/newsfirstlive-kannada/media/media_files/2025/12/21/joshi-2025-12-21-11-03-39.jpg)
ಬಾಳೆಹೊನ್ನೂರು: ‘ದ್ವೇಷ ಭಾಷಣಕ್ಕೆ ಜೈಲು ಶಿಕ್ಷೆ ಮಸೂದೆ’ ಕಾನೂನಾಗಿ ಜಾರಿಗೊಳಿಸಿದರೆ ರಾಜ್ಯ ಸರ್ಕಾರ ಜಿಹಾದಿ ಮನಸ್ಥಿತಿ ಉಳ್ಳವರನ್ನು ಮೊದಲು ಜೈಲಿಗೆ ಹಾಕಬೇಕಾಗುತ್ತದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಬಾಳೆಹೊನ್ನೂರಿನಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ರಾಜ್ಯ ಕಾಂಗ್ರೆಸ್ ಸರ್ಕಾರ ತುಷ್ಟೀಕರಣಕ್ಕಾಗಿ ಈ ಕಾಯಿದೆ ತರುತ್ತಿದೆ ಎಂದು ಕಿಡಿ ಕಾರಿದರು. ಸರ್ಕಾರದ ವಿರುದ್ಧ ಏನು ಮಾತನಾಡಿದರೂ ಅವರನ್ನು ಜೈಲಿಗೆ ಹಾಕಬೇಕೆಂಬ ಮನಸ್ಥಿತಿಯಲ್ಲಿ ಈ ಸರ್ಕಾರವಿದೆ. ಹಾಗಾಗಿ ಹೋರಾಟಗಾರರನ್ನು ಜೈಲಿಗೆ ಹಾಕಬೇಕು, ಹೆದರಿಸಬೇಕೆಂದು ಇದನ್ನು ಮಾಡಿದ್ದಾರೆ ಎಂದು ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಇಶಾನ್ ಕಿಶನ್ ಸರ್ಪ್ರೈಸ್ ಎಂಟ್ರಿ.. ವಿಶ್ವಕಪ್​ ಆಯ್ಕೆಯ ಮೀಟಿಂಗ್​ನಲ್ಲಿ ಆಗಿದ್ದೇನು..?
ಬಹಳ ಜನ ಜಿಹಾದಿ ಮನಸ್ಥಿತಿಯಲ್ಲಿ ಭಾಷಣ ಮಾಡುವರು ಇದ್ದಾರೆ. ಸರ್ಕಾರ ಮೊದಲು ಇಂಥವರನ್ನು ಒಳಗೆ ಹಾಕಬೇಕಿದೆ ಎಂದ ಸಚಿವರು, ರಾಜ್ಯದಲ್ಲಿ ಈ ಮಸೂದೆ ಅನುಷ್ಠಾನ ಆಗುವುದಿಲ್ಲ ಎಂದು ಸರ್ಕಾರಕ್ಕೆ ಚಾಟಿ ಬೀಸಿದರು.
ರಾಜ್ಯದಲ್ಲಿ ಧ್ವೇಷ ಭಾಷಣ ಮಾಡಿದರೆ ಜೈಲು ಶಿಕ್ಷೆ ಮಸೂದೆ ಅನುಷ್ಠಾನ ಅಸಾಧ್ಯ. ಒಂದು ವೇಳೆ ಸರ್ಕಾರ ಅನುಷ್ಠಾನ ಮಾಡಿದರೆ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಇದೆ ಎಂದು ಮಾರ್ಮಿಕವಾಗಿ ನುಡಿದ ಸಚಿವರು, ಕಾಂಗ್ರೆಸ್ ಪಕ್ಷ ತುಷ್ಟೀಕರಣಕ್ಕಾಗಿ ಈ ಕಾಯಿದೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:2026ರಲ್ಲಿ ಏನಾದರೂ ಬೆದರಿಕೆ ಇದೆಯೇ? ಬಾಬಾ ವಂಗಾ ಅಚ್ಚರಿಯ ಭವಿಷ್ಯವಾಣಿಗಳು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us