/newsfirstlive-kannada/media/media_files/2025/11/23/heart-attack-1-2025-11-23-15-40-20.jpg)
ಒಂದು ಕಾಲದಲ್ಲಿ ಹೃದಯ ಸಮಸ್ಯೆಗಳು ವಯಸ್ಕರಿಗೆ ಮಾತ್ರ ಸೀಮಿತವಾಗಿತ್ತು. ಕೆಲವು ವರ್ಷಗಳಲ್ಲಿ ಮಕ್ಕಳಲ್ಲಿ ಆತಂಕಕಾರಿಯಾಗಿ ಹೆಚ್ಚುತ್ತಿದೆ. ಆಧುನಿಕ ಜೀವನಶೈಲಿ, ಆಹಾರ ಪದ್ಧತಿಯಲ್ಲಿನ ಬದಲಾವಣೆಗಳು ಮತ್ತು ದೈಹಿಕ ಚಟುವಟಿಕೆಗಳ ಕೊರತೆಯಿಂದಾಗಿ ಮಕ್ಕಳ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ. ತಜ್ಞರ ಪ್ರಕಾರ, ಮಕ್ಕಳಲ್ಲಿ ಹೃದ್ರೋಗ ಹೆಚ್ಚಳಕ್ಕೆ ನಾಲ್ಕು ಪ್ರಮುಖ ಅಂಶಗಳು ಕಾರಣವಾಗಿವೆ.
ಬೊಜ್ಜು
ಮಕ್ಕಳಲ್ಲಿ ಹೃದಯ ರಕ್ತನಾಳಗಳ ಮೇಲೆ ಒತ್ತಡ ಹೆಚ್ಚಾಗಲು ಮುಖ್ಯ ಕಾರಣ ಅವರ ಆಹಾರ ಪದ್ಧತಿ ಎಂದು ತಜ್ಞರು ಎಚ್ಚರಿಸಿದ್ದಾರೆ. ಹೆಚ್ಚಿನ ಸಕ್ಕರೆ, ಸಂಸ್ಕರಿಸಿದ ಆಹಾರ, ಹುರಿದ ಆಹಾರಗಳು ಮತ್ತು ಫಾಸ್ಟ್ ಫುಡ್ ಅನ್ನು ಆಗಾಗ್ಗೆ ಸೇವಿಸುವುದರಿಂದ ಕೊಬ್ಬಿನಂಶ ಹೆಚ್ಚಾಗುತ್ತದೆ.
ಇದನ್ನೂ ಓದಿ:ವಿಶ್ವದಲ್ಲಿ ಹೊಸ ಸಂಚಲನ.. ಮನುಷ್ಯರು 150 ವರ್ಷ ಬದುಕುವ ಮಾತ್ರೆ ಅಭಿವೃದ್ಧಿಪಡಿಸಿದ ಚೀನಾ..!
ಇದು ರಕ್ತನಾಳಗಳಿಗೆ ಹಾನಿಯುಂಟು ಮಾಡುತ್ತದೆ. ಮಕ್ಕಳು ಟಿವಿ, ಮೊಬೈಲ್ ಮತ್ತು ವಿಡಿಯೋ ಗೇಮ್‌ಗಳೊಂದಿಗೆ ಹೆಚ್ಚು ಸಮಯ ಕಳೆಯುತ್ತಾರೆ. ಇದು ದೈಹಿಕ ವ್ಯಾಯಾಮ ಕಡಿಮೆ ಮಾಡುತ್ತದೆ. ಮಕ್ಕಳಲ್ಲಿ ಅಧಿಕ ತೂಕದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಬೊಜ್ಜು ಹೃದಯ ಸಮಸ್ಯೆಗಳಿಗೆ ಪ್ರಮುಖ ಕಾರಣ.
