/newsfirstlive-kannada/media/media_files/2025/09/08/job_news-2-2025-09-08-13-59-49.jpg)
ಸ್ನೇಹಿತರ ಜೊತೆಯಲ್ಲಿ ಇದ್ದಾಗ ನಾವು ಕೂಡ ಸುಂದರವಾಗಿ ಚೆನ್ನಾಗಿ ಕಾಣಬೇಕು ಎನ್ನುವುದು ಪ್ರತಿಯೊಬ್ಬರ ಆಸೆ ಆಗಿರುತ್ತದೆ. ಅದರಲ್ಲಿ ಮದುವೆ, ನಾಮಕರಣ, ಗೆಟ್ ಟುಗೆದರ್, ಬರ್ತ್ಡೇ ಇತ್ಯಾದಿ ಸಮಾರಂಭಕ್ಕೆ ಹೋದಾಗ ಸೆಲ್ಫಿ, ಫೋಟೋದಲ್ಲಿ ಚೆನ್ನಾಗಿ ಕಾಣಿಸಬೇಕು ಎನ್ನುವುದು ಈಗಿನವರ ಮಹಾದೊಡ್ಡ ಆಸೆ. ಆದಷ್ಟು ಸುಂದರವಾಗಿ ಕಾಣಬೇಕು ಎಂದರೆ ಅಂಗಡಿ, ಮೆಡಿಕಲ್ನಲ್ಲಿ ಸಿಗುವ ಕ್ರೀಮ್ಗಳ ಮೊರೆ ಹೋಗಬಾರದು. ಬದಲಾಗಿ, ನಿಮ್ಮ ಆಹಾರ ಪದ್ಧತಿನ ಸೂಕ್ತ ರೀತಿಯಲ್ಲಿ ಫಾಲೋ ಮಾಡಬೇಕು.
ಚೆನ್ನಾಗಿ ಕಾಣಬೇಕು ಎಂದರೆ ತ್ವಚೆ ಹಾಗೂ ಮುಖದ ಸೌಂದರ್ಯ ತುಂಬಾ ಮುಖ್ಯವಾಗಿರುತ್ತದೆ. ಹೀಗಾಗಿ ಆಹಾರ ಪದ್ಧತಿ ರೂಢಿಸಿಕೊಳ್ಳಬೇಕು. ರುಚಿಯಾಗಿದೆ ಅಂತ ಸಿಕ್ಕ ಸಿಕ್ಕ ಆಹಾರ ಸೇವಿಸಿದರೆ ತೂಕ ಹೆಚ್ಚುತ್ತದೆ ಜೊತೆಗ ಅನಾರೋಗ್ಯವೂ ಕಾಡುತ್ತದೆ. ಆದ್ದರಿಂದ ಸರಿಯಾದ ಆಹಾರ ಸೇವಿಸುವುದು ಬಹಳ ಮುಖ್ಯ. ಹಾಗೆಯೇ ತ್ವಚೆಯ ವಿಷಯದಲ್ಲಿ ಯಾವ ಆಹಾರ ಮುಖ್ಯ, ಯಾವ ಆಹಾರ ಮುಖ್ಯವಲ್ಲ ಎಂದು ತಿಳಿದಿರಬೇಕು. ಮೊದಲನೇಯದಾಗಿ ಆದಷ್ಟು ಹೆಚ್ಚಾಗಿ ನೀರು ಕುಡಿಯಿರಿ.
ಚರ್ಮಕ್ಕೆ ಅಗತ್ಯವಿರುವ ಆಹಾರಗಳನ್ನು ಆಯಾ ಋತುವಿನಲ್ಲಿ ಪ್ರಕೃತಿ ಪೂರೈಸುತ್ತದೆ. ಕ್ಯಾರೆಟ್ನಲ್ಲಿ ವಿಟಮಿನ್-ಎ ಹೆಚ್ಚಾಗಿರುತ್ತದೆ. ಕ್ಯಾರೆಟ್, ಬೀಟ್ ರೂಟ್, ಸೌತೆಕಾಯಿ, ಇದೆಲ್ಲಾ ತ್ವಚೆಯನ್ನು ಹೊಳೆಯುವಂತೆ ಮಾಡುತ್ತವೆ. ಇವುಗಳನ್ನು ತಿನ್ನುವುದರಿಂದ ಮುಖದ ಮೇಲಿನ ರೇಖೆಗಳು ಮತ್ತು ಸುಕ್ಕುಗಳು ಮಾಯವಾಗುತ್ತವೆ. ಇದು ಚರ್ಮದ ವಿನ್ಯಾಸವನ್ನು ಸುಧಾರಿಸಲು ಸಹ ಸಹಾಯ ಮಾಡುತ್ತದೆ. ಕೂದಲಿಗೂ ಉತ್ತಮವಾದದ್ದು. ನಿಮ್ಮ ಆಹಾರದಲ್ಲಿ ಜಂಕ್ ಫುಡ್ ದೂರ ಇಡಿ.
