/newsfirstlive-kannada/media/media_files/2025/10/24/spinal_health-2025-10-24-13-44-01.jpg)
ಇಡೀ ಮಾನವನಿಗೆ ಆಧಾರ ಎಂದರೆ ಬೆನ್ನೆಲುಬು ಆಗಿರುತ್ತದೆ. ನಾವು ಕೂರುವುದಕ್ಕೆ, ನಡೆಯುವುದಕ್ಕೆ, ದೇಹ ನೀಳವಾಗಿ ಕಾಣಲು, ಮೆದುಳಿನಿಂದ ದೇಹದ ಇತರೆ ಭಾಗಗಳಿಗೆ ಸಂಪರ್ಕ ಕಲ್ಪಿಸುವುದೇ ಬೆನ್ನೆಲುಬು. ಈಗೀಗ ಕುಳಿತುಕೊಂಡಲ್ಲೇ ಹೆಚ್ಚಾಗಿ ಕೆಲಸಗಳನ್ನು ಮಾಡುತ್ತಿರುವುದರಿಂದ ಹೆಚ್ಚಿನ ಜನರಲ್ಲಿ ಬೆನ್ನು ನೋವು, ಬೆನ್ನು ಹುರಿ, ಅನಾರೋಗ್ಯ, ಕಿರಿ ಕಿರಿ ಕಂಡು ಬರುತ್ತಿದೆ. ಹಾಗಾದರೆ ಕಾರಣಗಳೇನು ಎಂಬುದುನ್ನು ಇಲ್ಲಿ ನೀಡಲಾಗಿದೆ.
ನಾವು ಏನೇ ಕೆಲಸ ಮಾಡಿದರೂ ಅದಕ್ಕೆ ಬೆನ್ನು ಮೂಳೆಯ ಕ್ರಿಯೆ ಇದ್ದೇ ಇರುತ್ತದೆ. ನಡೆಯುವಾಗ, ಬಗ್ಗುವಾಗ, ಏಳುವಾಗ, ಕೂರುವಾಗ, ತಿರುಗುವಾಗ ಬೆನ್ನೆಲುಬು ತನ್ನ ಕೆಲಸವನ್ನು ತಾನು ಮಾಡುತ್ತಿರುತ್ತದೆ. ಒಂದು ಭಂಗಿಯಲ್ಲಿ ದೀರ್ಘ ಕಾಲ ಇರಬೇಕು ಎಂದರೆ, ಅದರ ಭಂಗಿ ಸೂಕ್ತ ವಾಗಿರಬೇಕು. ಹೇಗೊಗೋ ಮಲಗುವುದು, ಕೂತು ಮೊಬೈಲ್, ಕಂಪ್ಯೂಟರ್​ ನೋಡುವುದು, ಹೆಚ್ಚು ಸಮಯ ನಿಂತಲ್ಲೇ ಕೆಲಸ ಮಾಡಿದರೆ ಬೆನ್ನುನೋವು ಕಾಣಿಸುತ್ತದೆ.
ಕಂಪ್ಯೂಟರ್ ಮುಂದೆ ಕುಳಿತು ಹೆಚ್ಚು ಕೆಲಸ ಮಾಡಬೇಕು ಎಂದರೆ ಅದಕ್ಕೆ ಆದ ಸರಿಯಾದ ಭಂಗಿಯನ್ನು ನಾವು ಅಳವಡಿಕೆ ಮಾಡಿಕೊಳ್ಳಬೇಕು. ಇಲ್ಲದಿದ್ದರೇ ನಮಗೆ ಬೆನ್ನುನೋವು, ಬೆನ್ನುಹುರಿ ಅಥವಾ ಸೊಂಟದ ಡಿಸ್ಕ್, ಕುತ್ತಿಗೆ ಸಮಸ್ಯೆಗಳು ಬಂದು ಬಿಡುತ್ತವೆ. ಮೊದಲೇ ಸರಿಯಾದ ಯೋಜನೆ ಮಾಡಿಕೊಂಡು ಕೆಲಸ ಮಾಡಲು ಶುರು ಮಾಡಿದರೆ ಬೆನ್ನಿನ ಆರೋಗ್ಯ ಕಾಪಾಡಿಕೊಳ್ಳಬಹುದು.
