/newsfirstlive-kannada/media/media_files/2025/12/21/night-shift-2025-12-21-16-07-56.jpg)
ಕೆಲವು ಕಂಪನಿಗಳಲ್ಲಿ ರಾತ್ರಿ ಪಾಳಿಯಲ್ಲೂ ಕೆಲಸ ಮಾಡಬೇಕಾಗುತ್ತದೆ. ಕಾರ್ಮಿಕರು ಶಿಫ್ಟ್​ ಪ್ರಕಾರ ಕೆಲಸ ಮಾಡಬೇಕು. ಆದರೆ ರಾತ್ರಿ ಪಾಳಿ ಅಂದುಕೊಂಡಷ್ಟು ಸುಲಭವಿಲ್ಲ. ದೂರದಿಂದ ನೋಡುಗರಿಗೆ ಅದು ಆರಾಮದಾಯಕ ಕೆಲಸ ಅನಿಸಬಹುದು. ಅದು ಕೆಲಸ ಮಾಡುವ ಕಾರ್ಮಿಕರ ಆರೋಗ್ಯಕ್ಕೆ ಡೇಂಜರ್!
ಏನೆಲ್ಲ ಸಮಸ್ಯೆ ಆಗಲಿದೆ..?
ಮೊದಲನೆಯದಾಗಿ ಹಗಲಿನಲ್ಲಿ ನಿದ್ರಿಸುವ ಮೂಲಕ ರಾತ್ರಿಯ ನಿದ್ರೆಯ ಕೊರತೆ ಸರಿದೂಗಿಸಲು ಸಾಧ್ಯವಿಲ್ಲ. ಕಾರಣ ಸರಿಯಾಗಿ ನಿದ್ರೆ ಮಾಡಲು ಅಸಾಧ್ಯ. ಎರಡನೆಯದು ವಿವಿಧ ರೋಗಗಳ ಅಪಾಯ ಹೆಚ್ಚಿಸುತ್ತದೆ. ರಾತ್ರಿಯಲ್ಲಿ ಕೆಲಸ ಮಾಡುವ ಜನರಲ್ಲಿ ಕಿಡ್ನಿಸ್ಟೋನ್ ಸಾಧ್ಯತೆ ಹೆಚ್ಚಿರುತ್ತದೆ.
ಹೊಸ ಅಧ್ಯಾಯ ಬಿಚ್ಚಿಟ್ಟಿದೆ ಆಘಾತಕಾರಿ ವಿಷಯ
ಮೇಯೊ ಕ್ಲಿನಿಕ್ ಪ್ರೊಸೀಡಿಂಗ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ಪ್ರಕಾರ, ನೈಟ್ ಶಿಫ್ಟ್ ಕಿಡ್ನಿಸ್ಟೋನ್​​ಗೆ ಕಾರಣವಾಗುತ್ತದೆ. ಮೂತ್ರಪಿಂಡದಲ್ಲಿ ಕಲ್ಲುಗಳು ಬೆಳೆಯಲು ಕಾರಣವಾಗುತ್ತದೆ. ರಾತ್ರಿ ವೇಳೆ ದೈಹಿಕ ಚಟುವಟಿಕೆ ಕಡಿಮೆ ಇರುತ್ತದೆ. ಅದರಿಂದ ಅಪಾಯ ಸಾಧ್ಯತೆ ಇದೆ ಎಂದು ಅಧ್ಯಯನ ಹೇಳಿದೆ.
ಇದನ್ನೂ ಓದಿ:ವಿಶ್ವಕಪ್​​ಗೆ ತಂಡ ಪ್ರಕಟ.. ಯಾರಿಗೆ ಏನು ಜವಾಬ್ದಾರಿ..?
