ವಿಶ್ವಕಪ್​​ಗೆ ತಂಡ ಪ್ರಕಟ.. ಯಾರಿಗೆ ಏನು ಜವಾಬ್ದಾರಿ..?

ಟಿ-20 ವಿಶ್ವಕಪ್ ಮತ್ತು ನ್ಯೂಜಿಲೆಂಟ್ ಸರಣಿಗೆ ಟೀಮ್ ಇಂಡಿಯಾ ರೆಡಿಯಾಗಿದೆ. ಆಯ್ಕೆ ಸಮಿತಿ ಮುಖ್ಯಸ್ಥ ಅಜೀತ್ ಅಗರ್ಕರ್, ನಾಯಕ ಸೂರ್ಯಕುಮಾರ್ ಯಾದವ್​ಗೆ ಸಾಥ್ ನೀಡಿದ್ದ ಬಿಸಿಸಿಐ ಕಾರ್ಯದರ್ಶಿ ದೇವಜೀತ್ ಸೈಕ್ಯ 15 ಸದಸ್ಯರ ಬಲಿಷ್ಟ ತಂಡ ಪ್ರಕಟಿಸಿದರು. ಶುಭ್ಮನ್​ ಗಿಲ್​ಗೆ ಶಾಕ್ ನೀಡಿ 2 ಬದಲಾವಣೆಯಾಗಿದೆ.

author-image
Ganesh Kerekuli
Updated On
Rinku singh abhishek sharma, Ishan Kishan
Advertisment
  • T20 ವಿಶ್ವಕಪ್​ಗೆ ಬಲಿಷ್ಟ 15 ಸದಸ್ಯರ ತಂಡ ಪ್ರಕಟ
  • ಸೂರ್ಯಕುಮಾರ್ ನಾಯಕ, ಅಕ್ಷರ್ ಪಟೇಲ್ ಉಪನಾಯಕ
  • ಶುಭ್ಮನ್​​ ಗಿಲ್​​ಗೆ ಕೊಕ್ ಕೊಟ್ಟು ಶಾಕ್ ನೀಡಿದ ಸೆಲೆಕ್ಟರ್ಸ್

ಟಿ-20 ವಿಶ್ವಕಪ್ ಮತ್ತು ನ್ಯೂಜಿಲೆಂಟ್ ಟಿ-20 ಸರಣಿಗೆ ಟೀಮ್ ಇಂಡಿಯಾ ರೆಡಿಯಾಗಿದೆ. ಆಯ್ಕೆ ಸಮಿತಿ ಮುಖ್ಯಸ್ಥ ಅಜೀತ್ ಅಗರ್ಕರ್, ನಾಯಕ ಸೂರ್ಯಕುಮಾರ್ ಯಾದವ್​ಗೆ ಸಾಥ್ ನೀಡಿದ್ದ ಬಿಸಿಸಿಐ ಕಾರ್ಯದರ್ಶಿ ದೇವಜೀತ್ ಸೈಕ್ಯ 15 ಸದಸ್ಯರ ಬಲಿಷ್ಟ ತಂಡ ಪ್ರಕಟಿಸಿದರು. ಶುಭ್ಮನ್​ ಗಿಲ್​ಗೆ ಶಾಕ್ ನೀಡಿದ ಆಯ್ಕೆ ಸಮಿತಿ ತಂಡದಲ್ಲಿ 2 ಬದಲಾವಣೆ ಮಾಡಿದೆ.

