/newsfirstlive-kannada/media/media_files/2025/11/20/china-longevity-pill-2025-11-20-09-29-13.jpg)
ಚೀನಾದಿಂದ ದೊಡ್ಡ ಬ್ರೇಕಿಂಗ್ ನ್ಯೂಸ್​ ಹೊರಬಿದ್ದಿದೆ. ಇದು ವಿಶ್ವದಾದ್ಯಂತ ಭಾರೀ ಕುತೂಹಲ ಮತ್ತು ಅನುಮಾನಗಳನ್ನೂ ಹುಟ್ಟುಹಾಕಿದೆ. ಶೆನ್ಜೆನ್ ಮೂಲದ ಬಯೋಟೆಕ್ ಕಂಪನಿಯು (Shenzhen-based biotechnology) ಭವಿಷ್ಯದಲ್ಲಿ ಮನುಷ್ಯರು 150 ವರ್ಷಗಳವರೆಗೆ ಬದುಕಲು ಸಾಧ್ಯ ಎಂದು ಹೇಳಿಕೊಂಡಿದೆ.
ದೀರ್ಘಾಯುಷ್ಯ ಮಾತ್ರೆ ಎಂದರೇನು? ಅದು ಹೇಗೆ ಕೆಲಸ ಮಾಡುತ್ತದೆ?
ಚೀನಾ ಕಂಪನಿಯ ಹೇಳಿಕೆ ಪ್ರಕಾರ.. ಮಾತ್ರೆಯೊಂದನ್ನ ಅಭಿವೃದ್ಧಿಪಡಿಸಲಾಗಿದೆ. ಅದಕ್ಕೆ ವಿಶೇಷ ದೀರ್ಘಾಯುಷ್ಯ ಮಾತ್ರೆ (special longevity pill) ಎಂದು ಹೆಸರಿಟ್ಟಿದ್ದಾರೆ. ಅದು ಮನುಷ್ಯರು ವಯಸ್ಸಾಗುವಿಕೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಜೊತೆಗೆ ಜೀವಿತಾವಧಿಯನ್ನೂ ಹೆಚ್ಚಿಸುತ್ತದೆ. ಇದು ದೇಹದಲ್ಲಿನ ಹಳೆಯ ಮತ್ತು ನಿಷ್ಕ್ರಿಯ ಕೋಶಗಳನ್ನು ಗುರಿಯಾಗಿಸಿ ಕೆಲಸ ಮಾಡಲಿದೆ. ಇದನ್ನು ವಿಜ್ಞಾನಿಗಳು zombie cells ಎಂದು ಕರೆಯುತ್ತಾರೆ. ಈ ಸೆಲ್ಸ್ ವಿಭಜನೆ ಆಗುವುದಿಲ್ಲ. ಉರಿಯೂತ ಮತ್ತು ವಯಸ್ಸಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು ಉಂಟುಮಾಡುತ್ತಲೇ ಇರುತ್ತವೆ. ಪ್ರಪಂಚದಾದ್ಯಂತದ ವಿಜ್ಞಾನಿಗಳು ಈ ಕೋಶಗಳನ್ನು ತಟಸ್ಥಗೊಳಿಸುವ ಮಾರ್ಗಗಳನ್ನು ಸಂಶೋಧಿಸುತ್ತಿದ್ದಾರೆ.
ಇಲಿಗಳ ಮೇಲೆ ಪ್ರಯೋಗ
ವರದಿಗಳ ಪ್ರಕಾರ.. ಈ ಔಷಧಿಯನ್ನು ಇಲಿಗಳ ಮೇಲೆ ಪ್ರಯೋಗ ಮಾಡಲಾಗಿದೆ. ಇಲಿಗಳ ಒಟ್ಟಾರೆ ಜೀವಿತಾವಧಿಯಲ್ಲಿ 9.4% ಹೆಚ್ಚಳ ಕಂಡುಬಂದಿದೆ. ಚಿಕಿತ್ಸೆಯ ನಂತರ ಅವುಗಳ ಉಳಿದ ಜೀವಿತಾವಧಿ 64% ಕ್ಕಿಂತ ಹೆಚ್ಚಾಗಿದೆ.
ಇದನ್ನೂ ಓದಿ: ಕಾಂತಿಯುತ ಚರ್ಮ, ಆಯಸ್ಸು ಸೇರಿ ದೇಹದ ಆರೋಗ್ಯಕ್ಕೆ ಬೇಕೇ ಬೇಕು ಯೋಗಾಸನ..!