ಅನುವಂಶಿಕ ಅಂಶಗಳು
ಚಿಕ್ಕ ವಯಸ್ಸಿನಲ್ಲಿ ಹೃದಯ ಸಮಸ್ಯೆಗಳಿಗೆ ಅನುವಂಶಿಕ ಅಂಶಗಳು ಸಹ ಕಾರಣ. ಪೋಷಕರು ಅಥವಾ ನಿಕಟ ಕುಟುಂಬ ಸದಸ್ಯರು ಹೆಚ್ಚಿನ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ ಅಥವಾ ಹೃದಯ ಸ್ನಾಯು ದೋಷಗಳಂತಹ ಸಮಸ್ಯೆಗಳಿದ್ದರೆ ಆ ಲಕ್ಷಣಗಳು ಮಕ್ಕಳಿಗೆ ಹರಡುವ ಸಾಧ್ಯತೆ ಇದೆ. ಪೋಷಕರು ಅನುವಂಶಿಕ ಸಮಸ್ಯೆಗಳಿರುವ ಮಕ್ಕಳನ್ನು ಮೇಲ್ವಿಚಾರಣೆ ಮಾಡಬೇಕು. ಮತ್ತು ಅವರನ್ನು ನಿಯಮಿತವಾಗಿ ಪರೀಕ್ಷಿಸಬೇಕು.
ಮಾನಸಿಕ ಒತ್ತಡ
ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಎದುರಿಸುವ ಮಾನಸಿಕ ಒತ್ತಡವು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಶಾಲೆಯ ಒತ್ತಡ, ಮನೆ ಕೆಲಸದ ಒತ್ತಡ, ಸ್ಪರ್ಧಾತ್ಮಕತೆ, ಟ್ಯೂಷನ್‌ಗಳಿಗೆ ಆಟದ ಸಮಯ ಕಡಿಮೆ ಮಾಡುವುದು, ಭಾರವಾದ ಶಾಲಾ ಬ್ಯಾಗ್‌ಗಳನ್ನು ಹೊತ್ತುಕೊಳ್ಳುವುದು ಇತ್ಯಾದಿ.. ಇದು ಮಾನಸಿಕ ಆತಂಕವನ್ನು ಹೆಚ್ಚಿಸುತ್ತವೆ. ಈ ಅತಿಯಾದ ಒತ್ತಡ ಹೃದಯ ವೈಫಲ್ಯಕ್ಕೆ ಕಾರಣವಾಗಬಹುದು.
ಏನು ಮಾಡಬೇಕು..?
- ಮಕ್ಕಳಿಗೆ ಹಣ್ಣುಗಳು, ತರಕಾರಿಗಳು, ಬೇಳೆಕಾಳುಗಳು
- ಕಡಿಮೆ ಕೊಬ್ಬು, ಕಡಿಮೆ ಸಕ್ಕರೆ ಇರುವ ಆಹಾರ ನೀಡಿ
- ಹುರಿದ ಮತ್ತು ಸಂಸ್ಕರಿಸಿದ ಆಹಾರ ಕಡಿಮೆ ಮಾಡಿ
- ಪ್ರತಿದಿನ 30-45 ನಿಮಿಷ ಹೊರಾಂಗಣದಲ್ಲಿ ಆಡಲಿ
- ನಡೆಯುವುದು, ಇತರ ಆಟಗಳನ್ನು ಖಚಿತಪಡಿಸಿಕೊಳ್ಳಿ
- ಮಕ್ಕಳ ಮೇಲೆ ಅಧ್ಯಯನದ ಬಗ್ಗೆ ಅನಗತ್ಯ ಒತ್ತಡ ಬೇಡ
- ಮಕ್ಕಳಿಗೆ ಸಾಕಷ್ಟು ವಿಶ್ರಾಂತಿ, ಆಡಲು ಸಮಯ ನೀಡಿ
- ಮಾನಸಿಕ ಕಾಳಜಿಗಳನ್ನು ಗುರುತಿಸಿ, ಪರಿಹರಿಸಲು ಮಾತಾಡಿ
- ಕುಟುಂಬದಲ್ಲಿ ಹೃದಯ ಸಮಸ್ಯೆಗಳ ಇತಿಹಾಸವಿದ್ದರೆ ಎಚ್ಚರ ವಹಿಸಿ
- ಮಗುವಿನ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟ ಪರೀಕ್ಷಿಸಿ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us