ಒಂದೂವರೆ ತಿಂಗಳಿಗೂ ಮುನ್ನವೇ ಟಿ-20 ವಿಶ್ವಕಪ್​​ಗೆ ಟೀಮ್ ಇಂಡಿಯಾ ರೆಡಿಯಾಗಿದೆ. ಕೇವಲ ಮೂವತ್ತೇ ನಿಮಿಷದಲ್ಲಿ ತಂಡವನ್ನ ಫೈನಲೈಸ್ ಮಾಡಿರುವ ಬಿಸಿಸಿಐ ಮತ್ತು ಆಯ್ಕೆ ಸಮಿತಿ, ಬ್ಯಾಲೆನ್ಸ್ ಟೀಮ್ ಆಯ್ಕೆ ಮಾಡಿದೆ. ವಿಶ್ವಕಪ್​ಗೂ ಮುನ್ನ ನ್ಯೂಜಿಲೆಂಡ್ ಟಿ-20 ಸರಣಿ, ಸೂರ್ಯಕುಮಾರ್ ಯಾದವ್ ಪಡೆಗೆ ಎಕ್ಸ್​ಪೀರಿಮೆಂಟ್ ಸೀರೀಸ್ ಆಗಲಿದೆ. ಆ ಸರಣಿಯಲ್ಲೇ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್, ಡಿಸೈಡ್ ಮಾಡಲಾಗುವುದು.

ನಾಯಕ, ಉಪನಾಯಕ ಯಾರು?

ನಿರೀಕ್ಷೆಯಂತೆ ಸೂರ್ಯಕುಮಾರ್ ಯಾದವ್​​ಗೆ ತಂಡದ ಸಾರಥ್ಯ ನೀಡಲಾಗಿದೆ. ಕಳೆದೊಂದು ವರ್ಷದಿಂದ ಬ್ಯಾಟಿಂಗ್​ನಲ್ಲಿ ಸತತ ವೈಫಲ್ಯ ಅನುಭವಿಸಿದ್ರೂ ಸೂರ್ಯಕುಮಾರ್ ಮೇಲೆ ಬಿಸಿಸಿಐ ಮತ್ತು ಆಯ್ಕೆ ಸಮಿತಿ ವಿಶ್ವಾಸವನ್ನಟ್ಟಿದೆ. ಎಡಗೈ ಸ್ಪಿನ್ ಆಲ್​ರೌಂಡರ್ ಅಕ್ಷರ್ ಪಟೇಲ್​​ಗೆ ಮತ್ತೆ ಪ್ರಮೋಷನ್ ನೀಡಲಾಗಿದೆ. ಅವಕಾಶವಂಚಿತ ಶುಭ್ಮನ್ ಗಿಲ್ ಬದಲು ​ಅಕ್ಷರ್​​ಗೆ ಉಪನಾಯಕ ಪಟ್ಟ ಕಟ್ಟಲಾಗಿದೆ.

ಇದನ್ನೂ ಓದಿ:ಅಚ್ಚರಿಯ ಬೆಳವಣಿಗೆ.. KN ರಾಜಣ್ಣ, ಡಿಕೆ ಶಿವಕುಮಾರ್ ಭೇಟಿ, ಮಾತುಕತೆ..!

Ishan kishan (1)

ಸ್ಪೆಷಲಿಸ್ಟ್ ಬ್ಯಾಟರ್ಸ್ ಯಾರು..?

ಫಿಯರ್​ಲೆಸ್ ಅಂಡ್ ಡ್ಯಾಶಿಂಗ್ ಬ್ಯಾಟ್ಸ್​​ಮನ್ ಅಭಿಷೇಕ್ ಶರ್ಮಾ ಓಪನರ್ ಆಗಿ ಕಣಕ್ಕಿಳಿಯಲಿದ್ದಾರೆ. ಸೌತ್ ಆಫ್ರಿಕಾ ಟಿ-20 ಸರಣಿಯಲ್ಲಿ ಅಭಿಷೇಕ್, ಬ್ಯಾಟಿಂಗ್​ನಲ್ಲಿ ಡಲ್ ಆಗಿದ್ದಾರೆ. ವಿಶ್ವಕಪ್​ಗೂ ಮುನ್ನ ನಡೆಯೋ ನ್ಯೂಜಿಲೆಂಡ್ ಸರಣಿಯಲ್ಲಿ ಅಭಿ ಮಿಂಚುವ ವಿಶ್ವಾಸದಲ್ಲಿದ್ದಾರೆ. ಟಾಪ್ ಆರ್ಡರ್ ಮತ್ತು ಮಿಡಲ್​ ಆಡರ್ಡ್​​ನಲ್ಲಿ ಇನ್​ಫಾರ್ಮ್​​​ ತಿಲಕ್ ವರ್ಮಾ, ಬ್ಯಾಟಿಂಗ್ ಜವಾಬ್ದಾರಿ ನಿಭಾಯಿಸಲಿದ್ದಾರೆ. 

