/newsfirstlive-kannada/media/media_files/2025/11/24/indian-mother-breast-feeding-to-baby-2025-11-24-18-16-14.jpg)
ಮಗುವಿಗೆ ಎದೆಹಾಲು ಉಣಿಸುತ್ತಿರುವ ತಾಯಿ
ತಾಯಿ ಎದೆಹಾಲು ಅಮೃತಕ್ಕೆ ಸಮ ಎಂಬ ಮಾತಿದೆ. ತಾಯಿಯ ಎದೆಹಾಲೇ ನವಜಾತ ಶಿಶುವಿನ ಜೀವನಕ್ಕೆ ಅತ್ಯಂತ ಸುರಕ್ಷಿತ ಮತ್ತು ಪವಿತ್ರವಾದ ಪೌಷ್ಟಿಕಾಂಶದ ಆಹಾರ. ಆದ್ರೆ ಬಿಹಾರ ರಾಜ್ಯದಲ್ಲಿ ಅಮೃತವೇ ವಿಷವಾಗ್ತಿದೆ. ತಾಯಿಯ ಎದೆ ಹಾಲಿನಲ್ಲಿ ವಿಷಕಾರಿ ಯುರೇನಿಯಂ ಅಂಶ ಪತ್ತೆಯಾಗಿರುವ ಆಘಾಕಾರಿ ಮಾಹಿತಿ ಬಹಿರಂಗವಾಗಿದೆ.
ಪ್ರತಿಷ್ಠಿತ ವಿಜ್ಞಾನ ಜರ್ನಲ್ ನೇಚರ್‌ನಲ್ಲಿ ಪ್ರಕಟವಾದ ಅಧ್ಯಯನವು ರಾಜ್ಯದ ಆರು ಜಿಲ್ಲೆಗಳ ಪ್ರತಿಯೊಬ್ಬ ಹಾಲುಣಿಸುವ ಮಹಿಳೆಯ ಹಾಲಿನಲ್ಲಿ ಯುರೇನಿಯಂ ಕಂಡುಬಂದಿದೆ ಎಂದು ಬಹಿರಂಗಪಡಿಸಿದೆ. ಈ ಆವಿಷ್ಕಾರವು ಕೇವಲ ವೈಜ್ಞಾನಿಕ ದತ್ತಾಂಶವಲ್ಲ, ಆದರೆ ವಿಷವು ಈಗ ಮಕ್ಕಳ ದೇಹವನ್ನು ನೇರವಾಗಿ ಅವರ ತಾಯಿಯ ಮಡಿಲ ಮೂಲಕ ಪ್ರವೇಶಿಸುತ್ತಿದೆ ಎಂಬ ಭಯಾನಕ ಸತ್ಯವನ್ನು ತಿಳಿಸಿದೆ.
- ಬಿಹಾರದಲ್ಲಿ ಅಂತರ್ಜಲ ಮಾಲಿನ್ಯ ಸಮಸ್ಯೆಯಿಂದ ಪರಿಣಾಮ
- ನವಜಾತ ಶಿಶುಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ
- ಡಾ. ಅಶೋಕ್ ಶರ್ಮಾ ಅವರ ನೇತೃತ್ವದಲ್ಲಿ ನಡೆದ ಸಂಶೋಧನೆ
- ಬಿಹಾರ ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆದ ಸಂಶೋಧನೆ
- 2021ರಿಂದ 2024ರ ಜುಲೈ ನಡುವೆ ನಡೆಸಲಾದ ಸಂಶೋಧನೆ
- ಭೋಜ್‌ಪುರ, ಸಮಷ್ಟಿಪುರ, ಬೇಗುಸರಾಯ್, ಖಗೇರಿಯಾ
- ಕಟಿಹಾರ್, ನಳಂದದಲ್ಲಿ 17-35 ವರ್ಷ ವಯಸ್ಸಿನ ಮಾದರಿ ಸಂಗ್ರಹ
- ಸಂಗ್ರಹಿಸಿದ ಎದೆ ಹಾಲಿನ ಎಲ್ಲಾ ಮಾದರಿಯಲ್ಲಿ ಯುರೇನಿಯಂ ಪತ್ತೆ'
- ಬಿಹಾರದ ಖಗೇರಿಯಾದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕಂಡುಬಂದಿದೆ
- ನಳಂದಾ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಪ್ರಮಾಣ ಕಂಡುಬಂದಿದೆ
- ಒಂದೇ ಮಾದರಿಯಲ್ಲಿ ಕತಿಹಾರ್‌ನಲ್ಲಿ ಅತ್ಯಧಿಕ ಮಟ್ಟ ಪತ್ತೆ
ಎದೆ ಹಾಲಿನಲ್ಲಿ ಯುರೇನಿಯಂಗೆ ಯಾವುದೇ ಅನುಮತಿಸುವ ಮಿತಿಯಿಲ್ಲ. ಸುಮಾರು 70% ಶಿಶುಗಳು ಸಂಭಾವ್ಯವಲ್ಲದ ಕಾರ್ಸಿನೋಜೆನಿಕ್ ಆರೋಗ್ಯ ಸಮಸ್ಯೆ ಎದುರಿಸಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ ತಜ್ಞರು ತಿಳಿಸಿದ್ದಾರೆ. ಭಾರತೀಯ ಭೂವೈಜ್ಞಾನಿಕ ಸಮೀಕ್ಷೆಯೂ ಕಾರಣವನ್ನು ತನಿಖೆ ಮಾಡುತ್ತಿದೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಒಟ್ಟಾರೆ.. ಪುಟ್ಟ ಮಕ್ಕಳಿಗೆ ಅಮೃತವಾಗಬೇಕೆದ್ದ ತಾಯಿಯ ಎದೆ ಹಾಲು ಕೂಡ ವಿಷ ಆಗಿರೋದು ನಿಜಕ್ಕೂ ದುರಂತ.. ವಿಷವು ಈಗ ಮಕ್ಕಳ ದೇಹವನ್ನು ನೇರವಾಗಿ ಅವರ ತಾಯಿಯ ಮಡಿಲ ಮೂಲಕವೇ ಪ್ರವೇಶಿಸುತ್ತಿದೆ ಎಂಬ ಭಯಾನಕ ಸತ್ಯವನ್ನು ತಿಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us