಸಾಡಬಾರದು ಯಾಕೆ ಗೊತ್ತಾ? ವೈಜ್ಞಾನಿಕ ಕಾರಣಗಳು ಇಲ್ಲಿದೆ!

1. ದೇಹದಲ್ಲಿ ವಿಟಮಿನ್ B7 (ಬಯೋಟಿನ್) ಕೊರತೆಯಿಂದಾಗಿ, ಉಗುರುಗಳು ಬಿರುಕು ಬಿಡೋದಕ್ಕೆ ಶುರುವಾಗುತ್ತದೆ. ಇದರೊಂದಿಗೆ ವಿಟಮಿನ್ ಬಿ 12 ಮತ್ತು ಕ್ಯಾಲ್ಸಿಯಂ ಕೊರತೆಯೂ ಕಾರಣವಾಗುತ್ತದೆ. 

2. ವಿಟಮಿನ್ ಬಿ 12 ಕೊರತೆಯಿಂದಾಗಿ ನಿಮ್ಮ ಉಗುರುಗಳು ತೆಳುವಾಗುತ್ತವೆ ಮತ್ತು ದುರ್ಬಲವಾಗುತ್ತವೆ. ಅದರ ಕೊರತೆಯಿಂದಾಗಿ, ಉಗುರುಗಳು ಸರಿಯಾಗಿ ರೂಪುಗೊಳ್ಳುವುದಿಲ್ಲ ಮತ್ತು ಅವು ದುರ್ಬಲವಾಗುತ್ತದೆ.

3. ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಿಂದಾಗಿ ಉಗುರುಗಳು ತೆಳುವಾಗುತ್ತವೆ. ದುರ್ಬಲವಾಗಿರುತ್ತವೆ ಮತ್ತು ತುಂಬಾ ಗಟ್ಟಿಯಾಗುತ್ತವೆ. ದೇಹದಲ್ಲಿ ಕಬ್ಬಿಣದ ಕೊರತೆಯಿಂದಾಗಿ, ಉಗುರುಗಳು ಒಡೆಯಲು ಪ್ರಾರಂಭಿಸುತ್ತವೆ ಮತ್ತು ಅವುಗಳ ಬಣ್ಣವೂ ಬದಲಾಗಲು ಪ್ರಾರಂಭಿಸುತ್ತದೆ.

4. ಉಗುರುಗಳನ್ನು ಬಲಪಡಿಸಲು ಮತ್ತು ಈ ಎಲ್ಲಾ ಜೀವಸತ್ವಗಳ ಕೊರತೆಯನ್ನು ಪೂರೈಸಲು, ಕೋಳಿ, ಮೀನು, ಮೊಟ್ಟೆ, ಹಾಲು, ಚೀಸ್, ಧಾನ್ಯಗಳು, ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ನಿಮ್ಮ ಆಹಾರದ ಪಟ್ಟಿಯಲ್ಲಿ ಸೇರಿಸಿಕೊಂಡರೇ ಆರೋಗ್ಯದ ಜೊತೆಗೆ ಉಗುರಿನ ಬೆಳವಣಿಗೆಗೂ ಸಹಾಯಕಾರಿಯಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Health Tips
Advertisment