ಓಲಾ, ಊಬರ್ ಮಾದರಿಯಲ್ಲೇ Ambulance ಬುಕಿಂಗ್ ವ್ಯವಸ್ಥೆ - ಸರ್ಕಾರದಿಂದ ಮಹತ್ವದ ನಿರ್ಧಾರ

ಹೆಚ್ಚಿನ ಹಣ ಪೀಕುತ್ತಿದ್ದ ಆ್ಯಂಬುಲೆನ್ಸ್ ಸಂಸ್ಥೆಗಳಿಗೆ ಸರ್ಕಾರ ಮೂಗುದಾರ ಹಾಕಲು ಮುಂದಾಗಿದೆ. ಕೆಪಿಎಂಇ ಕಾಯ್ದೆ ಅಡಿಯಲ್ಲಿ ಆ್ಯಂಬುಲೆನ್ಸ್ ಸಂಸ್ಥೆಗಳನ್ನು ತರಲು ಕರ್ನಾಟಕ ಸರ್ಕಾರ ಮುಂದಾಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

author-image
Ganesh
AMBULENCE_SIDDARAMAIAH
Advertisment

ಕಾರವಾರ: ಮುಂದಿನ ದಿನಗಳಲ್ಲಿ ಓಲಾ, ಊಬರ್ ಆ್ಯಪ್​​ಗಳ ಮಾದರಿಯಲ್ಲೇ ಆ್ಯಂಬುಲೆನ್ಸ್ ಬುಕ್ ಮಾಡಬಹುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ. 

ರಾಜ್ಯದ ಕೆಲವು ಭಾಗಗಳಲ್ಲಿ ಆ್ಯಂಬುಲೆನ್ಸ್​ ಹೆಚ್ಚಿನ ದರ ವಿಧಿಸುತ್ತಿವೆ ಎಂಬ ದೂರು ಇದೆ. ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಸಚಿವರು.. ಕೆಪಿಎಂಇ (Karnataka Private Medical Establishment Act) ಅಡಿಯಲ್ಲಿ ಆ್ಯಂಬುಲೆನ್ಸ್​ಗಳನ್ನು ಸರ್ಕಾರದಡಿಯಲ್ಲಿ ತರುತ್ತಿದ್ದೇವೆ. 

ಇದನ್ನೂ ಓದಿ: ₹500 ರೂಪಾಯಿಗೆ 4 ಸೀರೆ.. ಸೂಪರ್ ಆಫರ್​ಗಾಗಿ ಓಡೋಡಿ ಬಂದ ಮಹಿಳೆಯರಿಗೆ ಕಾದಿತ್ತು ಶಾಕ್!

DINESH GUNDURAO
ದಿನೇಶ್ ಗುಂಡೂರಾವ್

ಬರುವ ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಲಿದೆ. ಆ್ಯಂಬುಲೆನ್ಸ್​ ಹೇಗಿರಬೇಕು, ಮಾನದಂಡ ಹೇಗಿರಬೇಕು. ಜೊತೆಗೆ ದರವನ್ನು ಹೇಗೆ ನಿಯಂತ್ರಣ ಮಾಡಬೇಕು ಅನ್ನೋದ್ರ ಕುರಿತು ಚರ್ಚೆ ನಡೆಸಿ ನಿಯಮ ಜಾರಿಗೆ ತರುತ್ತವೆ. ಮೊಬೈಲ್ ಹೆಲ್ತ್ ಯುನಿಟ್​ಗಳು, ಆ್ಯಂಬುಲೆನ್ಸ್​ಗಳಿಗೆ ಕೆಪಿಎಂಇ ಲೈಸೆನ್ಸ್ ಕಡ್ಡಾಯ ಮಾಡುತ್ತೇವೆ. 

ಓಲಾ, ಊಬರ್ ಆ್ಯಪ್​ಗಳ ರೀತಿಯಲ್ಲೇ ಆ್ಯಂಬುಲೆನ್ಸ್​ಗಳನ್ನು ಬುಕ್ ಮಾಡಬಹುದು. ಸರ್ವೀಸ್  ಯಾರೇ ಕೊಡಲಿ ದರ ಮೊದಲೇ ಫಿಕ್ಸ್ ಮಾಡುತಿದ್ದೇವೆ, ಪಾರದರ್ಶಕತೆ ತರುತಿದ್ದೇವೆ. ಆ್ಯಂಬುಲೆನ್ಸ್​​ಗಳು ಕ್ವಾಲಿಟಿ ಇರುವುದಿಲ್ಲ. ಅದರಲ್ಲಿ ಬರೀ ಗಾಡಿ ಇರುತ್ತದೆ, ಒಂದು ಬೆಡ್ ಮಾತ್ರ ಇರುತ್ತವೆ. ಹೀಗಾಗಿಯೇ ಆ್ಯಂಬುಲೆನ್ಸ್​ಗಳಿಗೆ ಮಾನದಂಡ ತರುತ್ತೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ. 

ಇದನ್ನೂ ಓದಿ: ವಾಜಪೇಯಿ ಆರೋಗ್ಯ ಶ್ರೀ ಯೋಜನೆಯಲ್ಲಿ ಬಡವರಿಗೆ ಉಚಿತ ಚಿಕಿತ್ಸೆ, ನೀವು ಇದರ ಲಾಭ ಪಡೆಯಬಹುದು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Dinesh Gundu Rao Ambulance Karnataka Govt
Advertisment