ಸಂಶೋಧನೆ ಪ್ರಕಾರ.. ದೇಹದ ತೂಕ, ನೀರಿನ ಸೇವನೆ ಮತ್ತು ಇತರ ಜೀವನಶೈಲಿ ಅಂಶಗಳು ಕಿಡ್ನಿಸ್ಟೋನ್​ಗೆ ಪ್ರಮುಖ ಕಾರಣ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ನೌಕರರು ತಮ್ಮ ಜೀವನಶೈಲಿಯನ್ನು ಸರಿಯಾಗಿ ನಿಭಾಯಿಸಲು ಹೆಣಗಾಡುತ್ತಾರೆ. ಇದು ಅವರ ದೇಹದ ಸಿರ್ಕಾಡಿಯನ್ ಲಯವನ್ನು ಅಡ್ಡಿಪಡಿಸುತ್ತದೆ. ಇದು ನಿದ್ರೆ, ಹಾರ್ಮೋನುಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧನೆ ಹೇಳಿದೆ.
ತಜ್ಞರು ಏನು ಹೇಳುತ್ತಾರೆ?
ಚೀನಾದ ಸನ್ ಯಾಟ್-ಸೆನ್ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಪ್ರಮುಖ ಸಂಶೋಧಕ ಯಿನ್ ಯಾಂಗ್ ನೀಡಿರುವ ಮಾಹಿತಿ ಪ್ರಕಾರ.. ‘ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಜನರಲ್ಲಿ ಮೂತ್ರಪಿಂಡದ ಕಲ್ಲುಗಳು ಬರುವ ಅಪಾಯ ಶೇಕಡಾ 15 ರಷ್ಟು ಹೆಚ್ಚಾಗಿದೆ. ಈ ಅಪಾಯವು ಧೂಮಪಾನ, ನಿದ್ರೆಯ ಕೊರತೆ, ಸಾಕಷ್ಟು ನೀರು ಸೇವನೆ ಇಲ್ಲದಿರೋದು ಮತ್ತು ಅಧಿಕ ತೂಕದಿಂದ ಸಂಭವಿಸುತ್ತದೆ ಎಂದಿದ್ದಾರೆ.
ಯಿನ್ ಯಾಂಗ್ ನೇತೃತ್ವದ ತಂಡವು ಸಂಶೋಧನೆ ಸಂದರ್ಭದಲ್ಲಿ ಸುಮಾರು 220,000 ಜನರಿಂದ ಡೇಟಾವನ್ನು ಸಂಗ್ರಹಿಸಿ 14 ವರ್ಷಗಳ ಕಾಲ ಅವರ ಆರೋಗ್ಯವನ್ನ ಫಾಲೋ ಮಾಡಲಾಗಿತ್ತು. ವಿಭಿನ್ನ ಕೆಲಸದ ಪಾಳಿಗಳಲ್ಲಿ ಕೆಲಸ ಮಾಡುವ ಜನರ ಬಗ್ಗೆ ಮಾಹಿತಿ ಸಂಗ್ರಹಿಸಿತ್ತು. ಯುನೈಟೆಡ್ ಸ್ಟೇಟ್ಸ್‌ನ ಮೇಯೊ ಕ್ಲಿನಿಕ್‌ನಲ್ಲಿ ನೆಫ್ರಾಲಜಿ ಮತ್ತು ಅಧಿಕ ರಕ್ತದೊತ್ತಡ ವಿಭಾಗದ ಫೆಲಿಕ್ಸ್ ನಾಫ್ ಪ್ರಕಟಿಸಿದ ಸಂಪಾದಕೀಯದಲ್ಲಿ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಜನರ ಮೇಲೆ ಸಿರ್ಕಾಡಿಯನ್ ಬ್ಯಾಲೆನ್ಸ್ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಒತ್ತಿ ಹೇಳಲಾಗಿದೆ.
ಇದನ್ನೂ ಓದಿ: ‘ಟಾಕ್ಸಿಕ್’ ಚಿತ್ರದಿಂದ ನಟಿ ಕಿಯಾರಾ ಅಡ್ವಾಣಿ ಫಸ್ಟ್ ಲುಕ್ ರಿಲೀಸ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us