ವಿಕೆಟ್ ಕೀಪರ್ಸ್ ಯಾರು..?

ಸಂಜು ಸ್ಯಾಮ್ಸನ್ ಫಸ್ಟ್ ಚಾಯ್ಸ್ ವಿಕೆಟ್ ಕೀಪರ್ ಬ್ಯಾಟರ್ ಆಗಿ ಅವಕಾಶ ಪಡೆದಿದ್ದಾರೆ. ಸಂಜು ಟ್ಯಾಲೆಂಟ್ ಗಮನದಲ್ಲಿಟ್ಟುಕೊಂಡು ಆಯ್ಕೆ ಸಮಿತಿ, ಕೇರಳ ಬ್ಯಾಟರ್​​ಗೆ ತಂಡದಲ್ಲಿ ಸ್ಥಾನ ಕಲ್ಪಿಸಿದೆ. ಸೈಯ್ಯದ್ ಮುಷ್ತಾಕ್ ಅಲಿ ಟಿ-ಟ್ವೆಂಟಿ ಟೂರ್ನಿಯಲ್ಲಿ ಜಬರ್ಧಸ್ಥ್ ಪ್ರದರ್ಶನ ನೀಡಿದ್ದ ಇಶಾನ್ ಕಿಶನ್, ಜಿತೇಶ್ ಶರ್ಮಾರನ್ನ ಓವರ್ ಟೇಕ್ ಮಾಡಿ, ಸರ್ಪ್ರೈಸ್ ಆಗಿ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ: ನಾವೆಲ್ಲರೂ ಚೆನ್ನಾಗಿರಬೇಕು ಎಂಬ ಉದ್ದೇಶದಿಂದ ಸುಮ್ನಿದ್ದೆ, ಬಾಯಿ ಇಲ್ಲ ಎಂದಲ್ಲ -ಕಿಚ್ಚ ಸುದೀಪ್ ವಾರ್ನಿಂಗ್

Ishan kishan

ರಿಂಕು ಸಿಂಗ್​ಗೆ ಫಿನಿಷರ್ ಜವಾಬ್ದಾರಿ

ಡೆಥ್ ಓವರ್ಸ್​ನಲ್ಲಿ ವೇಗವಾಗಿ ರನ್​ಗಳಿಸೋ ಎಡಗೈ ಬ್ಯಾಟರ್ ರಿಂಕು ಸಿಂಗ್, ತಂಡಕ್ಕೆ ಆಶ್ಚರ್ಯಕರ ರೀತಿಯಲ್ಲಿ ಎಂಟ್ರಿ ಕೊಟ್ಟಿದ್ದಾರೆ. ತಂಡದ ಆಯ್ಕೆಗೂ ಮುನ್ನ ರಿಂಕು ಹೆಸರು ಎಲ್ಲೂ ಪ್ರಸ್ಥಾಪವಾಗಿಲ್ಲ. ಆದ್ರೂ ರಿಂಕು ಆಯ್ಕೆಗಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ವಿಶ್ವಕಪ್​ನಲ್ಲಿ ರಿಂಕು ಫಿನಿಷರ್​​ ರೋಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಫಾಸ್ಟ್ ಬೌಲಿಂಗ್ ಆಲ್​ರೌಂಡರ್ಸ್ ಯಾರು?

ಸೂಪರ್​ಸ್ಟಾರ್ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ, ಇಬ್ಬರೂ ಸೌತ್ ಆಫ್ರಿಕಾ ಟಿ-20 ಸೀರೀಸ್​ನಲ್ಲಿ ಒಟ್ಟಿಗೆ ಕಾಣಿಸಿಕೊಂಡ್ರು. ನ್ಯೂಜಿಲೆಂಡ್ ಮತ್ತು ವಿಶ್ವಕಪ್​ನಲ್ಲೂ ಇಬ್ಬರ ಜುಗಲ್​ಬಂಧಿ ಮುಂದುವರೆಯೋ ಸಾಧ್ಯತೆ ಹೆಚ್ಚಿದೆ. ಇಬ್ಬರೂ ಮ್ಯಾಚ್​​ ವಿನ್ನರ್ಸ್​ ಆಗಿರೋದ್ರಿಂದ, ಬದಲಾವಣೆ ಅಸಾಧ್ಯ.