/filters:format(webp)/newsfirstlive-kannada/media/media_files/2025/09/04/cath-lab01-2025-09-04-18-03-51.jpg)
ಕಂಪನಿಯ ಅಧಿಕಾರಿ ಲಿಯು ಕ್ವಿಂಗ್ಹುವಾ (Lyu Qinghua), ನ್ಯೂಯಾರ್ಕ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ.. ಮನುಷ್ಯರು 150 ವರ್ಷಗಳವರೆಗೆ ಬದುಕೋದು ಇನ್ಮುಂದೆ ಸಾಧ್ಯ. ಮುಂಬರುವ ವರ್ಷಗಳಲ್ಲಿ ಈ ದಿಕ್ಕಿನಲ್ಲಿ ಗಮನಾರ್ಹ ಪ್ರಗತಿ ಕಾಣಲಿದ್ದೇವೆ ಎಂದಿದ್ದಾರೆ.
ಚೀನದಲ್ಲಿ ದೀರ್ಘಾಯುಷ್ಯದ ಹುಡುಕಾಟ ಏಕೆ ಹೆಚ್ಚುತ್ತಿದೆ?
2024ರಲ್ಲಿ ಚೀನಾದ ಸರಾಸರಿ ಜೀವಿತಾವಧಿ 79 ವರ್ಷಗಳನ್ನು ತಲುಪಿದೆ. ಇದು ಜಾಗತಿಕ ಸರಾಸರಿಗಿಂತ ಸರಿಸುಮಾರು ಐದು ವರ್ಷಗಳು ಹೆಚ್ಚಾಗಿದೆ. ಹೀಗಾಗಿ ಚೀನಾ ದೀರ್ಘಾಯುಷ್ಯ ವಿಜ್ಞಾನದತ್ತ ಹೆಚ್ಚಿನ ಗಮನ ನೀಡುತ್ತಿದೆ. ನಿರಂತರ ಸಂಶೋಧನೆಗಳ ಅಭಿವೃದ್ಧಿ, ಅಲ್ಲಿನ ಸರ್ಕಾರದ ಆಸಕ್ತಿ ಹಾಗೂ ಖಾಸಗಿ ಹೂಡಿಕೆಯಿಂದಾಗಿ ಈ ರೀತಿಯ ಸಂಶೋಧನೆಗಳು ಹೆಚ್ಚಾಗಿದೆ.
ಇದನ್ನೂ ಓದಿ: ಕೇರಳದ ಶಬರಿಮಲೆ ಭಕ್ತರಿಗೆ ರಾಜ್ಯ ಆರೋಗ್ಯ ಇಲಾಖೆಯ ಮಾರ್ಗಸೂಚಿ : ಮಿದುಳು ತಿನ್ನುವ ಅಮೀಬಾ ಬಗ್ಗೆ ಎಚ್ಚರ ವಹಿಸಲು ಸೂಚನೆ
/filters:format(webp)/newsfirstlive-kannada/media/post_attachments/wp-content/uploads/2025/04/Tablets.jpg)
ಹಿಂದೆ, ಚೀನಾದಲ್ಲಿ ಯಾರೂ ದೀರ್ಘಾಯುಷ್ಯದ ಬಗ್ಗೆ ಮಾತನಾಡುತ್ತಿರಲಿಲ್ಲ. ಇದನ್ನು ಶ್ರೀಮಂತ ಅಮೆರಿಕನ್ನರ ಹವ್ಯಾಸವೆಂದು ಪರಿಗಣಿಸಲಾಗಿತ್ತು. ಈಗ ಅನೇಕ ಚೀನೀ ನಾಗರಿಕರು ಸ್ವತಃ ಅದರಲ್ಲಿ ಹೂಡಿಕೆ ಮಾಡುತ್ತಿದ್ದಾರೆ.
ಚೀನಾದ ಹೇಳಿಕೆ ನಂಬಬೇಕಾ?
ಕಂಪನಿಯ ಹೇಳಿಕೆಗಳು ಹೊಸ ಭರವಸೆ ಹುಟ್ಟಿದೆ. ಆದರೆ ವೈಜ್ಞಾನ ಲೋಕ ಎಚ್ಚರಿಕೆಯಿಂದ ಇರಬೇಕೆಂದು ಒತ್ತಾಯಿಸುತ್ತಿದೆ. ಇಲಿಗಳ ಮೇಲಿನ ಯಶಸ್ವಿ ಪ್ರಯೋಗಗಳು ಕೇವಲ ಪ್ರಾಥಮಿಕ ಹಂತ ಮಾತ್ರ ಎಂದು ತಜ್ಞರು ಹೇಳುತ್ತಾರೆ. ಔಷಧದ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳುವ ಮೊದಲು ವ್ಯಾಪಕ ಮತ್ತು ದೀರ್ಘಕಾಲೀನ ಮಾನವ ಪ್ರಯೋಗಗಳು ಅಗತ್ಯ.
ಇದನ್ನೂ ಓದಿ:ಕೇರಳದ ಶಬರಿಮಲೆಯಲ್ಲಿ ಹರಿದು ಬಂದ ಭಕ್ತಸಾಗರ: ಸರಿಯಾದ ವ್ಯವಸ್ಥೆ ಮಾಡಲು ಹೈಕೋರ್ಟ್ ಸೂಚನೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us