ಇದನ್ನೂ ಓದಿ:ಹೃದಯವನ್ನು ಆರೋಗ್ಯವಾಗಿ ಕಾಪಾಡಿಕೊಳ್ಳುವುದು ಹೇಗೆ.. ಇಲ್ಲಿವೆ ಕೆಲ ಟಿಪ್ಸ್​!
/filters:format(webp)/newsfirstlive-kannada/media/media_files/2025/10/24/spinal_health_1-2025-10-24-13-44-14.jpg)
ಬೆನ್ನಿನ ಆರೋಗ್ಯ ಎಂದರೆ ಬೆನ್ನಿಗಾಗಿಯೇ ವ್ಯಾಯಾಮ ಮಾಡಬೇಕು. ಯೋಗ, ನಡಿಗೆ, ಈಜು ಇಂತಹ ಯಾವುದಾದರೂ ಮಾಡುತ್ತಿರಬೇಕು. ಹೀಗೆ ಮಾಡುವುದರಿಂದ ನಮ್ಮ ಬೆನ್ನು ಮೂಳೆಯ ಸುತ್ತಲಿನ ಮಾಂಸಖಂಡಗಳು ಸದೃಢವಾಗುತ್ತವೆ. ಧೂಮಪಾನ ಮಾಡುವುದರಿಂದ ಸಾಮಾನ್ಯವಾಗಿ ನಮ್ಮಲ್ಲಿ ನಿಕೋಟಿನ್ ಅಂಶ ರಕ್ತಪರಿಚಲನೆಗೆ ಅಡ್ಡಿ ಮಾಡುತ್ತೆ. ಇದು ಬೆನ್ನುಹುರಿಯ ರಕ್ತದ ಸರಬರಾಜನ್ನು ಕಡಿಮೆ ಮಾಡುತ್ತದೆ.
ದೇಹದ ತೂಕ ಹೆಚ್ಚು ಆಗದಂತೆ ನಮ್ಮ ವಯಸ್ಸಿಗೆ ತಕ್ಕಂತೆ ಇರುವಂತೆ ನೋಡಿಕೊಳ್ಳಬೇಕು. ಏಕೆಂದರೆ ದೇಹದ ಭಾರ ಅಧಿಕವಾದರೆ ಬೆನ್ನು ನೋವು ಕಾಡಲು ಶುರುವಾಗುತ್ತದೆ. ತೂಕ ಹೆಚ್ಚಾದರೆ ಕೀಲುಗಳ ಮೇಲೆಯೂ ಒತ್ತಡ ಹೆಚ್ಚುತ್ತದೆ. ಹೀಗಾಗಿ ಬೆನ್ನು ಮೂಳೆಯ ಆರೋಗ್ಯಕ್ಕಾಗಿ ದೇಹದ ಭಾರ ಹೆಚ್ಚಳವಾಗದಂತೆ ಆಹಾರ ಸೇವನೆ ಮಾಡಬೇಕು.
ಬೆನ್ನುಮೂಳೆಯ ಆರೋಗ್ಯಕ್ಕಾಗಿ ಉತ್ತಮ ಭಂಗಿ, ಆರೋಗ್ಯಕರ ತೂಕ ನಿರ್ವಹಣೆ, ನಿಯಮಿತ ವ್ಯಾಯಾಮ ಮತ್ತು ಧೂಮಪಾನ ತ್ಯಜಿಸುವುದು ಮುಖ್ಯ. ತೀವ್ರ ಬೆನ್ನು ನೋವಿಗೆ ನೋವು ನಿವಾರಕಗಳು, ಬಿಸಿ, ತಣ್ಣನೆಯ ಪ್ಯಾಕ್‌ಗಳು ಸಹಾಯ ಮಾಡಬಹುದು. ದೀರ್ಘಕಾಲದ ನೋವಿಗೆ ವೈದ್ಯರ ಸಲಹೆಯೊಂದಿಗೆ ಶಸ್ತ್ರಚಿಕಿತ್ಸೆ ಮಾಡಿಸಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us