ಇದನ್ನೂ ಓದಿ:  ನಾವೆಲ್ಲರೂ ಚೆನ್ನಾಗಿರಬೇಕು ಎಂಬ ಉದ್ದೇಶದಿಂದ ಸುಮ್ನಿದ್ದೆ, ಬಾಯಿ ಇಲ್ಲ ಎಂದಲ್ಲ -ಕಿಚ್ಚ ಸುದೀಪ್ ವಾರ್ನಿಂಗ್

Gill (1)

ಸ್ಪಿನ್ನರ್ಸ್ ಯಾಱರು..?

ಅಕ್ಷರ್ ಪಟೇಲ್ ಜೊತೆ ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ, ಚೈನಾಮೆನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಮತ್ತು ಆಫ್​​​​​​​ಸ್ಪಿನ್ ಆಲ್​ರೌಂಡರ್ ವಾಷಿಂಗ್ಟನ್ ಸುಂದರ್​​​, ತಂಡದಲ್ಲಿ ಸ್ಥಾನ ಪಡೆದಿರುವ ಸ್ಪಿನ್ನರ್ಸ್. ಆದ್ರೆ ನಾಲ್ವರಲ್ಲಿ ಇಬ್ಬರಿಗೆ ಮಾತ್ರ ಪ್ಲೇಯಿಂಗ್ ಇಲೆವೆನ್​ನಲ್ಲಿ ಅವಕಾಶ.  

ಎಷ್ಟು ಮಂದಿ ವೇಗಿಗಳಿಗೆ ಸ್ಥಾನ..?

ಅನುಭವಿ ವೇಗಿ ಜಸ್ಪ್ರೀತ್ ಬೂಮ್ರಾ, ಎಡಗೈ ವೇಗಿ ಆರ್ಷ್​ದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ, ನಿರೀಕ್ಷೆಯಂತೆ ಫಾಸ್ಟ್ ಬೌಲಿಂಗ್ ಡಿಪಾರ್ಟ್​ಮೆಂಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ತ್ರಿಮೂರ್ತಿಗಳು, ವಿಶ್ವಕಪ್​ನಲ್ಲಿ ಅಖಾಡಕ್ಕಿಳಿಯೋದು ಫಿಕ್ಸ್. ಈ ಮೂವರ ಕಾಂಬಿನೇಷನ್ ಶಾರ್ಟರ್ ಫಾರ್ಮೆಟ್​ನಲ್ಲಿ ವರ್ಕ್​ಔಟ್ ಆಗಿದೆ. 

ಒಟ್ನಲ್ಲಿ ಟೀಮ್ ಮ್ಯಾನೇಜ್ಮೆಂಟ್, ಸೆಲೆಕ್ಟರ್ಸ್ ಮತ್ತು ಬಿಸಿಸಿಐ ತಂಡದ ಆಯ್ಕೆಯಲ್ಲಿ ಎಲ್ಲೂ ಎಡವಲಿಲ್ಲ. ಟಿ-ಟ್ವೆಂಟಿ ವಿಶ್ವಕಪ್ ಟೈಟಲ್ ಡಿಫೆಂಡ್ ಮಾಡಿಕೊಳ್ಳೋಕೆ, ಇದಕ್ಕಿಂತ ಬೆಸ್ಟ್ ಟೀಮ್ ಮತ್ತೊಂದಿಲ್ಲ.

ಇದನ್ನೂ ಓದಿ:ಇಶಾನ್ ಕಿಶನ್ ಸರ್ಪ್ರೈಸ್ ಎಂಟ್ರಿ.. ವಿಶ್ವಕಪ್​ ಆಯ್ಕೆಯ ಮೀಟಿಂಗ್​ನಲ್ಲಿ ಆಗಿದ್ದೇನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Team India T20I T20 world cup team india squad
Advertisment