ಇದನ್ನೂ ಓದಿ:ಮದ್ದೂರು ಗಣೇಶೋತ್ಸವ ಕೇಸ್; ಯುವತಿ ಮೇಲೆ ಪುರುಷ ಕಾನ್ಸ್ಟೆಬಲ್ನಿಂದ ಲಾಠಿ ಚಾರ್ಜ್
ಬಿ ಕಾಂಪ್ಲೆಕ್ಸ್ನ ಮೂಲ ಎಂದೇ ಹೇಳಲಾಗುವ ದ್ವಿದಳ ಧಾನ್ಯಗಳು ತಿನ್ನುವುದು ರೂಢಿಸಿಕೊಳ್ಳಬೇಕು. ಬೇಕರಿಯಲ್ಲಿ ಬ್ರೆಡ್, ಬನ್, ಕೂಲ್ ಡ್ರಿಂಕ್ಸ್ ಕುಡಿಯುವುದಕ್ಕಿಂತ ಮನೆಯಲ್ಲಿ ದ್ವಿದಳ ಧಾನ್ಯಗಳನ್ನು ತಿನ್ನಲು ತಯಾರಿ ಮಾಡಿಕೊಳ್ಳಬೇಕು. ಮೊಳಕೆ ರೂಪದಲ್ಲಿ ದ್ವಿದಳ ಧಾನ್ಯಗಳನ್ನು ತಿನ್ನಬೇಕು. ಇದು ಹೊಳೆಯುವ ಚರ್ಮಕ್ಕೆ ಅತ್ಯಗತ್ಯ. ಕಣ್ಣುಗಳ ಕೆಳಗೆ ಬರುವ ಡಾರ್ಕ್ನೆಸ್ ಅನ್ನು ಅಳಿಸುತ್ತದೆ. ಪ್ರೋಟೀನ್, ಫೈಬರ್, ಕ್ಯಾಲ್ಸಿಯಂನಂತ ಜೀವಸತ್ವಗಳು ಮತ್ತು ಪೋಷಕಾಂಶಗಳ ಅಧಿಕವಾಗಿ ಇವುಗಳಲ್ಲಿ ಇವೆ.
ವಿಟಮಿನ್ ಸಿ ಚರ್ಮಕ್ಕೆ ಅನೇಕ ಪ್ರಯೋಜ ನೀಡುತ್ತದೆ. ವಿಟಮಿನ್ ಸಿ ಕಿತ್ತಳೆ, ನಿಂಬೆ, ಪೇರಳೆ, ಸ್ಟ್ರಾಬೆರಿಯಲ್ಲಿ ಅಧಿಕವಾಗಿರುತ್ತದೆ. ನಮ್ಮ ಚರ್ಮಕ್ಕೂ ಎಲ್ಲಾ ಸಮಯದಲ್ಲೂ ವಿಟಮಿನ್ ಸಿ ಅಗತ್ಯವಿದೆ. ಇದರ ಜೊತೆಗೆ ದೇಹಕ್ಕೆ ವಿಟಮಿನ್ ಡಿ ಅತ್ಯಂತ ಮುಖ್ಯವಾಗಿರುತ್ತದೆ. ವಿಟಮಿನ್ ಡಿ ಮತ್ತು ವಿಟಮಿನ್ ಇ ನಮ್ಮ ಚರ್ಮಕ್ಕೆ ಮುಖ್ಯವಾಗಿ ಬೇಕಾಗಿವೆ. ಒಣಗಿದ ಹಣ್ಣು ಮತ್ತು ನಟ್ಸ್ ಸೇವಿಸುವ ಮೂಲಕ, ತುಪ್ಪ ಅಥವಾ ಬೆಣ್ಣೆಯಿಂದ ಸಂಪೂರ್ಣವಾಗಿ ಇವುಗಳನ್ನು ಪಡೆಯಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