/newsfirstlive-kannada/media/media_files/2025/12/21/kn-rajanna-dk-shivakumar-2025-12-21-11-31-32.jpg)
ಮಹತ್ವದ ಬೆಳವಣಿಗೆ ಒಂದರಲ್ಲಿ ಮಾಜಿ ಸಚಿವ ಕೆ.ಎನ್. ರಾಜಣ್ಣ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ. ಪವರ್ ಶೇರಿಂಗ್ ವಿಚಾರದಲ್ಲಿ ಕೆಎನ್ ರಾಜಣ್ಣ ಸದಾ ಕಾಲ ಸಿದ್ದರಾಮಯ್ಯ ಪರ ಬ್ಯಾಟ್ ಬೀಸುತ್ತಿರುತ್ತಾರೆ. ಈ ನಡುವೆ ಶಿವಕುಮಾರ್​ ಅವರ ಭೇಟಿ ಅಚ್ಚರಿಗೆ ದೂಡಿದೆ.
ಭೇಟಿ ಬಗ್ಗೆ ಪ್ರತಿಕ್ರಿಯಿಸಿರುವ ಕೆಎನ್ ರಾಜಣ್ಣ, ಡಿ.ಕೆ ಶಿವಕುಮಾರ್ ಪಕ್ಷದ ಅಧ್ಯಕ್ಷರಾಗಿ ಭೇಟಿ ಮಾಡಿದ್ದರು. ಅವರನ್ನು ಯಾರನ್ನ ಬೇಕಾದರೂ ಭೇಟಿ ಮಾಡಬಹುದು. ಯಾರನ್ನಾದರೂ ಕರೆದು ಮಾತನಾಡಬಹುದು. ಪಕ್ಷದ ಹಿತದೃಷ್ಟಿಯಿಂದ ಏನೆಲ್ಲ ಮಾಡಬೇಕು ಅನಿಸುತ್ತೆ ಅವರು ಮಾಡ್ತಾರೆ.
ಇದನ್ನೂ ಓದಿ:ಜಿಹಾದಿ ಮನಸ್ಥಿತಿ ಭಾಷಣಕಾರರ ಮೊದಲು ಒಳಗೆ ಹಾಕಬೇಕು -ಸಿದ್ದು ಸರ್ಕಾರಕ್ಕೆ ಜೋಶಿ ಚಾಟಿ
ಇದರಲ್ಲಿ ಯಾವುದೇ ಪ್ರಮುಖ ವಿಚಾರವಿಲ್ಲ. ಪಕ್ಷ ಸಂಘಟನೆ ಬಗ್ಗೆ ಮಾತನಾಡಿದ್ರು, ಆಯ್ತು ಮಾಡೋಣ ಎಂದು ಹೇಳಿದೆ. ಅವತ್ತು ಹೇಗಿದ್ದೇನೋ ಈಗಲೂ ಅದೆ ಸ್ಟ್ಯಾಂಡ್. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ.
ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್ ಬಳಿಕ ರಾಜಣ್ಣ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬೆಳಗಾವಿಯಲ್ಲಿ ಎಲ್ಲ ಊಟಕ್ಕೆ ಕರೆದಿದ್ರು, ಅದರಲ್ಲಿ ಏನು ರಾಜಕೀಯವಿಲ್ಲ. ಸಿಎಂ ಹಾದಿ ಸುಗಮ ಮಾಡಿಕೋಡಬೇಕಂದರೂ ಕೂಡ ಅಂತಿಮವಾಗಿ ಹೈಕಮಾಂಡ್ ನಿರ್ಧಾರ ಮಾಡಬೇಕು. ಈಗಾಗಲೇ ಸಿದ್ದರಾಮಯ್ಯ ಹೇಳಿದ್ದಾರಲ್ಲ ಮುಖ್ಯಮಂತ್ರಿಯಾಗಿ ಇರ್ತೇನೆ ಎಂದು. ಎಲ್ಲಿಯವರೆಗೆ ಹೈಕಮಾಂಡ್ ಹೇಳುತ್ತದೆ, ಅಲ್ಲಿಯವರೆಗೆ ಇರ್ತೇನೆ ಎಂದು.
ಈಗಲೂ ಅದೇ ಸ್ಟಾಂಡ್. ನಾವು ಯಾವಾಗಲೂ ಸಿದ್ದರಾಮಯ್ಯ ಪರವಾಗಿಯೇ ಇದ್ದೇವೆ. ಡಿ.ಕೆ.ಶಿವಕುಮಾರ್ ಏನೇ ಪ್ರಯತ್ನ ಮಾಡಿದರೂ ಕೂಡ ನನ್ನ ಹಿಂದಿನ ಎಲ್ಲ ಹೇಳಿಕೆಗಳಿಗೆ ಬದ್ಧನಾಗಿದ್ದೇನೆ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us